ಚಿಕ್ಕಮಗಳೂರು ನ್ಯೂಸ್

Chikmgalur News

ಕಾಫಿ ಕಣಜದ ಸುದ್ದಿಜಾಲ

ನೆಲದ ಸಂಸ್ಕೃತಿ ಬಿಂಬಿಸುವ ಪ್ರೀ ವೆಡ್ಡಿಂಗ್ ವಿಡಿಯೋ : ಸಾಮಾಜಿಕ ಜಾಲತಾಣದಲ್ಲಿ ಲೈಕೋ ಲೈಕು !!

ಚಿಕ್ಕಮಗಳೂರು : ಚಿತ್ರ ವಿಚಿತ್ರವಾಗಿ ಪ್ರೀ ವೆಡ್ಡಿಂಗ್ ಶೂಟ್ ಮಾಡುವ ಈ ಕಾಲದಲ್ಲಿ ನಮ್ಮ ನೆಲದ ಸಂಸ್ಕೃತಿ ಬಿಂಬಿಸುವ ಪ್ರೀ ವೆಡ್ಡಿಂಗ್ ವಿಡಿಯೋ ಮಾಡಿದ ಈ ಜೋಡಿ ಈಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ. ಉತ್ತರಕನ್ನಡ ಹಾಗೂ ಶಿವಮೊಗ್ಗ ಮೂಲದ ಜೋಡಿಯೊಂದು ಯಕ್ಷಗಾನ ಹಾಗೂ ಭರತನಾಟ್ಯವನ್ನು ಬಿಂಬಿಸುವ ನೃತ್ಯರೂಪಕವನ್ನು ಪ್ರೀ ವೆಡ್ಡಿಂಗ್ ಶೂಟ್ ಮಾಡಿದ್ದು, ನೆಟ್ಟಿಗರ ಮನ ಗೆದ್ದಿದೆ. ಜೋಗ ಸಮೀಪದ ಕಾಳಮಂಜಿಯ ಚಂದನ್ ಕಲಾಹಂಸ ಹಾಗೂ ಯಲ್ಲಾಪುರ ಸಮೀಪದ ಉಮ್ಮಚಗಿಯ ಭಾರ್ಗವಿ ಬಿ.ಎಚ್ ಈ ವಿಡಿಯೋದಲ್ಲಿ ಭಾಗಿಯಾಗಿದ್ದಾರೆ. […]

“ನಾಲಗೆ” ಆಯುಧಗಳ ಪಿತಾಮಹ

ನಾಲಗೆ ಒಳ್ಳೆಯದ್ದು ಮತ್ತು ಕೆಟ್ಟದ್ದು ಎರಡನ್ನೂ ಮಾಡಿದೆ ಮತ್ತು ಮಾಡುತ್ತದೆ. ಯಾವುದೇ ದೇಶದ ಪ್ರಧಾನಿಯೊಬ್ಬ “ನಾಲಗೆ” ಹರಿಬಿಟ್ಟರೆ ದೇಶದೇಶಗಳ ನಡುವೆ ಯುದ್ಧವೇ ನಡೆದು ಮಾರಣ ಹೋಮವೇ ನಡೆದ ಉದಾಹರಣೆ ಇವೆ. “ನಾಲಗೆಗೆ” ಮೂಳೆ ಇಲ್ಲ; ಆದರೆ ತಪ್ಪು ಮಾತನಾಡುವ ಮೂಲಕ ಮೂಳೆ ಮುರಿಯುವ ಮತ್ತು ಮುರಿಸುವ ಶಕ್ತಿ ಇದೆ. ನೆರೆಹೊರೆಯವರನ್ನು, ಸಂಬಂಧಿಕರನ್ನು, ರಾಜಕಾರಣಿಗಳು ಸೇರಿದಂತೆ ಅತ್ತೆಸೊಸೆ ನಾದಿನಿ ಜಗಳದಿಂದ ಹಿಡಿದು ಅಣ್ಣತಮ್ಮಂದಿರನ್ನು ವಿಭಾಗಿಸುವುದೇ “ನಾಲಗೆ”, ನಕಲಿ ಜೋತಿಷ್ಯ, ಪೊಳ್ಳು ಭವಿಷ್ಯ, ಮೌಢ್ಯದ ಮಂತ್ರಗಳು, ಸುಳ್ಳು ಮೋಸದ ಮಾತು, […]

