ಚಿಕ್ಕಮಗಳೂರು ನ್ಯೂಸ್

Chikmgalur News

ಕಾಫಿ ಕಣಜದ ಸುದ್ದಿಜಾಲ

ದತ್ತ ಜಯಂತಿ ಹಿನ್ನೆಲೆ : ಮಾಲಾಧಾರಿಗಳಿಂದ ಪಡಿಸಂಗ್ರಹ – ಸಂಜೆ ಶೋಭಾಯಾತ್ರೆ

ಚಿಕ್ಕಮಗಳೂರು ದತ್ತಜಯಂತಿ ಹಿನ್ನೆಲೆಯಲ್ಲಿಶಾಸಕ ಸಿ.ಟಿ.ರವಿ ನೇತೃತ್ವದಲ್ಲಿ ಮಾಲಾಧಾರಿಗಳು ಭಿಕ್ಷಾಟನೆ ನಡೆಸಿದರು.ಚಿಕ್ಕಮಗಳೂರು ನಗರದಲ್ಲಿ ಭಿಕ್ಷಾಟನೆ ಮೂಲಕ ಪಡಿಸಂಗ್ರಹ‌ ಮಾಡಿದರು.ದತ್ತ ಭಜನೆಯೊಂದಿಗೆ ನಾರಾಯಣಪುರ, ರಾಘವೇಂದ್ರ ಮಠದ ರಸ್ತೆಯಲ್ಲಿ  ಮನೆ-ಮನೆಗೆ ತೆರಳಿ ಭಿಕ್ಷಾಟನೆ ಮೂಲಕ ಪಡಿಸಂಗ್ರಹ ನಡೆಸಿದರುಪಡಿ ರೂಪದಲ್ಲಿ ಅಕ್ಕಿ, ಬೆಲ್ಲ, ಕಾಯಿಯನ್ನು ಸ್ಥಳೀಯರು ನೀಡಿದರು.ಸಂಗ್ರಹಿಸಿದ ಪುಡಿಯನ್ನು ನಾಳೆ ಇರುಮುಡಿ ರೂಪದಲ್ಲಿ ದತ್ತಾತ್ರೇಯರಿಗೆ  ಮಾಲಾಧಾರಿಗಳು ಅರ್ಪಿಸಲಿದ್ದಾರೆ.*ದತ್ತ ಜಯಂತಿ ಹಿನ್ನೆಲೆಯಲ್ಲಿ ಇಂದು ಸಂಜೆ ಚಿಕ್ಕಮಗಳೂರು ನಗರದಲ್ಲಿ ದತ್ತಮಾಲಾ ಧಾರಿಗಳ ಬೃಹತ್ ಶೋಭಾಯಾತ್ರೆ ನಡೆಯಲಿದೆ

ರಾಜ್ಯ ಕೆ.ಇ.ಎ. ಸಹಾಯಕ ಪ್ರಾಧ್ಯಾಪಕ ಹುದ್ದೆ : ರಾಜ್ಯಕ್ಕೆ 8ನೇ ರ‍್ಯಾಂಕ್ ಪಡೆದ  ಲಿತಿನ್

ಚಿಕ್ಕಮಗಳೂರು : ರಾಜ್ಯ ಕೆಇಎ ನಡೆಸಿದ ಪ್ರಾಧ್ಯಾಪಕರ ಹುದ್ದೆಗೆ  ಬಿ. ಎಂ .ಲಿತಿನ್8ನೇ ರಾಂಕ್ ಪಡೆದಿದ್ದಾರೆಇವರು ಮೂಡಿಗೆರೆ ತಾಲ್ಲೂಕು ಬಾಳೂರು ಹೊರಟ್ಟಿಯ ಅಡಿಗೆ ಮಲ್ಲೇಶ್ ಅವರ ಹಿರಿಯ ಪುತ್ರ .ಪ್ರಸ್ತುತ ಕಾರ್ಕಳದ ಹಿರಿಯಡ್ಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದು ಪಿ ಎಚ್.ಡಿ ಪದವಿಯನ್ನು ಮಣಿಪಾಲ್ ನಲ್ಲಿ ಮುಗಿಸಿರುತ್ತಾರೆ.

