ಚಿಕ್ಕಮಗಳೂರು ನ್ಯೂಸ್

Chikmgalur News

ಕಾಫಿ ಕಣಜದ ಸುದ್ದಿಜಾಲ

ಗುಡ್ಡ ,ಭೂಕುಸಿತಕ್ಕೆ ಅವೈಜ್ಞಾನಿಕ ಕಾಮಗಾರಿ ಕಾರಣ: ವರದಿಯಲ್ಲಿ ಉಲ್ಲೇಖ

ಚಿಕ್ಕಮಗಳೂರು: ಗುಡ್ಡ ,ಭೂಕುಸಿತಕ್ಕೆ ಅವೈಜ್ಞಾನಿಕ ಕಾಮಗಾರಿ, ಅಧಿಕ ಸಂಚಾರದ ಒತ್ತಡ ಕಾರಣ ಎಂದು ಜಿಯೋಲಾಜಿಕಲ್ ಸರ್ವೇ ತಂಡ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿ ಹಲವು ನಿಯಮ, ಕಟ್ಟುಪಾಡು ಅನುಸರಿಸಲು ಸೂಚಿಸಿದೆ. ಕೇರಳದ ವಯನಾಡಿನಲ್ಲಿ ಸಂಭವಿಸಿದ ಗುಡ್ಡ ಕುಸಿತದ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ (Karnataka Government) ಮಲೆನಾಡು ಭಾಗದ ಅಪಾಯಕಾರಿ ಸ್ಥಳಗಳ ಪಟ್ಟಿ ನೀಡುವಂತೆ ಕೇಳಿತ್ತು. ಆಗಸ್ಟ್ನಲ್ಲಿ ಚಂದ್ರದ್ರೋಣ ಪರ್ವತಗಳ ಸಾಲಿನ ಕವಿಕಲ್ ಗಂಡಿ, ಮುಳ್ಳಯ್ಯನಗಿರಿ ಮಾರ್ಗ, ಬಾಬಾ ಬುಡನ್ ಗಿರಿ ಸೇರಿದಂತೆ ಅನೇಕ ಕಡೆಗಳಲ್ಲಿ ಜಿಯೋಲಾಜಿಕಲ್ […]

ಮಾಧ್ಯಮದವರ ಮೇಲೆ ಪೊಲೀಸ್ ಬಲಪ್ರಯೋಗ -ಕ್ರಮಕ್ಕೆ ಒತ್ತಾಯ

ಚಿಕ್ಕಮಗಳೂರು:ದಸರಾ ಜಂಬೂ ಸವಾರಿ ಸಂದರ್ಭದಲ್ಲಿ ಪತ್ರಿಕಾ ಛಾಯಾಗ್ರಾಹಕರ ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿ ಪತ್ರ ಬರೆಯಲಾಗಿದೆ.ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ಅಮಾನತ್ತಿಗೆ ಒತ್ತಾಯಿಸಿ ಪತ್ರಕರ್ತರ ಸಂಘ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿಗೆ ಪತ್ರ ಬರೆದಿದೆ.ನಾಡಹಬ್ಬ ದಸರಾ ಉತ್ಸವದ ಜಂಬೂ ಸವಾರಿ ಮೆರವಣಿಗೆ ಸಂದರ್ಭದಲ್ಲಿ ಅರಮನೆ ಆವರಣದಲ್ಲಿ ಪೊಲೀಸ್ ಸಿಬ್ಬಂದಿ‌ ವಿಜಯವಾಣಿ ಪತ್ರಿಕೆಯ ಹಿರಿಯ ಛಾಯಾಗ್ರಾಹಕ ಎಚ್.ಕೆ. ಚಂದ್ರು ಅವರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಮಾಡಿರುವುದನ್ನು ಪತ್ರಕರ್ತರ ಸಂಘ ಖಂಡಿಸಿದೆ.ವಿಶ್ವ ವಿಖ್ಯಾತ […]