ಬ್ಯಾಂಕಿನಲ್ಲಿ ಗೋಲ್ ಮಾಲ್ : ಇನ್ನೂ ಸಿಗದ “ಚಿನ್ನ” – ಪ್ರತಿಭಟನೆ

ಚಿಕ್ಕಮಗಳೂರು : ಇಲ್ಲಿನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆದವರ ಚಿನ್ನವನ್ನು ತಕ್ಷಣ ಹಿಂದಿರುಗಿಸುವಂತೆ ರೈತ ಸಂಘ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಗುರು ಶಾಂತಪ್ಪ ಇಲ್ಲಿನ ಸೆಂಟ್ರಲ್ ಆಫ್ ಇಂಡಿಯಾದಲ್ಲಿ 145 ಗ್ರಾಹಕರು ಚಿನ್ನವನ್ನು ಅಡವಿಟ್ಟು ಸಾಲ ಪಡೆದಿದ್ದಾರೆ ಎಂದರು. ಸಾಕಷ್ಟು ಗ್ರಾಹಕರು ಸಾಲವನ್ನು ತೀರಿಸಿದ್ದರೂ ಚಿನ್ನವನ್ನು ನೀಡಲು ಹಿಂದೇಟು ಹಾಕಿದಾಗ ಸಂಶಯಗೊಂಡು ಪ್ರಶ್ನಿಸಿದಾಗ ಬ್ಯಾಂಕಿನಲ್ಲಿ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು. ಬ್ಯಾಂಕಿನ ಅಂದಿನ ವ್ಯವಸ್ಥಾಪಕರು […]

“ಸಣ್ಣ ರೈತರ ಜಮೀನಿಗೆ ಹಕ್ಕುಪತ್ರ  ನೀಡಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು “

ಅವರು ಬೆಂಗಳೂರಿನಲ್ಲಿಯೇ ಬದುಕು ಕಟ್ಟಿಕೊಳ್ಳಬಹುದಿತ್ತು. ಆದರೆ ಕೃಷಿ ಮತ್ತು ಹಳ್ಳಿಯ ಬದುಕಿನೆಡೆಗಿದ್ದ ತುಡಿತ ಮಲೆನಾಡಿನ ಆ ಹಳ್ಳಿಗೆ ಅವರನ್ನು ಕರೆತಂತು. ಕೃಷಿಗೆ ಬೇಕಾದ ಜಮೀನು ಇರಲಿಲ್ಲ. ಜಮೀನು ಕೊಳ್ಳುವಷ್ಟು ಹಣವೂ ಇರಲಿಲ್ಲ . ಸಂಬಂಧಿಯೊಬ್ಬರ ಸ್ವಲ್ಪ ಜಮೀನು ಇತ್ತು ದಾಖಲೆಗಳು ಇರಲಿಲ್ಲ. ಅದರಿಂದಾಗಿಯೇ ಕೃಷಿ ಮಾಡಬೇಕೆಂದಿದ್ದವರಿಗೆ ಕಡಿಮೆ ಬೆಲೆಗೆ ಆ ಜಮೀನು ಕೊಟ್ಟರು. ಅಲ್ಲಿ ಉತ್ಪತ್ತಿ ಏನೂ ಇರಲಿಲ್ಲ. ಸತತ ಪರಿಶ್ರಮದಿಂದ ಮೂವತ್ತು ವರ್ಷಗಳಲ್ಲಿ ಐದು ಎಕರೆಯಷ್ಟು ತೋಟ ಮಾಡಿದರು. ಅಡಿಕೆಗೆ ಹಳದಿ ಎಲೆ ರೋಗ ಇರುವ […]