ಚಿಕ್ಕಮಗಳೂರು ಹೊರವಲಯದಲ್ಲಿಗಾಂಜಾ ವಶ : ಓರ್ವನ ಬಂಧನ

ಚಿಕ್ಕಮಗಳೂರು : ಗೌಡನಹಳ್ಳಿ  ಸಮೀಪ ಬಾಡಿಗೆ ಮನೆಯಲ್ಲಿದ್ದ ವ್ಯಕ್ತಿ ಒಬ್ಬನನ್ನು ಬಂಧಿಸಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇಂಡಸ್ಟ್ರೀಯಲ್ ಏರಿಯಾ, ಅಂಬಿಕಾ ಪ್ಲೇವುಡ್ ಫ್ಯಾಕ್ಟರಿ  ಪಕ್ಕದ ಬೀರೇಗೌಡರ ಮಾಲೀಕತ್ವದ ಮನೆಯಲ್ಲಿ ಬಾಡಿಗೆಗೆ ಇದ್ದ ಅಸ್ಸಾಂ ಮೂಲದ ಮಹಮ್ಮದ್ ರಬೂಲ್ ಇಸ್ಲಾಂ ಬಂಧಿತ ಆರೋಪಿ.ಈತನು ತನ್ನ ಬಾಡಿಗೆ ಮನೆಯಲ್ಲಿ ಗಾಂಜಾ ಇಟ್ಟುಕೊಂಡು ಸಾರ್ವಜನಿಕರಿಗೆ ಹಾಗೂ ಕಾರ್ಮಿಕರಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.ಮಾಹಿತಿ ಆಧರಿಸಿ ದಾಳಿ ನಡೆಸಿದ  ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪಿಎಸ್ಐ ರಘುನಾಥ್ ನೇತೃತ್ವದ ತಂಡ  ದಾಳಿ ನಡೆಸಿದ್ದು ಆರೋಪಿ […]

ದತ್ತ ಜಯಂತಿಗೆ ಚಾಲನೆ: ಅನುಸೂಯಾ ಜಯಂತಿ – ಮಹಿಳೆಯರ ಮೆರವಣಿಗೆ

ಚಿಕ್ಕಮಗಳೂರು : ಇಂದಿನಿಂದ 3 ದಿನಗಳ ಕಾಲ ನಡೆಯುವ ದತ್ತಜಯಂತಿಗೆ ಚಾಲನೆ ದೊರಕಿದೆ.ಅನುಸೂಯ ಜಯಂತಿಯೊಂದಿಗೆ ಕಾರ್ಯಕ್ರಮ ಆರಂಭವಾಗಿದ್ದು,ನಗರದ ಬೋಳರಾಮೇಶ್ವರ ದೇವಾಲಯದಿಂದ ಮೆರವಣಿಗೆ‌ ಹೊರಟಿದ್ದು ಪಾಲಿಟೆಕ್ನಿಕ್ ಸಮೀಪ ಮುಕ್ತಾಯಗೊಂಡಿದೆ.ದತ್ತಾತ್ರೇಯ ವಿಗ್ರಹ ದೊಂದಿಗೆ ಹೊರಟ ಮೆರವಣಿಗೆಯಲ್ಲಿ ಅಪಾರ ಸಂಖ್ಯೆ ಮಹಿಳೆಯರು ಭಾಗವಹಿಸಿದ್ದು, ದತ್ತ ಭಜನೆ ಅನಸೂಯ ಭಜನೆ ಯೊಂದಿಗೆ ಮೆರವಣಿಗೆ ಸಾಗಿತು .ಮಹಿಳೆಯರು ಮೆರವಣಿಗೆ ಬಳಿಕ ದತಪೀಠಕ್ಕೆ ತೆರಳಿ ದತ್ತ ಪಾದುಕೆಗಳಿಗೆ ಪೂಜೆ ಸಲ್ಲಿಸಿ, ಹೋಮ ಹವನಗಳಲ್ಲಿ ಪಾಲ್ಗೊಳ್ಳಲಿದ್ದಾರೆ.ಪೊಲೀಸರ ಸರ್ಪಗಾವಲಿನಲ್ಲಿ ಕೇಸರಿಗೆ ಉಡುಗೆ ದೊಡ್ಡ ಮಹಿಳೆಯರ ಮೆರವಣಿಗೆ ಸಾಗಿದ್ದು, ಅದಕ್ಕೂ […]

