ಚಿಕ್ಕಮಗಳೂರು ನ್ಯೂಸ್

Chikmgalur News

ಕಾಫಿ ಕಣಜದ ಸುದ್ದಿಜಾಲ

ಮೂಗ್ತಿಹಳ್ಳಿ ಗ್ರಾ.ಪಂ ನೂತನ ಉಪಾಧ್ಯಕ್ಷರಾಗಿ ಅಂಬಿಕಾ ಮಧುಸೂಧನ್ 

ಚಿಕ್ಕಮಗಳೂರು: ತಾಲ್ಲೂಕಿನ ಮೂಗ್ತಿಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಂಬಿಕಾ ಮಧುಸೂಧನ್  ಅವಿರೋಧವಾಗಿ ಆಯ್ಕೆಯಾದರು.ಚುನಾವಣಾಧಿಕಾರಿ ರಂಗನಾಥ್ ಅವಿರೋಧ ಆಯ್ಕೆಯನ್ನು ಘೋಷಿಸಿದರು. ನೂತನ ಉಪಾಧ್ಯಕ್ಷೆ ಅಂಬಿಕಾ ಮಧುಸೂದನ್, ಮಾತನಾಡಿ ಸರ್ವ ಸದಸ್ಯರ ಸಹಕಾರದಿಂದ  ಶುದ್ಧ ಕುಡಿಯುವ ನೀರು,ಸುರಕ್ಷಿತ ರಸ್ತೆ ಹಾಗೂ ವಿದ್ಯುತ್ ಕಂಬಗಳನ್ನು ಅಳವಡಿಸಿ ನಿವಾಸಿಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.ಸoವಿಧಾನದ ಅಧಿಕಾರದಡಿ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಿಗೆ ಸರ್ಕಾರಗಳ ಸೌಲಭ್ಯಗಳನ್ನು  ಸರ್ವರಿಗೂ ಸಮಾನವಾಗಿ ಹಂಚುವ ಮೂಲಕ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.ಗ್ರಾ.ಪಂ. ಅಧ್ಯಕ್ಷ ಹೂವಪ್ಪಶೆಟ್ಟಿ, ಸದಸ್ಯರು […]

ಸ್ಕಾಟ್ ಲ್ಯಾಂಡಿನಲ್ಲಿ  ಉನ್ನತ ಸ್ಥಾನಪಡೆದ ಸಹದೇವ್ ಪಟೇಲ್          

           .  ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಉದುಸೆ ಗ್ರಾಮದ ಯುವಕ ಸ್ಕಾಟ್ ಲ್ಯಾಂಡಿನಲ್ಲಿ ಎಂ.ಎಸ್ಸಿ ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.ಯು.ಪಿ.ಸಹದೇವ್ ಪಟೇಲ್ ಯುನೈಟೆಡ್ ಕಿಂಗ್ ಡಂ, ಸ್ಕಾಟ್ ಲ್ಯಾಂಡಿನ ಹೆರಿಯಟ್ ವ್ಯಾಟ್ ವಿಶ್ವ ವಿದ್ಯಾಲಯದಲ್ಲಿ ಎಂ.ಎಸ್ಸಿ ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.ಉದುಸೆ ಗ್ರಾಮದ ಯು.ಇ.ಪ್ರಭಾಕರ್ ಹಾಗೂ ಬಿ.ಜಿ.ಪೂರ್ಣ ದಂಪತಿಗಳ ಪುತ್ರ.ಇವರ  ಸಾಧನೆಗೆ ಗ್ರಾಮಸ್ಥರು ವಿದ್ಯಾಭಿಮಾನಿಗಳು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

