ಸರ್ಕಾರಿ ನೌಕರ ಸಂಘದ ಅಧ್ಯಕ್ಷ ದೇವೇಂದ್ರ ಅಮಾನತು

ಚಿಕ್ಕಮಗಳೂರು :ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರು ಆದ ಗೃಹ ಮಂಡಳಿ ಬಡಾವಣೆ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ದೇವೇಂದ್ರ ಅವರನ್ನು ಅಮಾನತು ಮಾಡಲಾಗಿದೆ.ಸಂಘದ ಅಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡರ ವಿರುದ್ಧ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿ, ಆಮಿಷ ಒಡ್ಡಿ ನೌಕರರಿಗೆ ಬೆದರಿಕೆ ಹಾಕುತ್ತಿದ್ದಾರೆ ಸೇರಿದಂತೆ ಅನೇಕ ಆಪಾದನೆಗಳನ್ನು ಹೊರಿಸಿ ಸುದ್ದಿಗೋಷ್ಠಿ ನಡೆಸಿದ್ದರು.ಸಾರ್ವಜನಿಕ ಜೀವನಕ್ಕೆ ಕಳಂಕ, ಜನಪ್ರತಿನಿಧಿಗಳ ತೇಜೋವಧೆ ಮಾಡಿದ್ದು ಇವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಎಸ್. ಎಲ್. […]
ಆಟವಾಡುತ್ತಿದ್ದಾಗ ಬಾವಿಗೆ ಬಿದ್ದು ಇಬ್ಬರು ಮಕ್ಕಳು ಸಾವು

ಚಿಕ್ಕಮಗಳೂರು : ಆಟವಾಡುತ್ತಿದ್ದಾಗ ಬಾವಿಗೆ ಬಿದ್ದು 2 ಮಕ್ಕಳು ಸಾವಪ್ಪಿದ ಘಟನೆ ನಡೆದಿದೆಮಧ್ಯಪ್ರದೇಶ ಮೂಲದ ಸುನೀತಾ ಎಂಬುವರ ಸೀಮಾ (6), ರಾಧಿಕಾ (2) ಮೃತರು.ಕೊಪ್ಪ ತಾಲೂಕಿನ ಅಮ್ಮಡಿ ಎಸ್ಟೇಟ್ ನಲ್ಲಿ ಈ ದುರಂತ ನಡೆದಿದೆ.ಕೂಲಿಗಾಗಿ ಮಧ್ಯಪ್ರದೇಶದಿಂದ ಬಂದು ತೋಟದ ಮನೆಯಲ್ಲಿದ್ದು,ಮಕ್ಕಳನ್ನು ಮನೆಯಲ್ಲೇ ಬಿಟ್ಟು ತೋಟದ ಕೆಲಸಕ್ಕೆ ತಾಯಿ ಹೋಗಿದ್ದಳು.ಸಂಜೆ ಮನೆಗೆ ಬಂದಾಗ ಮಕ್ಕಳು ಇಲ್ಲದ್ದನ್ನು ಕಂಡು ತಾಯಿ ಆತಂಕಗೊಂಡಿದ್ದು, ಇತರೆ ಕಾರ್ಮಿಕರು ಹುಡುಕಾಡಿದಾಗ ಬಾವಿಯಲ್ಲಿ ಮಕ್ಕಳ ಮೃತದೇಹ ಪತ್ತೆಯಾಗಿದೆ.ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.