ಪತ್ನಿಗೆ ಕಿರುಕುಳ : ಗೃಹ ಬಂಧನ -ಕಿರಾತಕ ವೈದ್ಯನ ವಿರುದ್ಧ ದೂರು ದಾಖಲು

ಚಿಕ್ಕಮಗಳೂರು  :  ವೈದ್ಯನೋರ್ವ ಪತ್ನಿಗೆ ಮಾನಸಿಕ ಕಿರುಕುಳ ನೀಡಿ ಅನ್ನ-ನೀರು ನೀಡದೆ ವರ್ಷಗಟ್ಟಲೆ ಗೃಹ ಬಂಧನದಲ್ಲಿರಿಸಿದ ಮನ ಕಲಕುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.ವೃತ್ತಿಯಲ್ಲಿ ವೈದ್ಯನಾಗಿದ್ದರೂ ಪತ್ನಿಯನ್ನು ಮಾನವೀಯತೆ ಮರೆತು ಹೊರ ಪ್ರಪಂಚಕ್ಕೆ ಹೋಗದಂತೆ ಗೃಹಬಂಧನದಲ್ಲಿ ಇರಿಸಿ ತನ್ನ ವೃತ್ತಿಗೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಂಡ ವೈದ್ಯ ರವಿಕುಮಾರ್ ವಿರುದ್ಧ ಆರೋಪ ಕೇಳಿ ಬಂದಿದೆ.ಚಿಕ್ಕಮಗಳೂರು ನಗರದ ದೋಣಿಕಣ ಸಮೀಪದ ಮನೆಯಲ್ಲಿ ವೈದ್ಯ ತನ್ನ ಪತ್ನಿ ವಿನುತಾರಾಣಿಯನ್ನು ಚಿತ್ರಹಿಂಸೆ ನೀಡಿ ಕಿರುಕುಳ ಕೊಡುತ್ತಿದ್ದ ಎನ್ನಲಾಗಿದೆ.ಅದರಲ್ಲೂ ಹುಚ್ಚಿ ಎಂದು ಬಿಂಬಿಸಿ […]

ಸರ್ಕಾರಿ ನೌಕರ ಸಂಘದ ಅಧ್ಯಕ್ಷ ದೇವೇಂದ್ರ ಅಮಾನತು

ಚಿಕ್ಕಮಗಳೂರು :ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರು ಆದ ಗೃಹ ಮಂಡಳಿ ಬಡಾವಣೆ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ದೇವೇಂದ್ರ ಅವರನ್ನು ಅಮಾನತು ಮಾಡಲಾಗಿದೆ.ಸಂಘದ ಅಧ್ಯಕ್ಷ ಚುನಾವಣೆ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್. ಎಲ್. ಭೋಜೇಗೌಡರ ವಿರುದ್ಧ ಚುನಾವಣೆಯಲ್ಲಿ  ಹಸ್ತಕ್ಷೇಪ ನಡೆಸಿ, ಆಮಿಷ ಒಡ್ಡಿ ನೌಕರರಿಗೆ ಬೆದರಿಕೆ ಹಾಕುತ್ತಿದ್ದಾರೆ ಸೇರಿದಂತೆ  ಅನೇಕ ಆಪಾದನೆಗಳನ್ನು ಹೊರಿಸಿ ಸುದ್ದಿಗೋಷ್ಠಿ ನಡೆಸಿದ್ದರು.ಸಾರ್ವಜನಿಕ ಜೀವನಕ್ಕೆ ಕಳಂಕ, ಜನಪ್ರತಿನಿಧಿಗಳ ತೇಜೋವಧೆ ಮಾಡಿದ್ದು ಇವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ಎಸ್. ಎಲ್. […]