ಚೌದಂಬರ ವೃಕ್ಷ ಪರಿಕ್ರಮಕ್ಕೆ ಅವಕಾಶ : ವಿಶ್ವ ಹಿಂದೂ ಪರಿಷತ್ ಒತ್ತಾಯ

ಚಿಕ್ಕಮಗಳೂರು:ದತ್ತಮಾಲಾ ಅಭಿಯಾನಕ್ಕೆ 25 ವರ್ಷದ  ರಜತಮಹೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಪರಿಸರದಲ್ಲಿ ಇರುವ ಚೌದಂಬರ ವೃಕ್ಷ ಪರಿಕ್ರಮಕ್ಕೆ ಅವಕಾಶ ನೀಡಬೇಕೆಂದು ವಿಶ್ವ ಹಿಂದು ಪರಿಷತ್ ಆಗ್ರಹಿಸಿದೆಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ ವೆಲ್  ದತ್ತ ಜಯಂತಿ ಹಿನ್ನೆಲೆಯಲ್ಲಿ ಸಂಘಟನೆ ಕೋರಿರುವ ವ್ಯವಸ್ಥೆ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿದರು.ಚಂದ್ರದ್ರೋಣ ಪರ್ವತದ  ಕ್ಷೇತ್ರದಲ್ಲಿ ಇರುವ ಔದಂಬರ ವೃಕ್ಷ ವೈಜ್ಞಾನಿಕ, ಧಾರ್ಮಿಕವಾಗಿ,ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಹತ್ವವಾಗಿದ್ದು, ದತ್ತಾತ್ರೇಯರ ತಪಸ್ಸು ಮಾಡಿದ […]

ಸಾಮಾಜಿಕ ನ್ಯಾಯಕ್ಕಾಗಿ ಒತ್ತಾಯಿಸಿ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ

ಚಿಕ್ಕಮಗಳೂರು: ಹಿಂದುಳಿದವರು ಅಲ್ಪಸಂಖ್ಯಾತರ ಬಗ್ಗೆ ಕೇವಲ ನೆಪ ಮಾತ್ರದ ಮೌಖಿಕ ಹೇಳಿಕೆ ನೀಡಿ ಕಣ್ಣೊರೆಸುವ ತಂತ್ರ  ಮಾಡುತ್ತಿರುವ ಸರ್ಕಾರದ ನೀತಿ ಖಂಡಿಸಿ,   ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ -2 ಅನ್ನು ಎಸ್‌ಡಿಪಿಐ ಹಮ್ಮಿಕೊಂಡಿದೆಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಅಂಗಡಿ ಚಂದ್ರುಅಹಿಂದ ಸರ್ಕಾರ, ಸಾಮಾಜಿಕ ನ್ಯಾಯದ ಚಾಂಪಿಯನ್ ಎಂದು ಹೇಳುವ  ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತ, ಅಲ್ಪ ಸಂಖ್ಯಾತ, ಮತ್ತು ಹಿಂದುಳಿದ ವರ್ಗಗಳಹಲವು ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಿಲ್ಲ ಎಂದು ಆರೋಪಿಸಿದರು.ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕೂಡಲೇ […]

ಎಸ್.ಎಮ್. ಕೃಷ್ಣ ನಿಧನ: ನಾಳೆ ಸರ್ಕಾರಿ ರಜೆ ಘೋಷಣೆ

ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ನಿಧನ ಹಿನ್ನೆಲೆಯಲ್ಲಿ ನಾಳೆ (ಡಿ.11) ಸರ್ಕಾರಿ ರಜೆ ಘೋಷಿಸಲಾಗಿದೆ.ಮಾಜಿ ರಾಜ್ಯಪಾಲರು, ಮಾಜಿ ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳು ಆಗಿದ್ದ ಎಸ್.ಎಂ. ಕೃಷ್ಣ ಇಂದು ಮುಂಜಾನೆ ನಿಧನರಾಗಿದ್ದು ನಾಳೆ ಅವರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.ಈ ಹಿನ್ನೆಲೆಯಲ್ಲಿ ನಾಳೆ ಎಲ್ಲಾ ಸರ್ಕಾರಿ ಕಚೇರಿ , ಶಾಲಾ ಕಾಲೇಜುಗಳಿಗೆ ( ಖಾಸಗಿ ಅನುದಾನಿತ ಸೇರಿ) ರಜೆ ಘೋಷಿಸಲಾಗಿದೆ.ಡಿ 12 ರವರೆಗೆ ಶೋಕಾಚರಣೆ ಪ್ರಕಟಿಸಲಾಗಿದೆ .

