ಚಿಕ್ಕಮಗಳೂರು: ಚಿಕ್ಕಮಗಳೂರು ತಾಲ್ಲೂಕು ಕೈಮರದಿಂದ ಅತ್ತಿಗುಂಡಿ ಭಾಗಕ್ಕೆ ಸಂಪರ್ಕಿಸುವ ರಸ್ತೆ ವಾಹನ ಸಂಚಾರಕ್ಕೆ ಮುಕ್ತವಾಗಿದೆ.
ಅತಿಯಾದ ಮಳೆಯಿಂದ ರಸ್ತೆಯ ಭಾಗ ಕುಸಿದಿದ್ದ ಕಾರಣ ಕೈಮರದಿಂದ ಅತ್ತಿಗುಂಡಿ ಭಾಗದಲ್ಲಿ ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಬಹುತೇಕ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವರದಿ ಅವಲೋಕಿಸಿ ಕೈಮರ ಚೆಕ್ ಪೋಸ್ಟ್ ಬಳಿಯಿಂದ ಸಿ.ಎನ್.ಆರ್. ಹೋಮ್ ಸ್ಟೇ ವರೆಗಿನ ಭಾಗಗಳಲ್ಲಿ ನಿಬಂಧನೆಗೆ ಒಳಪಟ್ಟು ಎಲ್ಲಾ ಬಗೆಯ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್ ತಿಳಿಸಿದ್ದಾರೆ.
ದುರಸ್ತಿಯಾಗಿರುವ ರಸ್ತೆ ಭಾಗದಲ್ಲಿ ಒಂದು ವಾಹನ ಚಲಾಯಿಸಿದ ನಂತರ ಇನ್ನೋಂದು ವಾಹನ ಚಲಾಯಿಸುವಂತೆ ಸೂಚಿಸಲಾಗಿದೆ