ವೈದ್ಯ ವಿದ್ಯಾರ್ಥಿನಿ ಹತ್ಯೆ ಖಂಡಿಸಿ ಬೃಹತ್ ಮೌನ ಮೆರವಣಿಗೆ

ಚಿಕ್ಕಮಗಳೂರು: ಇತ್ತೀಚಿಗೆ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಇನ್ನರ್ ವೀಲ್ ಆಶಯದಲ್ಲಿ ಬೃಹತ್ ಮೌನ ಮೆರವಣಿಗೆ ನಡೆಯಿತು. ತಾಲೂಕ ಕಚೇರಿಯಿಂದ ಆಜಾದ್ ಮೈದಾನದವರೆಗೆ ನಡೆದ ಮೆರಣಿಗೆಯಲ್ಲಿ ಮಹಿಳೆಯರು ವಿದ್ಯಾರ್ಥಿಗಳು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಘಟನೆಯನ್ನು ಖಂಡಿಸಿ ನ್ಯಾಯಕ್ಕೆ ಒತ್ತಾಯಿಸಿ ಭಿತ್ತಿ ಪತ್ರಗಳನ್ನು ಹಿಡಿದು ಸಾಗಿದ ಮೆರವಣಿಗೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರೂ ಪಾಲ್ಗೊಂಡು ನ್ಯಾಯಕ್ಕಾಗಿ ಒತ್ತಾಯಿಸಿದರು. ಆಜಾದ್ ಮೈದಾನದಲ್ಲಿ ಬೀದಿ ನಾಟಕ ಪ್ರದರ್ಶನವು ನಡೆಯಿತು. ಬಹುತೇಕ ಮಹಿಳೆಯರು ಕಪ್ಪುಬಟ್ಟೆ ಧರಿಸಿ ಪಾಲ್ಗೊಂಡು ಮೌನ […]

ಸಹಾಯ ಹಸ್ತದ ಕೊರತೆ : ಭೀಮೇಶ್ವರ ಜೋಶಿ ವಿಷಾದ

ಚಿಕ್ಕಮಗಳೂರು-ಇಂದು ಸಮಾಜದ ಕೆಲವರಲ್ಲಿ ಸಹಾಯ ಹಸ್ತದ ಕೊರತೆ ಕಾಣುತ್ತಿದೆ ಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಡಾ. ಜಿ.ಭೀಮೇಶ್ವರ ಜೋಶಿ ವಿಷಾದಿಸಿದರು. ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಆಶಾಕಿರಣ ಚಾರಿಟಬಲ್ ಟ್ರಸ್ಟ್ ಮತ್ತು ಮೆಕೋಶಾ ಸಂಸ್ಥೆ ಯಿಂದ ಏರ್ಪಡಿಸಿದ್ದ ಮಲೆನಾಡು ಮಹೋತ್ಸವ ಚಾರಿಟಿ ಎಕ್ಸೊ÷್ಪÃ ೨೦೨೪ ಉದ್ಘಾಟಿಸಿ ಮಾತನಾಡಿದರು. ಇಲ್ಲಿನ ಆಶಾಕಿರಣ ಅಂಧಮಕ್ಕಳ ಶಾಲೆಗೆ ಭೇಟಿಕೊಟ್ಟು ಅಲ್ಲಿರುವವರ ಸೇವೆ ಮಾಡಿದರೆ ವಿಶೇಷವಾದ ದೇವರ ಅನುಗ್ರಹಕ್ಕೆ ಪಾತ್ರರಾಗುವ ಭಾಗ್ಯ ದೊರೆಯುತ್ತದೆ ಎಂದು ತಿಳಿಸಿದರು. ಒಂದು ಜೀವ ಸೃಷ್ಟಿಯಾಗುವ […]

ಚಿಕ್ಕಮಗಳೂರು ನಗರಸಭೆ: ಸುಜಾತ- ಅನು ನೂತನ ಸಾರಥಿಗಳು

ಚಿಕ್ಕಮಗಳೂರು: ಇಲ್ಲಿನ ನಗರ ಸಭೆ ನೂತನ ಅಧ್ಯಕ್ಷರಾಗಿ ಬಿಜೆಪಿಯ ಸುಜಾತಾ ಶಿವಕುಮಾರ್ ,ಉಪಾಧ್ಯಕ್ಷರಾಗಿ ಅನುಮಧುಕರ್ ಆಯ್ಕೆಯಾದರು.ನಗರಸಭೆ ಆವರಣದಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ತಮ್ಮ ಪ್ರತಿ ಸ್ಪರ್ಧಿಗಳ ವಿರುದ್ಧ 25-10 ಮತಗಳ ಅಂತರದಿಂದ ಜಯಗಳಿಸಿದರುಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ವಿಧಾನ ಪರಿಷತ್ ಉಪಸಭಾಪತಿ ಎಂ. ಕೆ. ಪ್ರಾಣೇಶ್, ಶಾಸಕರಾದ ಸಿ.ಟಿ ರವಿ ,ಎಸ್ .ಎಲ್. ಭೋಜೇಗೌಡ , ಎಚ್. ಡಿ .ತಮ್ಮಯ್ಯ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.ಬಿಜೆಪಿ -ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ಗೆಲುವು ನಿಶ್ಚಿತವಾಗಿದ್ದರೂ ಕಾಂಗ್ರೆಸ್ ಸಾಂಕೇತಿಕವಾಗಿ ಅಭ್ಯರ್ಥಿಗಳನ್ನು ಕಣಕ್ಕೆ […]

ರಾಣಿಝರಿಗೆ ಆಪತ್ತು :ಗೂಗಲ್ ಮಿಸ್‌ಗೈಡ್ -ಅಧಿಕಾರಿಗಳ ದೌಡು

ಚಿಕ್ಕಮಗಳೂರು: ರಾಣಿ ಝರಿಗೆ ಆಪತ್ತು ಬಂದಿದೆ ಎನ್ನುವ ರೀತಿಯ ಗೂಗಲ್ ಮಾಹಿತಿ ಅಧಿಕಾರಿಗಳನ್ನು ಕ್ಷಣ ಕಾಲ ಗೊಂದಲಕ್ಕೆ ಈಡು ಮಾಡಿದ ಘಟನೆ ನಡೆದಿದೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ರಾಣಿಝರಿ ಪಾಯಿಂಟ್ ಬಿರುಕು ಬಿಟ್ಟಿರುವ ರೀತಿ ಗೂಗಲ್ ಮ್ಯಾಪ್ ನಲ್ಲಿ ಗೋಚರಿಸಿದ್ದು, ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದರು. ಚಿಕ್ಕಮಗಳೂರು-ದಕ್ಷಿಣ ಕನ್ನಡ ಗಡಿಭಾಗದಲ್ಲಿರುವ ರಾಣಿ ಝರಿ ಪ್ರವಾಸಿ ತಾಣದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಗೂಗಲ್ ಮ್ಯಾಪ್‌ನಲ್ಲಿ ಬಿರುಕು ಕಂಡು ಬರುತ್ತಿರುವ ಹಿನ್ನೆಲೆ […]

ಮಲೆನಾಡಿನ ಉಳಿವಿಗೆ ರಾಜಿರಹಿತ ಹೊರಾಟ ಅಗತ್ಯ: ಗುರುಮೂರ್ತಿ ಜೋಗಿಬೈಲು

ಮಲೆನಾಡಿನಲ್ಲಿ ಒತ್ತುವರಿ ತೆರವು ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ವೇದಿಕೆಗಳನ್ನೇರುವ ರಾಜಕಾರಣಿಗಳು “ಉಗ್ರ”ಭಾಷಣಗಳ ಮೂಲಕ ಚಪ್ಪಾಳೆ ಗಿಟ್ಟಿಸುತ್ತಾರೆ. ಜೀವನ ನಡೆಸುವ ಅನಿವಾರ್ಯತೆಗೆ ಒಂದಷ್ಟು ಜಾಗ ಸಾಗುವಳಿ ಮಾಡಿ ಸರ್ಕಾರ ಹೇಳಿದಾಗಲೆಲ್ಲ ವಿವಿಧ ಅರ್ಜಿ ನಮೂನೆಗಳಲ್ಲಿ ಅರ್ಜಿ ಸಲ್ಲಿಸಿ ಹಕ್ಕುಪತ್ರಕ್ಕಾಗಿ ಕಾಯುತ್ತಲೇ ತಲೆ ಹಣ್ಣಾಗಿ ದಾರೆ. ತಾವು ಕಟ್ಟಿಕೊಂಡು ವಾಸವಾಗಿರುವ ಮನೆಗೆ ಹಕ್ಕುಪತ್ರ ಸಿಗಬಹುದೇನೋ ಎಂದು ಅರ್ಜಿ ಕೊಟ್ಟು ಕಾಯುತ್ತಿರುವ ಭೂರಹಿತ ಕೃಷಿ ಕಾರ್ಮಿಕರು ಒತ್ತುವರಿ ತೆರವಿನ ಭೀತಿಯಿಂದ ಪ್ರತಿಭಟನಾ ಸಭೆಗಳಿಗೆ ಬರುತ್ತಾರೆ. ಜೀವನ ನಡೆಸಲು ಸಾಕಷ್ಟು ಜಮೀನು ಇದ್ದೂ […]