ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ: ಸಲಹಾ ಸಮಿತಿ ಸದಸ್ಯರಾಗಿ ಸುನಿತಾ ಜಗದೀಶ್
ಚಿಕ್ಕಮಗಳೂರು: ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಸಲಹಾ ಸಮಿತಿ ಸದಸ್ಯರಾಗಿ ಸುನಿತಾ ಜಗದೀಶ್ ನೇಮಕ ಗೊಂಡಿದ್ದಾರೆ. ಕಡೂರು ತಾಲೂಕು ಹಿರೇನಲ್ಲೂರಿನವರಾದ ಸುನಿತಾ ಕಳೆದ 23 ವರ್ಷಗಳಿಂದ ತಮ್ಮದೇ ವಿದ್ಯಾ ಸಂಸ್ಥೆ ಮುಖಾಂತರ ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ . 10 ವರ್ಷಗಳ ಕಾಲ ಹಿರೇನಲ್ಲೂರು ಗ್ರಾಮ ಪಂಚಾಯಿತಿ, APMCಸದಸ್ಯರಾಗಿ, ಸುಗ್ರಾಮ ಗ್ರಾಮ ಪಂಚಾಯಿತಿ ಚುನಾಯಿತ ಮಹಿಳಾ ಪ್ರತಿನಿಧಿಗಳ ಸಂಘದ ರಾಜ್ಯ ಕಾರ್ಯದರ್ಶಿಯು ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಬಿಜೆಪಿಯಲ್ಲಿ ಶಕ್ತಿ ಕೇಂದ್ರ ಅಧ್ಯಕ್ಷರಾಗಿ, […]
ಬ್ಯಾರವಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಪುಟ್ಟೇಗೌಡ ಆಯ್ಕೆ-ಅಭಿನಂದನೆ
ಚಿಕ್ಕಮಗಳೂರು-ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬ್ಯಾರವಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಸಿ.ಸಿ ಪುಟ್ಟೇಗೌಡ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ. ನೂತನ ಅಧ್ಯಕ್ಷರನ್ನು ಕೆಪಿಸಿಸಿ ವಕ್ತಾರ ಹೆಚ್.ಹೆಚ್ ದೇವರಾಜ್ , ಮಾಜಿ ಸಚಿವ ಬಿ.ಬಿ ನಿಂಗಯ್ಯ ಅಭಿನಂದಿಸಿ ಪತಿ-ಪತ್ನಿ ಮೂರು ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಬ್ಯಾರವಳ್ಳಿ ಪಂಚಾಯಿತಿ ಜಿಲ್ಲೆಯಲ್ಲಿ ಇತಿಹಾಸ ಸೃಷ್ಟಿಸಿದೆ ಎಂದರು. ನೂತನ ಅಧ್ಯಕ್ಷ ಪುಟ್ಟೇಗೌಡ ಮಾತನಾಡಿ, ದ್ವೇಷದ ರಾಜಕಾರಣ ಮಾಡದೆ ಒಂದು ಮಾದರಿ ಗ್ರಾಮ ಪಂಚಾಯಿತಿ ಮಾಡಲು ಗುರಿ […]
ಬ್ಯಾಂಕಿನಲ್ಲಿ ಗೋಲ್ ಮಾಲ್ : ಇನ್ನೂ ಸಿಗದ “ಚಿನ್ನ” – ಪ್ರತಿಭಟನೆ
ಚಿಕ್ಕಮಗಳೂರು : ಇಲ್ಲಿನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆದವರ ಚಿನ್ನವನ್ನು ತಕ್ಷಣ ಹಿಂದಿರುಗಿಸುವಂತೆ ರೈತ ಸಂಘ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಗುರು ಶಾಂತಪ್ಪ ಇಲ್ಲಿನ ಸೆಂಟ್ರಲ್ ಆಫ್ ಇಂಡಿಯಾದಲ್ಲಿ 145 ಗ್ರಾಹಕರು ಚಿನ್ನವನ್ನು ಅಡವಿಟ್ಟು ಸಾಲ ಪಡೆದಿದ್ದಾರೆ ಎಂದರು. ಸಾಕಷ್ಟು ಗ್ರಾಹಕರು ಸಾಲವನ್ನು ತೀರಿಸಿದ್ದರೂ ಚಿನ್ನವನ್ನು ನೀಡಲು ಹಿಂದೇಟು ಹಾಕಿದಾಗ ಸಂಶಯಗೊಂಡು ಪ್ರಶ್ನಿಸಿದಾಗ ಬ್ಯಾಂಕಿನಲ್ಲಿ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು. ಬ್ಯಾಂಕಿನ ಅಂದಿನ ವ್ಯವಸ್ಥಾಪಕರು […]