ವೈದ್ಯ ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಬೃಹತ್ ಮೌನ ಮೆರವಣಿಗೆ
ಚಿಕ್ಕಮಗಳೂರು: ಇತ್ತೀಚಿಗೆ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಇನ್ನರ್ ವೀಲ್ ಆಶಯದಲ್ಲಿ ಬೃಹತ್ ಮೌನ ಮೆರವಣಿಗೆ ನಡೆಯಿತು. ತಾಲೂಕ ಕಚೇರಿಯಿಂದ ಆಜಾದ್ ಮೈದಾನದವರೆಗೆ ನಡೆದ ಮೆರಣಿಗೆಯಲ್ಲಿ ಮಹಿಳೆಯರು ವಿದ್ಯಾರ್ಥಿಗಳು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಘಟನೆಯನ್ನು ಖಂಡಿಸಿ ನ್ಯಾಯಕ್ಕೆ ಒತ್ತಾಯಿಸಿ ಭಿತ್ತಿ ಪತ್ರಗಳನ್ನು ಹಿಡಿದು ಸಾಗಿದ ಮೆರವಣಿಗೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರೂ ಪಾಲ್ಗೊಂಡು ನ್ಯಾಯಕ್ಕಾಗಿ ಒತ್ತಾಯಿಸಿದರು. ಆಜಾದ್ ಮೈದಾನದಲ್ಲಿ ಬೀದಿ ನಾಟಕ ಪ್ರದರ್ಶನವು ನಡೆಯಿತು. ಬಹುತೇಕ ಮಹಿಳೆಯರು ಕಪ್ಪುಬಟ್ಟೆ ಧರಿಸಿ ಪಾಲ್ಗೊಂಡು ಮೌನ […]
ಸೆ.೨೮ – ೨೯ ರಂದು ಕಸಾಪ ತಾಲ್ಲೂಕು ಸಮ್ಮೇಳನ : ತಮ್ಮಯ್ಯ
ಚಿಕ್ಕಮಗಳೂರು :- ತಾಲ್ಲೂಕು ಮಟ್ಟದ ಐದನೇ ಕನ್ನಡ ಸಾಹಿತ್ಯ ಸಮ್ಮೇಳನ ಸೆ.೨೮ ಮತ್ತು ೨೯ ರಂದು ನಗರದ ಕುವೆಂಪು ಕಲಾ ಮಂದಿರದಲ್ಲಿ ನಡೆಯಲಿದೆ ಎಂದು ಶಾಸಕರೂ ಆದ ಸಮ್ಮೇಳನ ಗೌರವಾಧ್ಯಕ್ಷ ಎಚ್.ಡಿ. ತಮ್ಮಯ್ಯ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನ ಕುರಿತ ಪೂರ್ವ ಭಾವಿ ಸಭೆಯಲ್ಲಿ ಭಾಗವಹಿಸಿ ಅಂದಿನ ಕಾರ್ಯ ಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ನೆರವೇರಿಸಲಿದ್ದಾರೆ ಎಂದರು, ಹೆಸರಾಂತ ಸಾಹಿತಿಗಳನ್ನು ಆಹ್ವಾನಿಸಿ ಎರಡು ದಿನಗಳ ಕಾಲ ಸಾಹಿತ್ಯದ […]
ಸಹಾಯ ಹಸ್ತದ ಕೊರತೆ : ಭೀಮೇಶ್ವರ ಜೋಶಿ ವಿಷಾದ
ಚಿಕ್ಕಮಗಳೂರು-ಇಂದು ಸಮಾಜದ ಕೆಲವರಲ್ಲಿ ಸಹಾಯ ಹಸ್ತದ ಕೊರತೆ ಕಾಣುತ್ತಿದೆ ಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಡಾ. ಜಿ.ಭೀಮೇಶ್ವರ ಜೋಶಿ ವಿಷಾದಿಸಿದರು. ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಆಶಾಕಿರಣ ಚಾರಿಟಬಲ್ ಟ್ರಸ್ಟ್ ಮತ್ತು ಮೆಕೋಶಾ ಸಂಸ್ಥೆ ಯಿಂದ ಏರ್ಪಡಿಸಿದ್ದ ಮಲೆನಾಡು ಮಹೋತ್ಸವ ಚಾರಿಟಿ ಎಕ್ಸೊ÷್ಪÃ ೨೦೨೪ ಉದ್ಘಾಟಿಸಿ ಮಾತನಾಡಿದರು. ಇಲ್ಲಿನ ಆಶಾಕಿರಣ ಅಂಧಮಕ್ಕಳ ಶಾಲೆಗೆ ಭೇಟಿಕೊಟ್ಟು ಅಲ್ಲಿರುವವರ ಸೇವೆ ಮಾಡಿದರೆ ವಿಶೇಷವಾದ ದೇವರ ಅನುಗ್ರಹಕ್ಕೆ ಪಾತ್ರರಾಗುವ ಭಾಗ್ಯ ದೊರೆಯುತ್ತದೆ ಎಂದು ತಿಳಿಸಿದರು. ಒಂದು ಜೀವ ಸೃಷ್ಟಿಯಾಗುವ […]