ಸಮ್ಮೇಳನಗಳ ಒಳಗಿನ ಒಣ ಚರ್ಚೆಗಳು ಮತ್ತು ಬಾಡೂಟ ಹೋರಾಟವೂ….

ಕನ್ನಡ ಸಂಸ್ಕೃತಿಯ ಕಂಟಕಗಳಲ್ಲಿ ಪ್ರಮುಖವಾಗಿರುವ ಬ್ರಾಹ್ಮಣಶಾಹಿ ಸಂಸ್ಕೃತಿಯ ಮೇಲಾಧಿಪತ್ಯದ ವಿರುದ್ಧ..ಈವರೆಗಿನ ಸಮ್ಮೇಳನಗಳಭಾಷಣಗಳು -ನಿರ್ಣಯಗಳು ತೋರಲಾಗದ ಪರಿಣಾಮಕಾರಿ ಪ್ರತಿರೋಧವನ್ನು…ಸಾಂಕೇತಿಕವಾಗಿಯೇ ಆದರೂಮಂಡ್ಯದ ಬಾಡೂಟ ಹೋರಾಟ ತೋರಿದೆ….ಈ ಹೋರಾಟ ಸಮ್ಮೇಳನದ ರೂಢಿಗತ ನಡವಳಿಗಳಿಗೆ ಯಾವ ಅಡ್ಡಿಯನ್ನು ಮಾಡುತ್ತಿಲ್ಲ..ಬದಲಿಗೆ ಜಡವಾಗುತ್ತಿದ್ದ ಕನ್ನಡ ಜಾತ್ರೆಗೆ ಹೊಸ ಜನಪರ ಸವಾಲೊಡ್ಡಿ ಅರ್ಥಪೂರ್ಣ ವಾಗುವ ಅವಕಾಶ ನೀಡಿದೆ…ಆದ್ದರಿಂದ ನಾಡಿಗರಿಂದ ನಾಡೋಜರವರೆಗೆ ಈ ಹೋರಾಟವನ್ನು ಬೆಂಬಲಿಸಬೇಕು…ಅದರ ಜೊತೆಗೆಬಾಡೂಟದ ಹೋರಾಟವು  ಬಹುಜನ  ಕನ್ನಡ ಬದುಕು ಬವಣೆ ಮತ್ತು ಸಂಸ್ಕೃತಿಗಳ ಪರ್ಯಾಯ ವೇದಿಕೆಯಾಗಿ ವಿಸ್ತರಿಸಿಕೊಳ್ಳಬೇಕು… -ಶಿವಸುಂದರ್

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ವಿಧಿವಶ: ಹುಟ್ಟೂರಲ್ಲಿ ಅಂತ್ಯಕ್ರಿಯೆ

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ ವಿಧಿವಶರಾಗಿದ್ದಾರೆ.ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸದಾಶಿವನಗರದ ತಮ್ಮ ನಿವಾಸದಲ್ಲಿ ತಡರಾತ್ರಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.ಕರ್ನಾಟಕದ ಹಿರಿಯ ರಾಜಕಾರಣಿಗಳಲ್ಲೊಬ್ಬರು. 1999 ರಿಂದ 2004 ರವರೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಮಹಾರಾಷ್ಟ್ರ ರಾಜ್ಯದ ಮಾಜಿ ರಾಜ್ಯಪಾಲರಾದ ಇವರು, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.ವಿದ್ಯಾಭ್ಯಾಸದ ದೃಷ್ಟಿಯಿಂದ, ಕರ್ನಾಟಕದ ಅತ್ಯಂತ ಹೆಚ್ಚು ಸುಶಿಕ್ಷಿತ ಮುಖ್ಯಮಂತ್ರಿಗಳಲ್ಲಿ ಕೃಷ್ಣ ಒಬ್ಬರು.  ಬಹುಕಾಲ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು, ಬದಲಾದ ರಾಜಕೀಯ ಸನ್ನಿವೇಶಗಳ […]