ಚಿಕ್ಕಮಗಳೂರು ನ್ಯೂಸ್

Chikmgalur News

ಕಾಫಿ ಕಣಜದ ಸುದ್ದಿಜಾಲ

ಅಮಿತ್ ಶಾ-ಸಿ.ಟಿ.ರವಿ ಹೇಳಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಧರಣಿ

ಚಿಕ್ಕಮಗಳೂರು:ಕೋಮುವಾದವನ್ನುಮುಂದಿಟ್ಟು ಜನರನ್ನು ಸಂಘರ್ಷಕ್ಕೀಡು ಮಾಡುವಸಂಘಪರಿವಾರದ ಮಾನಸಿಕತೆ ಆಮಿತ್ ಶಾ ಹೇಳಿಕೆಯಿಂದ ಬಹಿರಂಗಗೊಂಡಿದೆ ಎಂದು ಜಿಲ್ಲಾಕಾಂಗ್ರೆಸ್‌ ಉಸ್ತುವಾರಿ, ಮಾಜಿ ಸಚಿವ ರಮಾನಂದ ರೈ ಟೀಕಿಸಿದ್ದಾರೆ.ಸಂವಿಧಾನದ ಬಗ್ಗೆ ಅಮಿತ್ ಶಾ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಕುರಿತು ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ನೀಡಿದ ಹೇಳಿಕೆ ಖಂಡಿಸಿ ನಗರದ ಆಜಾದ್ವೃತ್ತದಲ್ಲಿ ಜಿಲ್ಲಾ  ಮತ್ತು ಬ್ಲಾಕ್‌ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿಮಾತನಾಡಿದರು.ಅಂಬೇಡ್ಕರ್ ಅವರನ್ನು ಅವಮಾನಿಸುವಮೂಲಕ ತಳವರ್ಗದ ಸಮುದಾಯವನ್ನುಪರೋಕ್ಷವಾಗಿ ದಮನಿಸುವ ಕೆಲಸವನ್ನು ಬಿಜೆಪಿ ಸೂಕ್ಷ್ಮವಾಗಿ ಮಾಡುತ್ತಿದೆ. ಈ ಬಗ್ಗೆ ಕೆಳ ವರ್ಗದ ಜನತೆ  ಜಾಗೃತರಾಗಬೇಕಿದೆ ಎಂದರು.ಸಂವಿಧಾನದ […]

ನಿಷೇಧಿತ ಮದ್ಯ ವಶ : ಓರ್ವನ ಬಂಧನ

ಚಿಕ್ಕಮಗಳೂರು:  ಅಬಕಾರಿ ಸಿಬ್ಬಂದಿ ದಾಳಿ ನಡೆಸಿಚಿಕ್ಕಮಗಳೂರು ನಗರದ ದರ್ಜಿ ಬೀದಿಯ ಮನೆಯೊಂದರಲ್ಲಿ ದಾಸ್ತಾನು ಇಟ್ಟಿದ್ದ ನಿಷೇಧಿತ ವಿವಿಧ ಬ್ರಾಂಡ್ ಗಳ ಮ ಮದ್ಯ ವಶಪಡಿಸಿಕೊಂಡಿದೆ .ಎಂ.ಕೆ. ಮಧುಕರ್  ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದ ಗೋವಾ ರಾಜ್ಯದಲ್ಲಿ ತಯಾರಿಸಿ  ಕರ್ನಾಟಕ ರಾಜ್ಯದಲ್ಲಿ ಮಾರಾಟಕ್ಕೆ ನಿಷೇಧಿತ ವಿವಿಧ ಬ್ರಾಂಡ್‌ಗಳ ಒಟ್ಟು ೨೮.೨೫೦ ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.ಈ ಸಂದರ್ಭದಲ್ಲಿ ಗಯಾಸ್ ಪಾಷಾ, ಅಬಕಾರಿ ಉಪ ನಿರೀಕ್ಷಕರು, ಸಿಬ್ಬಂದಿಗಳಾದ ಗುರುಬಸವರಾಜ ಬಂಗಾರಿ, ತೀಥೇಶ ಬಿ.ಕೆ.  ಭಾಗವಹಿಸಿದ್ದರು. 

ಶಾಸಕ ಸಿ.ಟಿ ರವಿ ಬಿಡುಗಡೆ ಆದೇಶ : ಸಂಭ್ರಮಾಚರಣೆ

ಚಿಕ್ಕಮಗಳೂರು : ಶಾಸಕ ಸಿ.ಟಿ ರವಿ ಬಿಡುಗಡೆ ಆದೇಶದ ಹಿನ್ನೆಲೆ ಚಿಕ್ಕಮಗಳೂರಿನಲ್ಲಿಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ  ಜರುಗಿತುಚಿಕ್ಕಮಗಳೂರಿನ ಸಿ.ಟಿ.ರವಿ ನಿವಾಸದ ಮುಂಭಾಗ ಸೇರಿದ  ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ತಿಳಿಸಿ ಸಂಭ್ರಮಿಸಿದರು.ಸಿ.ಟಿ ರವಿ‌ ಪರ ಘೋಷಣೆ ಕೂಗಿದ ಕಾರ್ಯಕರ್ತರು ಡಿಕೆಶಿ ವಿರುದ್ಧ ಘೋಷಣೆ ಕೂಗಿದರು.ಮಹಿಳಾ ಕಾರ್ಯಕರ್ತರು  ಶಾಸಕರ ಪರ ಘೋಷಣೆ ಕೂಗುತ್ತಾ ಕುಣಿದು ಕುಪ್ಪಳಿಸಿದರು

ಸಿ.ಟಿ.ರವಿ ಬಿಡುಗಡೆಗೆ‌ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ; ಬಂದ್ ಕರೆ ವಿಫಲ

. ಚಿಕ್ಕಮಗಳೂರು : ಸಿ.ಟಿ.ರವಿ ಬಿಡುಗಡೆಗೆ‌ ಆಗ್ರಹಿಸಿ  ನಗರದ ಹನುಮಂತಪ್ಪ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು  ಪ್ರತಿಭಟನೆ ಮಾಡಿದರು.ಹೆಬ್ಬಾಳ್ಕರ್, ಡಿಕೆಶಿ, ಕಾಂಗ್ರೆಸ್, ಸಿದ್ದು ವಿರುದ್ಧ ಕಿಡಿಕಾರಿದ  100 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತುಹಲವು ಮಹಿಳೆಯರು ಭಾಗಿ ಆಗಿದ್ದು ಕೈಯಲ್ಲಿ ಸಿ.ಟಿ.ರವಿ ಫೋಟೋ ಹಿಡಿದು ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಟೈರ್ ಗಳನ್ನು ಸುಡಲಾಯಿತು.ಎರಡು ಗುಂಪುಗಳಾಗಿ ಪ್ರತಿಭಟನೆ ಸಡೆಸಿ ರಾ.ಹೆ. ಬಂದ್ ಮಾಡಿದರು.ಬಿಜೆಪಿ ಕಾರ್ಯಕರ್ತರನ್ನು ಸುತ್ತುವರೆದ ಪೊಲೀಸರು ಎಂ.ಜಿ. ರಸ್ತೆಯಲ್ಲಿ ಮೆರವಣಿಗೆಗೆ  ವಿರೋಧ  ವ್ಯಕ್ತಪಡಿಸಿದರು.ಶಾಸಕ ಸಿ.ಟಿ ರವಿ ಬಂಧನ […]