ಪ್ರವಾಸಕ್ಕೆ ತೆರಳಿದ್ದ ವಾಹನ ಪಲ್ಟಿ : 5 ಮಕ್ಕಳಿಗೆ ಗಾಯ
ಚಿಕ್ಕಮಗಳೂರು : ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳ ವ್ಯಾನ್ ಪಲ್ಟಿ ಯಾಗಿ12 ಜನ ಮಕ್ಕಳಲ್ಲಿ 5 ಜನ ಮಕ್ಕಳಿಗೆ ಗಾಯ ವಾಗಿದೆ.ಚಿಕ್ಕಮಗಳೂರು ತಾಲೂಕಿನ ಕೈಮರ ಚೆಕ್ ಪೋಸ್ಟ್ ಬಳಿ ಘಟನೆ ನಡೆದಿದೆ. ಮುಳ್ಳಯ್ಯನಗಿರಿಗೆ ಪ್ರವಾಸಕ್ಕೆ ಹೊರಟಿದ್ದ ಟ್ರ್ಯಾಕ್ಸ್ ಉರುಳಿದೆ. ಮೈಸೂರಿನ ಗೋಪಾಲಸ್ವಾಮಿ ಶಾಲೆಯ ಮಕ್ಕಳು ಸರ್ಕಾರಿ ಬಸ್ ನಲ್ಲಿ ಚಿಕ್ಕಮಗಳೂರಿಗೆ ಬಂದಿದ್ದರುಚಿಕ್ಕಮಗಳೂರಿನಲ್ಲಿ ಟ್ರ್ಯಾಕ್ ಗಾಡಿಯನ್ನು ಬಾಡಿಗೆ ಮಾಡಿಕೊಂಡಿದ್ದು,ಕೈಮರ ಚೆಕ್ ಪೋಸ್ಟ್ ಬಳಿ ಟೈರ್ ಬ್ಲಾಸ್ಟ್ ಆಗಿ ಅನಾಹುತ ಸಂಭವಿಸಿದೆ.
ಚಿಕ್ಕಮಗಳೂರು ನಗರಸಭೆ ಆಯವ್ಯಯ: ಪೂರ್ವಭಾವಿ ಸಭೆ
ಚಿಕ್ಕಮಗಳೂರು-ನಗರಸಭೆಯ ೨೦೨೫-೨೬ ನೇ ಸಾಲಿನ ಆಯ-ವ್ಯಯ ಮಂಡನೆ ಪೂರ್ವಭಾವಿ ಸಭೆ ನಡೆಯಿತು.ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ನಾಗರೀಕರು ಹಲವು ಸಲಹೆ ನೀಡಿದರು.ಇಂಜಿನೀಯರ್ ನಾಗೇಂದ್ರ ಮಾತನಾಡಿ, ನಗರಸಭೆ ಆರ್ಥಿಕ ಸಬಲತೆ ಕಂಡುಕೊಳ್ಳಲು ಕಂದಾಯ ವಸೂಲಾತಿಗೆ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಬೇಕು. ಕಂದಾಯ ಬಾಕಿ ಉಳಿಸಿಕೊಂಡವರಿಗೆ ಅಂಚೆ ಮೂಲಕ ವರ್ಷಕ್ಕೊಮ್ಮೆ ನೋಟೀಸು ಕಳಿಸುವ ಕೆಲಸ ಮಾಡಿದರೆ ಮನೆ ಮನೆಗೆ ಸಿಬ್ಬಂದಿ ತೆರಳಿ ಮನವರಿಕೆ ಮಾಡುವುದು ತಪ್ಪುತ್ತದೆ ಎಂದು ಸಲಹೆ ಮಾಡಿದರು.ಕೆಲವರ ನಿವೇಶನ ಹಾಗೂ ಕಟ್ಟಡದ […]
ಅಮಿತ್ ಶಾ-ಸಿ.ಟಿ.ರವಿ ಹೇಳಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಧರಣಿ
