ಚಿಕ್ಕಮಗಳೂರು ನ್ಯೂಸ್

Chikmgalur News

ಕಾಫಿ ಕಣಜದ ಸುದ್ದಿಜಾಲ

ಸೆ. ೧೫ ರಂದು ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನ

ಚಿಕ್ಕಮಗಳೂರು: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಸೆ. ೧೫ ರಂದು ಆಚರಿಸಲಾಗುವುದೆಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು. ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅಂದು ಬೀದರ್‌ನಿಂದ ಚಾಮರಾಜನಗರದವರೆಗೆ ಏಕಕಾಲದಲ್ಲಿ ಮಾನವ ಸರಪಳಿ ರಚಿಸಿ ಸಂವಿಧಾನದ ಪೀಠಿಕೆಯನ್ನು ಬೋಧಿಸುವ ಮೂಲಕ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಮಾಗಡಿ ಕೈಮರದಿಂದ ಚಿಕ್ಕಮಗಳೂರು, ಕಡೂರು, ಅಜ್ಜಂಪುರ, ಹಾಗೂ ತರೀಕೆರೆ ಮಾರ್ಗವಾಗಿ ಜಿಲ್ಲೆಯ ಗಡಿ ಭಾಗವಾದ ಎಂ.ಸಿ ಹಳ್ಳಿವರೆಗೆ ನಾಲ್ಕು ತಾಲ್ಲೂಕುಗಳ ರಾಜ್ಯ ಹೆದ್ದಾರಿಯಲ್ಲಿ ಮಾನವ ಸರಪಳಿಯನ್ನು ರಚಿಸಲಾಗುತ್ತದೆ ಎಂದರು […]

ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಕೆ ಆರೋಪ : ಪ್ರತಿಭಟನೆ

ಚಿಕ್ಕಮಗಳೂರು: ದಲಿತರ ಕೇರಿಯ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿ ಕಬಳಿಕೆ ಮಾಡಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಯಿತು. ಉಪ್ಪಳ್ಳಿ ಶಾಂತಿನಗರ ಗ್ರಾಮದ ಸರ್ವೆ ನಂಬರ್ 319 ರಲ್ಲಿ 3 ಎಕರೆ 25 ಗುಂಟೆ ಪ್ರದೇಶವನ್ನು ನಕಲಿ ದಾಖಲೆ ಸೃಷ್ಟಿ, ಖರೀದಿ ಮಾಡಿ ಲೇಔಟ್ ನಿರ್ಮಿಸಲಾಗಿದೆ ಎಂದು ಆರೋಪಿಸಿದರು. ಲೇಔಟ್ ರದ್ದುಪಡಿಸಿ ಈ ಭಾಗದಲ್ಲಿ ಇರುವ ಭೂ ರಹಿತರಿಗೆ ವಿತರಿಸುವಂತೆ ಒತ್ತಾಯಿಸಿ ವಿವೇಕಾನಂದ ಯುವಕ ಸಂಘದ ಆಶಯದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ […]

2015ರ ನಂತರದ ಮತ್ತು ದೊಡ್ಡ ಅರಣ್ಯ ಒತ್ತುವರಿ ಮಾತ್ರ ತೆರವು: ಈಶ್ವರ ಖಂಡ್ರೆ ಸ್ಪಷ್ಟನೆ

ಬೆಂಗಳೂರು : ಅರಣ್ಯ ಒತ್ತುವರಿ ತೆರವು ಕಾನೂನು ಪ್ರಕ್ರಿಯೆಯಾಗಿದ್ದು, ದೊಡ್ಡ ಮತ್ತು 2015ರ ನಂತರದ ಅರಣ್ಯ ಒತ್ತುವರಿಯನ್ನು ಮಾತ್ರ ತೆರವು ಮಾಡಿಸಲಾಗುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ ಮುಗ್ದ ಜನರು ಯಾವುದೇ ವದಂತಿಗಳಿಗೆ ಮರುಳಾಗಬಾರದು ಎಂದಿರುವ ಅವರು ಮಲೆನಾಡು ಮತ್ತು ಕರಾವಳಿಯಲ್ಲಿ ಕೆಲವರು ಅರಣ್ಯ ಒತ್ತುವರಿ ತೆರವಿಗೆ ವಿರೋಧಿಸುತ್ತಿದ್ದು, ಈ ವಿಚಾರದಲ್ಲಿ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬೇಸರ ಹೊರ ಹಾಕಿದ್ದಾರೆ. ಸರ್ಕಾರ ಬಡವರ ಭೂಮಿ ಒತ್ತುವರಿ ತೆರವು […]

“ಸಣ್ಣ ರೈತರ ಜಮೀನಿಗೆ ಹಕ್ಕುಪತ್ರ  ನೀಡಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು “

ಅವರು ಬೆಂಗಳೂರಿನಲ್ಲಿಯೇ ಬದುಕು ಕಟ್ಟಿಕೊಳ್ಳಬಹುದಿತ್ತು. ಆದರೆ ಕೃಷಿ ಮತ್ತು ಹಳ್ಳಿಯ ಬದುಕಿನೆಡೆಗಿದ್ದ ತುಡಿತ ಮಲೆನಾಡಿನ ಆ ಹಳ್ಳಿಗೆ ಅವರನ್ನು ಕರೆತಂತು. ಕೃಷಿಗೆ ಬೇಕಾದ ಜಮೀನು ಇರಲಿಲ್ಲ. ಜಮೀನು ಕೊಳ್ಳುವಷ್ಟು ಹಣವೂ ಇರಲಿಲ್ಲ . ಸಂಬಂಧಿಯೊಬ್ಬರ ಸ್ವಲ್ಪ ಜಮೀನು ಇತ್ತು ದಾಖಲೆಗಳು ಇರಲಿಲ್ಲ. ಅದರಿಂದಾಗಿಯೇ ಕೃಷಿ ಮಾಡಬೇಕೆಂದಿದ್ದವರಿಗೆ ಕಡಿಮೆ ಬೆಲೆಗೆ ಆ ಜಮೀನು ಕೊಟ್ಟರು. ಅಲ್ಲಿ ಉತ್ಪತ್ತಿ ಏನೂ ಇರಲಿಲ್ಲ. ಸತತ ಪರಿಶ್ರಮದಿಂದ ಮೂವತ್ತು ವರ್ಷಗಳಲ್ಲಿ ಐದು ಎಕರೆಯಷ್ಟು ತೋಟ ಮಾಡಿದರು. ಅಡಿಕೆಗೆ ಹಳದಿ ಎಲೆ ರೋಗ ಇರುವ […]