ಅಂತರ್ಜಾತಿ ವಿವಾಹ:ರಕ್ಷಣೆ ಕೋರಿ ಎಸ್. ಪಿ ಕಛೇರಿ ಮೆಟ್ಟಲೇರಿದ ಪ್ರೇಮಿಗಳು
ಚಿಕ್ಕಮಗಳೂರು : ಅಂತರ್ಜಾತಿ ವಿವಾಹವಾದ ಪ್ರೇಮಿಗಳು ಎಸ್. ಪಿ ಕಛೇರಿಗೆ ಆಗಮಿಸಿ ಸೂಕ್ತ ರಕ್ಷಣೆ ಕೋರಿದ್ದಾರೆ.ಭದ್ರಾವತಿ ಮೂಲದ ದಲಿತ ಹುಡುಗಿ,ಶಾಲಿನಿ, ತರೀಕೆರೆ ಮೂಲದ ಒಕ್ಕಲಿಗ ಸಮಾಜದ ಯುವಕ ಅಜಯ್ದೇವಸ್ಥಾನದಲ್ಲಿ ಮದುವೆಯಾಗಿದ್ದು , ತಮಗೆ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.ಅಂತರ್ ಜಾತಿ ವಿವಾಹಕ್ಕೆ ಎರಡೂ ಕುಟುಂಬದ ಪೋಷಕರ ವಿರೋಧ ನಡುವೆಯೂ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.ಇಬ್ಬರೂ ವಯಸ್ಕರಾಗಿರುವ ಕಾರಣ ರಕ್ಷಣೆ ನೀಡುವ ಭರವಸೆ ಎಸ್. ಪಿ .ನೀಡಿದ್ದಾರೆ. ಇಬ್ಬರು ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವೇಳೆಯಲ್ಲಿ ಪ್ರೀತಿ ಆಗಿದೆ.ಮದುವೆಗೆ ಪೋಷಕರು ಅಡ್ಡಿಪಡಿಸಿದ […]
ಅನುದಾನ ಬಿಡುಗಡೆ ವಿಳಂಬ ಖಂಡಿಸಿ ಬಿಜೆಪಿ ಪ್ರತಿಭಟನೆ
ಚಿಕ್ಕಮಗಳೂರು : ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮಗಳಿಗೆ ರಾಜ್ಯಸರ್ಕಾರ ಅನುದಾನ ಬಿಡುಗಡೆ ಮಾಡದಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗ ಗಳ ಮೋರ್ಚಾದ ನೇತೃತ್ವದಲ್ಲಿ ಆಜಾದ್‌ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಮಾತನಾಡಿರಾಜ್ಯದಲ್ಲಿ ಕಾಂಗ್ರೆಸ್‌ನ ಸರ್ಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಪೂರೈಸುತ್ತಿದ್ದು ರಾಜ್ಯದ ಉದ್ದಗಲಕ್ಕೂ ಪ್ರವಾಸ ಕೈಗೊಂಡರೆ ಯಾವುದೇ ಜಿಲ್ಲೆ ಅಥವಾ ತಾಲ್ಲೂಕಿಗೆ ಸರ್ಕಾರ ಅನುದಾನ ನೀಡಿಲ್ಲ ಎಂದು ಟೀಕಿಸಿದರು.ಜನಸಾಮಾನ್ಯರ ಬದುಕಿನಲ್ಲಿ ಆಟವಾಡುವ ಜೊತೆಗೆ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ, ಪ್ರಕರಣ […]
ಚಿಕ್ಕಮಗಳೂರು ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ
ಚಿಕ್ಕಮಗಳೂರು : ನಗರಕ್ಕೆ ನೀರು ಪೂರೈಸುವ ಪೈಪ್ ಲೈನ್ ದುರಸ್ತಿ ಇರುವುದರಿಂದ ಡಿ. ೧೯ ಮತ್ತು ೨೦ ರಂದು ನೀರು ಪೂರೈಕೆಯಲ್ಲಿ ವ್ಯತ್ಯಾಸ ಆಗಲಿದೆ.ಚಿಕ್ಕಮಗಳೂರು ನಗರಕ್ಕೆ ನೀರು ಪೂರೈಸುವ ಯಗಚಿಯಿಂದ ಹಾದು ಹೋಗಿರುವ ಪೈಪ್‌ಲೈನ್ ಮಾರ್ಗವು ಮಾಗಡಿಯ ಹತ್ತಿರ ಮತ್ತು ಕರಗಡ ಬಳಿ ಒಡೆದು ಹೋಗಿದೆ.ದುರಸ್ಥಿ ಕಾರ್ಯ ಹಮ್ಮಿಕೊಂಡಿರುವುದರಿಂದ ಡಿ. ೧೯ ರಿಂದ ೨೦ ರವರೆಗೆ ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