ಚಿಕ್ಕಮಗಳೂರು:ಕೋಮುವಾದವನ್ನುಮುಂದಿಟ್ಟು ಜನರನ್ನು ಸಂಘರ್ಷಕ್ಕೀಡು ಮಾಡುವಸಂಘಪರಿವಾರದ ಮಾನಸಿಕತೆ ಆಮಿತ್ ಶಾ ಹೇಳಿಕೆಯಿಂದ ಬಹಿರಂಗಗೊಂಡಿದೆ ಎಂದು ಜಿಲ್ಲಾಕಾಂಗ್ರೆಸ್ ಉಸ್ತುವಾರಿ, ಮಾಜಿ ಸಚಿವ ರಮಾನಂದ ರೈ ಟೀಕಿಸಿದ್ದಾರೆ.ಸಂವಿಧಾನದ ಬಗ್ಗೆ ಅಮಿತ್ ಶಾ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಕುರಿತು ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ನೀಡಿದ ಹೇಳಿಕೆ ಖಂಡಿಸಿ ನಗರದ ಆಜಾದ್ವೃತ್ತದಲ್ಲಿ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿಮಾತನಾಡಿದರು.ಅಂಬೇಡ್ಕರ್ ಅವರನ್ನು ಅವಮಾನಿಸುವಮೂಲಕ ತಳವರ್ಗದ ಸಮುದಾಯವನ್ನುಪರೋಕ್ಷವಾಗಿ ದಮನಿಸುವ ಕೆಲಸವನ್ನು ಬಿಜೆಪಿ ಸೂಕ್ಷ್ಮವಾಗಿ ಮಾಡುತ್ತಿದೆ. ಈ ಬಗ್ಗೆ ಕೆಳ ವರ್ಗದ ಜನತೆ ಜಾಗೃತರಾಗಬೇಕಿದೆ ಎಂದರು.ಸಂವಿಧಾನದ […]
ನಿಷೇಧಿತ ಮದ್ಯ ವಶ : ಓರ್ವನ ಬಂಧನ
ಚಿಕ್ಕಮಗಳೂರು: ಅಬಕಾರಿ ಸಿಬ್ಬಂದಿ ದಾಳಿ ನಡೆಸಿಚಿಕ್ಕಮಗಳೂರು ನಗರದ ದರ್ಜಿ ಬೀದಿಯ ಮನೆಯೊಂದರಲ್ಲಿ ದಾಸ್ತಾನು ಇಟ್ಟಿದ್ದ ನಿಷೇಧಿತ ವಿವಿಧ ಬ್ರಾಂಡ್ ಗಳ ಮ ಮದ್ಯ ವಶಪಡಿಸಿಕೊಂಡಿದೆ .ಎಂ.ಕೆ. ಮಧುಕರ್ ಮನೆಯಲ್ಲಿ ಸಂಗ್ರಹಿಸಿ ಇಟ್ಟಿದ್ದ ಗೋವಾ ರಾಜ್ಯದಲ್ಲಿ ತಯಾರಿಸಿ ಕರ್ನಾಟಕ ರಾಜ್ಯದಲ್ಲಿ ಮಾರಾಟಕ್ಕೆ ನಿಷೇಧಿತ ವಿವಿಧ ಬ್ರಾಂಡ್‌ಗಳ ಒಟ್ಟು ೨೮.೨೫೦ ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.ಈ ಸಂದರ್ಭದಲ್ಲಿ ಗಯಾಸ್ ಪಾಷಾ, ಅಬಕಾರಿ ಉಪ ನಿರೀಕ್ಷಕರು, ಸಿಬ್ಬಂದಿಗಳಾದ ಗುರುಬಸವರಾಜ ಬಂಗಾರಿ, ತೀಥೇಶ ಬಿ.ಕೆ. ಭಾಗವಹಿಸಿದ್ದರು.
