ಕೆ.ಆರ್.ಪೇಟೆ ಗ್ರಾಮದಲ್ಲಿ ರಾತ್ರಿ ಕಾಣಿಸಿಕೊಂಡ ಒಂಟಿ ಸಲಗ
ಚಿಕ್ಕಮಗಳೂರು : ಕಾಫಿನಾಡ ಹಳ್ಳಿಗರಿಗೆ ಮ ಕಾಡಾನೆ ಗೋಳು ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.ಕೆ.ಆರ್.ಪೇಟೆ ಗ್ರಾಮದಲ್ಲಿ ಒಂಟಿ ಸಲಗ ರಾತ್ರಿ ಓಡಾಡಿದ್ದುಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಕಾಡಾನೆ ಗ್ರಾಮಕ್ಕೆ ಬರುತ್ತಿದ್ದಂತೆ, ನಾಯಿಗಳು ಬೊಗಳಿದ್ದು ಮನೆಯಿಂದ ಜನ ಹೊರಬಂದು ನೋಡಿದ್ದಾರೆ.ಕಾಡಾನೆ ಓಡಾಟದಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು, ಹಾಸನದಿಂದ ನಿರಂತರವಾಗಿ ಕಾಡಾನೆಗಳು ಬರುತ್ತಿದ್ದು, ಕಾಡಾನೆ ಸ್ಥಳಾಂತರ ಮಾಡುವಂತೆ ಸ್ಥಳೀಯರು ಆಗ್ರಹ ಮಾಡಿದ್ದಾರೆ