ಚಿಕ್ಕಮಗಳೂರು : ಅಂತರ್ಜಾತಿ ವಿವಾಹವಾದ ಪ್ರೇಮಿಗಳು ಎಸ್. ಪಿ ಕಛೇರಿಗೆ ಆಗಮಿಸಿ ಸೂಕ್ತ ರಕ್ಷಣೆ ಕೋರಿದ್ದಾರೆ.
ಭದ್ರಾವತಿ ಮೂಲದ ದಲಿತ ಹುಡುಗಿ,ಶಾಲಿನಿ, ತರೀಕೆರೆ ಮೂಲದ ಒಕ್ಕಲಿಗ ಸಮಾಜದ ಯುವಕ ಅಜಯ್
ದೇವಸ್ಥಾನದಲ್ಲಿ ಮದುವೆಯಾಗಿದ್ದು , ತಮಗೆ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ಅಂತರ್ ಜಾತಿ ವಿವಾಹಕ್ಕೆ ಎರಡೂ ಕುಟುಂಬದ ಪೋಷಕರ ವಿರೋಧ ನಡುವೆಯೂ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.
ಇಬ್ಬರೂ ವಯಸ್ಕರಾಗಿರುವ ಕಾರಣ ರಕ್ಷಣೆ ನೀಡುವ ಭರವಸೆ ಎಸ್. ಪಿ .ನೀಡಿದ್ದಾರೆ. ಇಬ್ಬರು ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವೇಳೆಯಲ್ಲಿ ಪ್ರೀತಿ ಆಗಿದೆ.
ಮದುವೆಗೆ ಪೋಷಕರು ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಮದುವೆಯಾಗಿದ್ದು ಮತ್ತೊಮ್ಮೆ ಎಸ್ ಪಿ ಕಚೇರಿ ಆವರಣದಲ್ಲಿ ಪರಸ್ಪರ ಹೂವಿನ ಹಾರ ಬದಲಿಸಿಕೊಂಡರು. ಬದಲಿಸಿಕೊಂಡರು.