ಚಿಕ್ಕಮಗಳೂರು ನ್ಯೂಸ್

Chikmgalur News

ಕಾಫಿ ಕಣಜದ ಸುದ್ದಿಜಾಲ

ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಆ. 24 ರಂದು ಮೌನ ಮೆರವಣಿಗೆ

ಚಿಕ್ಕಮಗಳೂರು: ಇತ್ತೀಚಿಗೆ ಕೊಲ್ಕತ್ತಾದಲ್ಲಿ ನಡೆದ ಘಟನೆ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಇನ್ನರ್ ವೀಲ್ ಕ್ಲಬ್ ಆಶಯದಲ್ಲಿ ಆ.24 ರಂದು ಚಿಕ್ಕಮಗಳೂರಿನಲ್ಲಿ ಮೌನ ಮೆರವಣಿಗೆ ನಡೆಯಲಿದೆ. ಅಂದು ಬೆಳಿಗ್ಗೆ 11 ಕ್ಕೆ ಹನುಮಂತಪ್ಪ ವೃತ್ತದಿಂದ ಹೊರಡುವ ಮೆರವಣಿಗೆ ಆದಾದ್ ಮೈದಾನ ತಲುಪಲಿದ್ದು ಅಲ್ಲಿ ಬೀದಿ ನಾಟಕ ಏರ್ಪಡಿಸಲಾಗಿದೆ. ಸಹಿ ಸಂಗ್ರಹ ಚಳವಳಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕ್ಲಬ್ಬಿನ ಪದಾಧಿಕಾರಿಗಳಾದ ಕವಿತಾ ನಿಯತ್ , […]

ಚಿಕ್ಕಮಗಳೂರು ನಗರಸಭೆ : ಅನುಭವಿಗಳಿಗೆ ಮಣೆ ಹಾಕಲು ಚಿಂತನೆ

ಚಿಕ್ಕಮಗಳೂರು: ಇಲ್ಲಿನ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಅನುಭವಿಗಳಿಗೆ ಮಣೆ ಹಾಕಲು ಬಿಜೆಪಿ – ಜೆಡಿಎಸ್ ಮೈತ್ರಿಕೂಟ ಚಿಂತನೆ ನಡೆದಿದೆ. ಆ 22 ರಂದು ಮಧ್ಯಾಹ್ನ 1 ಗಂಟೆಯ ಬಳಿಕ ಚುನಾವಣೆ ನಡೆಯಲಿದ್ದು, ನಾಲ್ವರು ಬಿರುಸಿನ ಲಾಬಿ ನಡೆಸುತ್ತಿದ್ದಾರೆ. ಬಿಜೆಪಿ – ಜೆಡಿಎಸ್ ಮೈತ್ರಿಕೂಟಕ್ಕೆ ಅಗತ್ಯ ಸಂಖ್ಯಾ ಬಲ ಇದ್ದು, ನಾಲ್ವರು ಸದಸ್ಯರನ್ನು ಸೆಳೆಯಲು ಕಾಂಗ್ರೆಸ್ ನಡೆಸುತ್ತಿರುವ ಯತ್ನ ಫಲ ನೀಡದು ಎನ್ನುವ ಆಶಾಭಾವನೆ ಮೈತ್ರಿಕೂಟಕ್ಕೆ ಇದೆ. ಕಳೆದ ಬಾರಿ ಅನುಭವಿಸಿದ “ಕಹಿ”ಯನ್ನು ಗಮನದಲ್ಲಿ ಇಟ್ಟುಕೊಂಡು ಎಚ್ಚರಿಕೆಯ […]

ಮಲೆನಾಡಿನ ಉಳಿವಿಗೆ ರಾಜಿರಹಿತ ಹೊರಾಟ ಅಗತ್ಯ: ಗುರುಮೂರ್ತಿ ಜೋಗಿಬೈಲು

ಮಲೆನಾಡಿನಲ್ಲಿ ಒತ್ತುವರಿ ತೆರವು ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ವೇದಿಕೆಗಳನ್ನೇರುವ ರಾಜಕಾರಣಿಗಳು “ಉಗ್ರ”ಭಾಷಣಗಳ ಮೂಲಕ ಚಪ್ಪಾಳೆ ಗಿಟ್ಟಿಸುತ್ತಾರೆ. ಜೀವನ ನಡೆಸುವ ಅನಿವಾರ್ಯತೆಗೆ ಒಂದಷ್ಟು ಜಾಗ ಸಾಗುವಳಿ ಮಾಡಿ ಸರ್ಕಾರ ಹೇಳಿದಾಗಲೆಲ್ಲ ವಿವಿಧ ಅರ್ಜಿ ನಮೂನೆಗಳಲ್ಲಿ ಅರ್ಜಿ ಸಲ್ಲಿಸಿ ಹಕ್ಕುಪತ್ರಕ್ಕಾಗಿ ಕಾಯುತ್ತಲೇ ತಲೆ ಹಣ್ಣಾಗಿ ದಾರೆ. ತಾವು ಕಟ್ಟಿಕೊಂಡು ವಾಸವಾಗಿರುವ ಮನೆಗೆ ಹಕ್ಕುಪತ್ರ ಸಿಗಬಹುದೇನೋ ಎಂದು ಅರ್ಜಿ ಕೊಟ್ಟು ಕಾಯುತ್ತಿರುವ ಭೂರಹಿತ ಕೃಷಿ ಕಾರ್ಮಿಕರು ಒತ್ತುವರಿ ತೆರವಿನ ಭೀತಿಯಿಂದ ಪ್ರತಿಭಟನಾ ಸಭೆಗಳಿಗೆ ಬರುತ್ತಾರೆ. ಜೀವನ ನಡೆಸಲು ಸಾಕಷ್ಟು ಜಮೀನು ಇದ್ದೂ […]