“ನಾಲಗೆ” ಆಯುಧಗಳ ಪಿತಾಮಹ

ನಾಲಗೆ ಒಳ್ಳೆಯದ್ದು ಮತ್ತು ಕೆಟ್ಟದ್ದು ಎರಡನ್ನೂ ಮಾಡಿದೆ ಮತ್ತು ಮಾಡುತ್ತದೆ. ಯಾವುದೇ ದೇಶದ ಪ್ರಧಾನಿಯೊಬ್ಬ “ನಾಲಗೆ” ಹರಿಬಿಟ್ಟರೆ ದೇಶದೇಶಗಳ ನಡುವೆ ಯುದ್ಧವೇ ನಡೆದು ಮಾರಣ ಹೋಮವೇ ನಡೆದ ಉದಾಹರಣೆ ಇವೆ. “ನಾಲಗೆಗೆ” ಮೂಳೆ ಇಲ್ಲ; ಆದರೆ ತಪ್ಪು ಮಾತನಾಡುವ ಮೂಲಕ ಮೂಳೆ ಮುರಿಯುವ ಮತ್ತು ಮುರಿಸುವ ಶಕ್ತಿ ಇದೆ. ನೆರೆಹೊರೆಯವರನ್ನು, ಸಂಬಂಧಿಕರನ್ನು, ರಾಜಕಾರಣಿಗಳು ಸೇರಿದಂತೆ ಅತ್ತೆಸೊಸೆ ನಾದಿನಿ ಜಗಳದಿಂದ ಹಿಡಿದು ಅಣ್ಣತಮ್ಮಂದಿರನ್ನು ವಿಭಾಗಿಸುವುದೇ “ನಾಲಗೆ”, ನಕಲಿ ಜೋತಿಷ್ಯ, ಪೊಳ್ಳು ಭವಿಷ್ಯ, ಮೌಢ್ಯದ ಮಂತ್ರಗಳು, ಸುಳ್ಳು ಮೋಸದ ಮಾತು, […]

ಕ್ರಾಂತಿಕಾರಿ ವಿದ್ವಾಂಸ, ಹೋರಾಟಗಾರ ಪ್ರೊ. ಜಿ. ಎನ್. ಸಾಯಿಬಾಬಾ….. ಇನ್ನಿಲ್ಲ..

ಫಾದರ್ ಸ್ಟಾನ್ ಸ್ವಾಮಿಯ ನಂತರ ಮೋದಿ ಸರ್ಕಾರದ ಅಮಾನುಷ ಕ್ರೌರ್ಯಕ್ಕೆ ಮತ್ತೊಬ್ಬ ಜನಮಿತ್ರನ ಬಲಿ ಕ್ರಾಂತಿಕಾರಿ ಸಾಯಿಬಾಬಾ ಅವರನ್ನು ವಿನಾಕಾರಣ ಹತ್ತು ವರ್ಷಗಳ ಕಾಲ ಜೈಲಿನಲ್ಲಿಟ್ಟು ಚಿತ್ರಹಿಂಸೆ ನೀಡಿತ್ತು. ಹತ್ತು ವರ್ಷಗಳ ನಂತರ ಇತ್ತೀಚೆಗೆ ತಾನೇ ಅವರನ್ನು ಕೋರ್ಟು ನಿರ್ದೋಷಿ ಎಂದು ಬಿಡುಗಡೆ ಮಾಡಿತ್ತು.. ಆದರೆ ಶೇ. 90 ರಷ್ಟು ಅಂಗ ವೈಕಲ್ಯ ಹೊಂದಿದ್ದ ಅವರ ದೇಹ ಹತ್ತು ವರ್ಷದ ನರಕ ಸದೃಷ ಜೈಲುವಾಸ ಮತ್ತು ಸರ್ಕಾರ ಹಾಗೂ ಜೈಲು ಅಧಿಕಾರಿಗಳ ದುರುದ್ದೇಶ ಪೂರ್ವಕ ನಿರ್ಲಕ್ಷ್ಯದಿಂದಾಗಿ ಇನ್ನಷ್ಟು […]