ಶಾಸಕ ಸಿ.ಟಿ ರವಿ ಬಿಡುಗಡೆ ಆದೇಶ : ಸಂಭ್ರಮಾಚರಣೆ
ಚಿಕ್ಕಮಗಳೂರು : ಶಾಸಕ ಸಿ.ಟಿ ರವಿ ಬಿಡುಗಡೆ ಆದೇಶದ ಹಿನ್ನೆಲೆ ಚಿಕ್ಕಮಗಳೂರಿನಲ್ಲಿಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ ಜರುಗಿತುಚಿಕ್ಕಮಗಳೂರಿನ ಸಿ.ಟಿ.ರವಿ ನಿವಾಸದ ಮುಂಭಾಗ ಸೇರಿದ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿ ತಿಳಿಸಿ ಸಂಭ್ರಮಿಸಿದರು.ಸಿ.ಟಿ ರವಿ ಪರ ಘೋಷಣೆ ಕೂಗಿದ ಕಾರ್ಯಕರ್ತರು ಡಿಕೆಶಿ ವಿರುದ್ಧ ಘೋಷಣೆ ಕೂಗಿದರು.ಮಹಿಳಾ ಕಾರ್ಯಕರ್ತರು ಶಾಸಕರ ಪರ ಘೋಷಣೆ ಕೂಗುತ್ತಾ ಕುಣಿದು ಕುಪ್ಪಳಿಸಿದರು
ಸಿ.ಟಿ.ರವಿ ಬಿಡುಗಡೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ; ಬಂದ್ ಕರೆ ವಿಫಲ
. ಚಿಕ್ಕಮಗಳೂರು : ಸಿ.ಟಿ.ರವಿ ಬಿಡುಗಡೆಗೆ ಆಗ್ರಹಿಸಿ ನಗರದ ಹನುಮಂತಪ್ಪ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.ಹೆಬ್ಬಾಳ್ಕರ್, ಡಿಕೆಶಿ, ಕಾಂಗ್ರೆಸ್, ಸಿದ್ದು ವಿರುದ್ಧ ಕಿಡಿಕಾರಿದ 100 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತುಹಲವು ಮಹಿಳೆಯರು ಭಾಗಿ ಆಗಿದ್ದು ಕೈಯಲ್ಲಿ ಸಿ.ಟಿ.ರವಿ ಫೋಟೋ ಹಿಡಿದು ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಟೈರ್ ಗಳನ್ನು ಸುಡಲಾಯಿತು.ಎರಡು ಗುಂಪುಗಳಾಗಿ ಪ್ರತಿಭಟನೆ ಸಡೆಸಿ ರಾ.ಹೆ. ಬಂದ್ ಮಾಡಿದರು.ಬಿಜೆಪಿ ಕಾರ್ಯಕರ್ತರನ್ನು ಸುತ್ತುವರೆದ ಪೊಲೀಸರು ಎಂ.ಜಿ. ರಸ್ತೆಯಲ್ಲಿ ಮೆರವಣಿಗೆಗೆ ವಿರೋಧ ವ್ಯಕ್ತಪಡಿಸಿದರು.ಶಾಸಕ ಸಿ.ಟಿ ರವಿ ಬಂಧನ […]
ದಲಿತರು ದೇವಸ್ಥಾನದ ಕಾಂಪೌಂಡ್ ಪ್ರವೇಶ, ದೇಗುಲಕ್ಕೆ ಬೀಗ, ಎರಡೂವರೆ ಲಕ್ಷ ದಂಡ…!
ಚಿಕ್ಕಮಗಳೂರು : ದಲಿತರು ದೇವಸ್ಥಾನದ ಕಾಂಪೌಂಡ್ ಒಳಗೆ ಹೋದರು ಎಂಬ ಕಾರಣಕ್ಕೆ ದೇವಸ್ಥಾನಕ್ಕೆ ಬೀಗ ಹಾಕಿ ದಲಿತರಿಗೆ ದಂಡ ಹಾಕಿರುವ ಘಟನೆ ನಡೆದಿದೆ .ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಸಮೀಪದ ಬಿ.ಕೋಡಿಹಳ್ಳಿ ಗ್ರಾಮದಲ್ಲಿ ಎರಡು ದಿನದ ಹಿಂದೆ ಬಿ.ಕೋಡಿಹಳ್ಳಿ ಗ್ರಾಮದ ಮಂಜಪ್ಪ ಹಾಗೂ ಮದನ್ ಗ್ರಾಮದ ಆಂಜನೇಯ ದೇವಸ್ಥಾನದ ಕಾಂಪೌಂಡ್ ಒಳಗೆ ಹೋಗಿದ್ದರು.ಗ್ರಾಮದ ಸವರ್ಣೀಯರು ಆ ಇಬ್ಬರಿಗೂ ದಂಡ ಹಾಕಿ ದೇವಸ್ಥಾನಕ್ಕೆ ಬೀಗ ಹಾಕಿದ್ದಾರೆ. ಎರಡು ದಿನದಿಂದ ಆಂಜನೇಯನಿಗೆ ಪೂಜೆ ಕೂಡ ನಿಂತಿದೆ.ದೇವಸ್ಥಾನದ ಗರ್ಭಗುಡಿ ಹಾಗೂ ಕಾಂಪೌಂಡ್ […]
ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ
ಶೃಂಗೇರಿ: ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನಲ್ಲಿ ನಡೆದಿದೆ.ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು ಈಗ ಆರೋಗ್ಯ ತಪಾಸಣೆ ವೇಳೆ ಘಟನೆ ಹೊರಬಂದಿದೆ.ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಯನ್ನು ಬಂಧಿಸಿದ್ದಾರೆ. ಈತ ತೆಕ್ಕೂರಿನ ಎಸ್ಟೇಟ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಆರೋಪಿಯೂ ಅಪ್ರಾಪ್ತನಾಗಿದ್ದು 17 ವರ್ಷದವನಾಗಿದ್ದಾನೆ, ಈತ ತೆಕ್ಕೂರಿನ ಎಸ್ಟೇಟ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂದು […]
ಡಿ.21 ರಂದು ”ಏಕ್ ಶಾಮ್ ರಫಿ ಕೇ ನಾಮ್” ಗೀತಗಾಯನ
ಚಿಕ್ಕಮಗಳೂರು :ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ ಹಾಗೂ ಕೆನರಾ ಬ್ಯಾಂಕ್ಇವರ ಸಹಯೋಗದಲ್ಲಿ ”ಏಕ್ ಶಾಮ್ ರಫಿ ಕೇ ನಾಮ್” ಗೀತಗಾಯನಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆಪೂರ್ವಿಗಾನಯಾನ-102ರ ಸಂಚಿಕೆಯಡಿಯಲ್ಲಿ ಈ ದೇಶಕಂಡ ಮಹಾನ್‌ಗಾಯಕಮೊಹಮ್ಮದ್ ರಫಿರವರ ಜನ್ಮ ಶತಮಾನೋತ್ಸವದ ಅಂಗವಾಗಿ ಡಿ. 21 ರ ಸಂಜೆ 6 ರಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.ಖ್ಯಾತ ಗಾಯಕ ಶಿವಮೊಗ್ಗದ ಸುರೇಖಾ ಹೆಗಡೆ, ಸ್ಟಾರ್ ಸಿಂಗಖ್ಯಾತಿಯ ಹಾಸನದ ಚೇತನರಾಮ್, ಬೀರೂರಿನ ವಿಷ್ಣು ಭಾರದ್ವಾಜ್, ಪೂರ್ವಿಯ ಸಾರಥಿ ವೆಂಕಟೇಶ್, ಕವಿತಾನಿಯತ್, ರೂಪ ಅಶ್ವಿನ್, […]
ಚಿಕ್ಕಮಗಳೂರು : ಎನ್. ಆರ್. ಪುರ ಬಳಿ ಕಾಡಾನೆ ದಾಳಿ – ತಂದೆ ಸಾವು ಮಗ ಬಚಾವ್
ಚಿಕ್ಕಮಗಳೂರು : ಜಿಲ್ಲೆಯಲ್ಲಿ ಆನೆ ದಾಳಿಗೆ ಮತ್ತೊಬ್ಬರು ಬಲಿ ಆಗಿದ್ದಾರೆ20 ದಿನದಲ್ಲಿ ಕಾಡಾನೆ ದಾಳಿಗೆ ಎರಡನೇ ಸಾವು ಇದಾಗಿದೆ.ಎನ್.ಆರ್.ಪುರ ತಾಲೂಕಿನ ಮಡಬೂರು ಗ್ರಾಮದ ಬಳಿ ಘಟನೆ ನಡೆದಿದ್ದು,ಎಲಿಯಾಸ್ (75) ಮೃತ ದುರ್ದೈವಿ, ಮಗ ವರ್ಗೀಸ್ ಪಾರಾಗಿದ್ದಾನೆ.ತೋಟಕ್ಕೆ ಹೋಗಿದ್ದ ತಂದೆ-ಮಗನ ಮೇಲೆ ಒಂಟಿ ಸಲಗ ದಾಳಿ ಮಾಡಿದೆ.ಮಗ ಓಡಿ ಹೋಗಿ ತಪ್ಪಿಸಿಕೊಂಡಿದ್ದಾನೆ, ತಂದೆ ಆನೆ ದಾಳಿಗೆ ಬಲಿ ಆಗಿದ್ದಾರೆ.ಕೇರಳದಿಂದ ಬಂದು ಅಡಿಕೆ-ಬಾಳೆ ತೋಟ ಮಾಡಿಕೊಂಡಿದ್ದ ಎಲಿಯಾಸ್.ಸಾಯಿಸಿದ ಬಳಿಕ ಮೃತದೇಹ ಸುತ್ತುತ್ತಾಮೃತದೇಹಕ್ಕೆ ಒದೆಯುತ್ತಾ, ಘೀಳಿಡುತ್ತಾ ಸ್ಥಳದಲ್ಲೇ ನಿಲ್ಲುವ ಮೂಲಕ ಆತಂಕ […]