ಆಟವಾಡುತ್ತಿದ್ದಾಗ ಬಾವಿಗೆ ಬಿದ್ದು ಇಬ್ಬರು ಮಕ್ಕಳು ಸಾವು

ಚಿಕ್ಕಮಗಳೂರು : ಆಟವಾಡುತ್ತಿದ್ದಾಗ ಬಾವಿಗೆ ಬಿದ್ದು 2 ಮಕ್ಕಳು ಸಾವಪ್ಪಿದ ಘಟನೆ ನಡೆದಿದೆಮಧ್ಯಪ್ರದೇಶ ಮೂಲದ ಸುನೀತಾ ಎಂಬುವರ ಸೀಮಾ (6), ರಾಧಿಕಾ (2) ಮೃತರು.ಕೊಪ್ಪ ತಾಲೂಕಿನ ಅಮ್ಮಡಿ ಎಸ್ಟೇಟ್ ನಲ್ಲಿ ಈ ದುರಂತ ನಡೆದಿದೆ.ಕೂಲಿಗಾಗಿ ಮಧ್ಯಪ್ರದೇಶದಿಂದ ಬಂದು ತೋಟದ ಮನೆಯಲ್ಲಿದ್ದು,ಮಕ್ಕಳನ್ನು ಮನೆಯಲ್ಲೇ ಬಿಟ್ಟು ತೋಟದ ಕೆಲಸಕ್ಕೆ ತಾಯಿ ಹೋಗಿದ್ದಳು.ಸಂಜೆ ಮನೆಗೆ ಬಂದಾಗ ಮಕ್ಕಳು ಇಲ್ಲದ್ದನ್ನು ಕಂಡು ತಾಯಿ ಆತಂಕಗೊಂಡಿದ್ದು, ಇತರೆ ಕಾರ್ಮಿಕರು ಹುಡುಕಾಡಿದಾಗ ಬಾವಿಯಲ್ಲಿ ಮಕ್ಕಳ ಮೃತದೇಹ ಪತ್ತೆಯಾಗಿದೆ.ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಗ್ತಿಹಳ್ಳಿ ಗ್ರಾ.ಪಂ ನೂತನ ಉಪಾಧ್ಯಕ್ಷರಾಗಿ ಅಂಬಿಕಾ ಮಧುಸೂಧನ್ 

ಚಿಕ್ಕಮಗಳೂರು: ತಾಲ್ಲೂಕಿನ ಮೂಗ್ತಿಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಂಬಿಕಾ ಮಧುಸೂಧನ್  ಅವಿರೋಧವಾಗಿ ಆಯ್ಕೆಯಾದರು.ಚುನಾವಣಾಧಿಕಾರಿ ರಂಗನಾಥ್ ಅವಿರೋಧ ಆಯ್ಕೆಯನ್ನು ಘೋಷಿಸಿದರು. ನೂತನ ಉಪಾಧ್ಯಕ್ಷೆ ಅಂಬಿಕಾ ಮಧುಸೂದನ್, ಮಾತನಾಡಿ ಸರ್ವ ಸದಸ್ಯರ ಸಹಕಾರದಿಂದ  ಶುದ್ಧ ಕುಡಿಯುವ ನೀರು,ಸುರಕ್ಷಿತ ರಸ್ತೆ ಹಾಗೂ ವಿದ್ಯುತ್ ಕಂಬಗಳನ್ನು ಅಳವಡಿಸಿ ನಿವಾಸಿಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.ಸoವಿಧಾನದ ಅಧಿಕಾರದಡಿ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಿಗೆ ಸರ್ಕಾರಗಳ ಸೌಲಭ್ಯಗಳನ್ನು  ಸರ್ವರಿಗೂ ಸಮಾನವಾಗಿ ಹಂಚುವ ಮೂಲಕ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.ಗ್ರಾ.ಪಂ. ಅಧ್ಯಕ್ಷ ಹೂವಪ್ಪಶೆಟ್ಟಿ, ಸದಸ್ಯರು […]

