ಚಿಕ್ಕಮಗಳೂರು : ಮಲೆನಾಡ ಭಾಗದಲ್ಲಿ ಗಾಳಿ-ಮಳೆ ಮುಂದುವರಿದಿದೆ. ಭಾರೀ ಗಾಳಿ-ಮಳೆಗೆ ಬೃಹತ್ ಮರ ರಸ್ತೆಗುರುಳಿ ಸಂಚಾರ ತಾತ್ಕಾಲಿಕ ಸ್ಥಗಿವಾಗಿತ್ತು.
ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಬಳಿ ಬೃಹತ್ ಮರ ಬಿದ್ದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 174 ಬಂದ್ ಆಗಿತ್ತು.
ಕಿ.ಮೀ.ಗಟ್ಟಲೇ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡಿದರು.
ಚಿಕ್ಕಮಗಳೂರಿನಿಂದ ಮೂಡಿಗೆರೆ, ಶೃಂಗೇರಿ, ಎನ್.ಆರ್.ಪುರ, ಕೊಪ್ಪ ಎಲ್ಲಾ ಮಾರ್ಗ ಬಂದ್ ಆಗಿತ್ತು.
ಮರ ತೆರವು ಮಾಡಲು ಸ್ಥಳೀಯರು ಹರಸಾಹಸ ಪಡಬೇಕಾಯಿತು.
ಮರ ಬಿದ್ದ ಪರಿಣಾಮ ಕಂಬ ಮುರಿದು ವಿದ್ಯುತ್ ಸಂಪರ್ಕ ಕೂಡ ಕಠಿಣವಾಗಿತ್ತು.
ಟ್ರಾಫಿಕ್ ನಿಯಂತ್ರಿಸಲು ಗ್ರಾಮಾಂತರ ಪೊಲೀಸರು ಶ್ರಮ ಪಡಬೇಕಾಯಿತು
