ದಲಿತರು ದೇವಸ್ಥಾನದ ಕಾಂಪೌಂಡ್ ಪ್ರವೇಶ, ದೇಗುಲಕ್ಕೆ ಬೀಗ, ಎರಡೂವರೆ ಲಕ್ಷ ದಂಡ…!
ಚಿಕ್ಕಮಗಳೂರು : ದಲಿತರು ದೇವಸ್ಥಾನದ ಕಾಂಪೌಂಡ್ ಒಳಗೆ ಹೋದರು ಎಂಬ ಕಾರಣಕ್ಕೆ ದೇವಸ್ಥಾನಕ್ಕೆ ಬೀಗ ಹಾಕಿ ದಲಿತರಿಗೆ ದಂಡ ಹಾಕಿರುವ ಘಟನೆ ನಡೆದಿದೆ .ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಸಮೀಪದ ಬಿ.ಕೋಡಿಹಳ್ಳಿ ಗ್ರಾಮದಲ್ಲಿ ಎರಡು ದಿನದ ಹಿಂದೆ ಬಿ.ಕೋಡಿಹಳ್ಳಿ ಗ್ರಾಮದ ಮಂಜಪ್ಪ ಹಾಗೂ ಮದನ್ ಗ್ರಾಮದ ಆಂಜನೇಯ ದೇವಸ್ಥಾನದ ಕಾಂಪೌಂಡ್ ಒಳಗೆ ಹೋಗಿದ್ದರು.ಗ್ರಾಮದ ಸವರ್ಣೀಯರು ಆ ಇಬ್ಬರಿಗೂ ದಂಡ ಹಾಕಿ ದೇವಸ್ಥಾನಕ್ಕೆ ಬೀಗ ಹಾಕಿದ್ದಾರೆ. ಎರಡು ದಿನದಿಂದ ಆಂಜನೇಯನಿಗೆ ಪೂಜೆ ಕೂಡ ನಿಂತಿದೆ.ದೇವಸ್ಥಾನದ ಗರ್ಭಗುಡಿ ಹಾಗೂ ಕಾಂಪೌಂಡ್ […]
ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ
ಶೃಂಗೇರಿ: ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನಲ್ಲಿ ನಡೆದಿದೆ.ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು ಈಗ ಆರೋಗ್ಯ ತಪಾಸಣೆ ವೇಳೆ ಘಟನೆ ಹೊರಬಂದಿದೆ.ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಯನ್ನು ಬಂಧಿಸಿದ್ದಾರೆ. ಈತ ತೆಕ್ಕೂರಿನ ಎಸ್ಟೇಟ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಆರೋಪಿಯೂ ಅಪ್ರಾಪ್ತನಾಗಿದ್ದು 17 ವರ್ಷದವನಾಗಿದ್ದಾನೆ, ಈತ ತೆಕ್ಕೂರಿನ ಎಸ್ಟೇಟ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂದು […]
ಡಿ.21 ರಂದು ”ಏಕ್ ಶಾಮ್ ರಫಿ ಕೇ ನಾಮ್” ಗೀತಗಾಯನ
ಚಿಕ್ಕಮಗಳೂರು :ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ ಹಾಗೂ ಕೆನರಾ ಬ್ಯಾಂಕ್ಇವರ ಸಹಯೋಗದಲ್ಲಿ ”ಏಕ್ ಶಾಮ್ ರಫಿ ಕೇ ನಾಮ್” ಗೀತಗಾಯನಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಪೂರ್ವಿಗಾನಯಾನ-102ರ ಸಂಚಿಕೆಯಡಿಯಲ್ಲಿ ಈ ದೇಶಕಂಡ ಮಹಾನ್‌ಗಾಯಕಮೊಹಮ್ಮದ್ ರಫಿರವರ ಜನ್ಮ ಶತಮಾನೋತ್ಸವದ ಅಂಗವಾಗಿ ಡಿ. 