ಚಿಕ್ಕಮಗಳೂರು ನ್ಯೂಸ್

Chikmgalur News

ಕಾಫಿ ಕಣಜದ ಸುದ್ದಿಜಾಲ

ಪ್ರವಾಸಕ್ಕೆ ತೆರಳಿದ್ದ ವಾಹನ ಪಲ್ಟಿ : 5 ಮಕ್ಕಳಿಗೆ ಗಾಯ

ಚಿಕ್ಕಮಗಳೂರು : ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳ ವ್ಯಾನ್ ಪಲ್ಟಿ ಯಾಗಿ12 ಜನ ಮಕ್ಕಳಲ್ಲಿ 5 ಜನ ಮಕ್ಕಳಿಗೆ ಗಾಯ ವಾಗಿದೆ.ಚಿಕ್ಕಮಗಳೂರು ತಾಲೂಕಿನ ಕೈಮರ ಚೆಕ್ ಪೋಸ್ಟ್ ಬಳಿ ಘಟನೆ ನಡೆದಿದೆ. ಮುಳ್ಳಯ್ಯನಗಿರಿಗೆ ಪ್ರವಾಸಕ್ಕೆ ಹೊರಟಿದ್ದ ಟ್ರ್ಯಾಕ್ಸ್ ಉರುಳಿದೆ. ಮೈಸೂರಿನ ಗೋಪಾಲಸ್ವಾಮಿ ಶಾಲೆಯ ಮಕ್ಕಳು ಸರ್ಕಾರಿ ಬಸ್ ನಲ್ಲಿ ಚಿಕ್ಕಮಗಳೂರಿಗೆ ಬಂದಿದ್ದರುಚಿಕ್ಕಮಗಳೂರಿನಲ್ಲಿ ಟ್ರ್ಯಾಕ್ ಗಾಡಿಯನ್ನು ಬಾಡಿಗೆ ಮಾಡಿಕೊಂಡಿದ್ದು,ಕೈಮರ ಚೆಕ್ ಪೋಸ್ಟ್ ಬಳಿ ಟೈರ್ ಬ್ಲಾಸ್ಟ್ ಆಗಿ ಅನಾಹುತ ಸಂಭವಿಸಿದೆ.

ಚಿಕ್ಕಮಗಳೂರು ನಗರಸಭೆ ಆಯವ್ಯಯ: ಪೂರ್ವಭಾವಿ ಸಭೆ

ಚಿಕ್ಕಮಗಳೂರು-ನಗರಸಭೆಯ ೨೦೨೫-೨೬ ನೇ ಸಾಲಿನ ಆಯ-ವ್ಯಯ ಮಂಡನೆ  ಪೂರ್ವಭಾವಿ ಸಭೆ ನಡೆಯಿತು.ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ನಾಗರೀಕರು ಹಲವು ಸಲಹೆ ನೀಡಿದರು.ಇಂಜಿನೀಯರ್ ನಾಗೇಂದ್ರ ಮಾತನಾಡಿ, ನಗರಸಭೆ ಆರ್ಥಿಕ ಸಬಲತೆ ಕಂಡುಕೊಳ್ಳಲು ಕಂದಾಯ ವಸೂಲಾತಿಗೆ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಬೇಕು. ಕಂದಾಯ ಬಾಕಿ ಉಳಿಸಿಕೊಂಡವರಿಗೆ ಅಂಚೆ ಮೂಲಕ ವರ್ಷಕ್ಕೊಮ್ಮೆ ನೋಟೀಸು ಕಳಿಸುವ ಕೆಲಸ ಮಾಡಿದರೆ ಮನೆ ಮನೆಗೆ ಸಿಬ್ಬಂದಿ ತೆರಳಿ ಮನವರಿಕೆ ಮಾಡುವುದು ತಪ್ಪುತ್ತದೆ ಎಂದು ಸಲಹೆ ಮಾಡಿದರು.ಕೆಲವರ ನಿವೇಶನ ಹಾಗೂ ಕಟ್ಟಡದ […]