ಸ್ಕಾಟ್ ಲ್ಯಾಂಡಿನಲ್ಲಿ  ಉನ್ನತ ಸ್ಥಾನಪಡೆದ ಸಹದೇವ್ ಪಟೇಲ್          

           .  ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಉದುಸೆ ಗ್ರಾಮದ ಯುವಕ ಸ್ಕಾಟ್ ಲ್ಯಾಂಡಿನಲ್ಲಿ ಎಂ.ಎಸ್ಸಿ ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.ಯು.ಪಿ.ಸಹದೇವ್ ಪಟೇಲ್ ಯುನೈಟೆಡ್ ಕಿಂಗ್ ಡಂ, ಸ್ಕಾಟ್ ಲ್ಯಾಂಡಿನ ಹೆರಿಯಟ್ ವ್ಯಾಟ್ ವಿಶ್ವ ವಿದ್ಯಾಲಯದಲ್ಲಿ ಎಂ.ಎಸ್ಸಿ ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.ಉದುಸೆ ಗ್ರಾಮದ ಯು.ಇ.ಪ್ರಭಾಕರ್ ಹಾಗೂ ಬಿ.ಜಿ.ಪೂರ್ಣ ದಂಪತಿಗಳ ಪುತ್ರ.ಇವರ  ಸಾಧನೆಗೆ ಗ್ರಾಮಸ್ಥರು ವಿದ್ಯಾಭಿಮಾನಿಗಳು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

ಚೌದಂಬರ ವೃಕ್ಷ ಪರಿಕ್ರಮಕ್ಕೆ ಅವಕಾಶ : ವಿಶ್ವ ಹಿಂದೂ ಪರಿಷತ್ ಒತ್ತಾಯ

ಚಿಕ್ಕಮಗಳೂರು:ದತ್ತಮಾಲಾ ಅಭಿಯಾನಕ್ಕೆ 25 ವರ್ಷದ  ರಜತಮಹೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಪರಿಸರದಲ್ಲಿ ಇರುವ ಚೌದಂಬರ ವೃಕ್ಷ ಪರಿಕ್ರಮಕ್ಕೆ ಅವಕಾಶ ನೀಡಬೇಕೆಂದು ವಿಶ್ವ ಹಿಂದು ಪರಿಷತ್ ಆಗ್ರಹಿಸಿದೆಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ ವೆಲ್  ದತ್ತ ಜಯಂತಿ ಹಿನ್ನೆಲೆಯಲ್ಲಿ ಸಂಘಟನೆ ಕೋರಿರುವ ವ್ಯವಸ್ಥೆ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿದರು.ಚಂದ್ರದ್ರೋಣ ಪರ್ವತದ  ಕ್ಷೇತ್ರದಲ್ಲಿ ಇರುವ ಔದಂಬರ ವೃಕ್ಷ ವೈಜ್ಞಾನಿಕ, ಧಾರ್ಮಿಕವಾಗಿ,ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಹತ್ವವಾಗಿದ್ದು, ದತ್ತಾತ್ರೇಯರ ತಪಸ್ಸು ಮಾಡಿದ […]