21 ರ ಸಂಜೆ 6 ರಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.ಖ್ಯಾತ ಗಾಯಕ ಶಿವಮೊಗ್ಗದ ಸುರೇಖಾ ಹೆಗಡೆ, ಸ್ಟಾರ್ ಸಿಂಗಖ್ಯಾತಿಯ ಹಾಸನದ ಚೇತನರಾಮ್, ಬೀರೂರಿನ ವಿಷ್ಣು ಭಾರದ್ವಾಜ್, ಪೂರ್ವಿಯ ಸಾರಥಿ ವೆಂಕಟೇಶ್, ಕವಿತಾನಿಯತ್, ರೂಪ ಅಶ್ವಿನ್, […]
ಚಿಕ್ಕಮಗಳೂರು : ಎನ್. ಆರ್. ಪುರ ಬಳಿ ಕಾಡಾನೆ ದಾಳಿ – ತಂದೆ ಸಾವು ಮಗ ಬಚಾವ್
ಚಿಕ್ಕಮಗಳೂರು : ಜಿಲ್ಲೆಯಲ್ಲಿ ಆನೆ ದಾಳಿಗೆ ಮತ್ತೊಬ್ಬರು ಬಲಿ ಆಗಿದ್ದಾರೆ20 ದಿನದಲ್ಲಿ ಕಾಡಾನೆ ದಾಳಿಗೆ ಎರಡನೇ ಸಾವು ಇದಾಗಿದೆ.ಎನ್.ಆರ್.ಪುರ ತಾಲೂಕಿನ ಮಡಬೂರು ಗ್ರಾಮದ ಬಳಿ ಘಟನೆ ನಡೆದಿದ್ದು,ಎಲಿಯಾಸ್ (75) ಮೃತ ದುರ್ದೈವಿ, ಮಗ ವರ್ಗೀಸ್ ಪಾರಾಗಿದ್ದಾನೆ.ತೋಟಕ್ಕೆ ಹೋಗಿದ್ದ ತಂದೆ-ಮಗನ ಮೇಲೆ ಒಂಟಿ ಸಲಗ ದಾಳಿ ಮಾಡಿದೆ.ಮಗ ಓಡಿ ಹೋಗಿ ತಪ್ಪಿಸಿಕೊಂಡಿದ್ದಾನೆ, ತಂದೆ ಆನೆ ದಾಳಿಗೆ ಬಲಿ ಆಗಿದ್ದಾರೆ.ಕೇರಳದಿಂದ ಬಂದು ಅಡಿಕೆ-ಬಾಳೆ ತೋಟ ಮಾಡಿಕೊಂಡಿದ್ದ ಎಲಿಯಾಸ್.ಸಾಯಿಸಿದ ಬಳಿಕ ಮೃತದೇಹ ಸುತ್ತುತ್ತಾಮೃತದೇಹಕ್ಕೆ ಒದೆಯುತ್ತಾ, ಘೀಳಿಡುತ್ತಾ ಸ್ಥಳದಲ್ಲೇ ನಿಲ್ಲುವ ಮೂಲಕ ಆತಂಕ […]
ಅಕ್ರಮ ಚಟುವಟಿಕೆ ತಾಣ ಚಂದುವಳ್ಳಿ ಬಸ್ ನಿಲ್ದಾಣ
ಚಿಕ್ಕಮಗಳೂರು : ಬಾಳೂರು ಹೋಬಳಿಯ ಚಂದುವಳ್ಳಿ ತಂಗುದಾಣ ಕಸದ ಅಡ್ಡೆಯಾಗುತ್ತಿದೆ. ರಸ್ತೆಯ ಬದಿಯಲ್ಲಿ ಚಂದುವಳ್ಳಿಯ ಗ್ರಾಮಸ್ಥರಿಗೆ ಬಸ್ ತಂಗುದಾಣ ಕಟ್ಟಲಾಗಿದೆ.ಇಲ್ಲಿ ಕೆಲವು ಕಿಡಿಗೇಡಿಗಳು ಮದ್ಯಪಾನದ ಅಡ್ಡಾ ಮಾಡಿದ್ದಾರೆ.ಬೀಡಿ, ಸಿಗರೇಟು ಸೇದಿ ಅಲ್ಲಿಯೇ ಕಸವನ್ನು ಬಿಸಾಕಿ ಹೋಗುತ್ತಿದ್ದಾರೆ. ಇತರೆ ಕಸವೂ ಅಲ್ಲಿಯೇ ಬಿಸಾಕಿ ಗಬ್ಬು ನಾರುತ್ತಿದೆ.ಕಳೆದ ಬಾರಿಯ ಮಳೆಯ ಹೊಡೆತಕ್ಕೆ ಗೋಡೆ ಶಿಥಿಲವಾಗಿ ಬಿರುಕು ಬಿಟ್ಟಿದೆ. ಬಸ್ ನಿಲ್ದಾಣ ಸಾರ್ವಜನಿಕರ ಆಸ್ತಿಯಾಗಿದ್ದು ಸ್ವಚ್ಚತೆ ಕಾಪಾಡಬೇಕಿದೆ.ಬಸ್ ನಿಲ್ದಾಣದಲ್ಲಿ ನಡೆಯುವ ಚಟುವಟಿಕೆಗಳಿಗೆ ಬ್ರೇಕ್ ಬೀಳಬೇಕಿದೆ.ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕೆಂದು […]