ಚಿಕ್ಕಮಗಳೂರು ನ್ಯೂಸ್

Chikmgalur News

ಕಾಫಿ ಕಣಜದ ಸುದ್ದಿಜಾಲ

ಅಕ್ರಮ ಚಟುವಟಿಕೆ ತಾಣ  ಚಂದುವಳ್ಳಿ ಬಸ್ ನಿಲ್ದಾಣ

                ಚಿಕ್ಕಮಗಳೂರು : ಬಾಳೂರು ಹೋಬಳಿಯ ಚಂದುವಳ್ಳಿ ತಂಗುದಾಣ ಕಸದ ಅಡ್ಡೆಯಾಗುತ್ತಿದೆ.                           ರಸ್ತೆಯ ಬದಿಯಲ್ಲಿ ಚಂದುವಳ್ಳಿಯ ಗ್ರಾಮಸ್ಥರಿಗೆ ಬಸ್ ತಂಗುದಾಣ ಕಟ್ಟಲಾಗಿದೆ.ಇಲ್ಲಿ ಕೆಲವು ಕಿಡಿಗೇಡಿಗಳು ಮದ್ಯಪಾನದ ಅಡ್ಡಾ ಮಾಡಿದ್ದಾರೆ.ಬೀಡಿ, ಸಿಗರೇಟು ಸೇದಿ ಅಲ್ಲಿಯೇ ಕಸವನ್ನು ಬಿಸಾಕಿ ಹೋಗುತ್ತಿದ್ದಾರೆ. ಇತರೆ ಕಸವೂ ಅಲ್ಲಿಯೇ ಬಿಸಾಕಿ ಗಬ್ಬು ನಾರುತ್ತಿದೆ.ಕಳೆದ ಬಾರಿಯ ಮಳೆಯ ಹೊಡೆತಕ್ಕೆ ಗೋಡೆ ಶಿಥಿಲವಾಗಿ ಬಿರುಕು ಬಿಟ್ಟಿದೆ. ಬಸ್ ನಿಲ್ದಾಣ ಸಾರ್ವಜನಿಕರ ಆಸ್ತಿಯಾಗಿದ್ದು  ಸ್ವಚ್ಚತೆ ಕಾಪಾಡಬೇಕಿದೆ.ಬಸ್ ನಿಲ್ದಾಣದಲ್ಲಿ ನಡೆಯುವ ಚಟುವಟಿಕೆಗಳಿಗೆ ಬ್ರೇಕ್ ಬೀಳಬೇಕಿದೆ.ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕೆಂದು […]

ಅಂತರ್ಜಾತಿ ವಿವಾಹ:ರಕ್ಷಣೆ ಕೋರಿ ಎಸ್. ಪಿ ಕಛೇರಿ ಮೆಟ್ಟಲೇರಿದ  ಪ್ರೇಮಿಗಳು

ಚಿಕ್ಕಮಗಳೂರು : ಅಂತರ್ಜಾತಿ ವಿವಾಹವಾದ ಪ್ರೇಮಿಗಳು ಎಸ್. ಪಿ ಕಛೇರಿಗೆ ಆಗಮಿಸಿ ಸೂಕ್ತ ರಕ್ಷಣೆ ಕೋರಿದ್ದಾರೆ.ಭದ್ರಾವತಿ ಮೂಲದ ದಲಿತ ಹುಡುಗಿ,ಶಾಲಿನಿ, ತರೀಕೆರೆ ಮೂಲದ ಒಕ್ಕಲಿಗ ಸಮಾಜದ ಯುವಕ ಅಜಯ್ದೇವಸ್ಥಾನದಲ್ಲಿ ಮದುವೆಯಾಗಿದ್ದು , ತಮಗೆ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.ಅಂತರ್ ಜಾತಿ ವಿವಾಹಕ್ಕೆ  ಎರಡೂ ಕುಟುಂಬದ ಪೋಷಕರ ವಿರೋಧ ನಡುವೆಯೂ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.ಇಬ್ಬರೂ ವಯಸ್ಕರಾಗಿರುವ ಕಾರಣ ರಕ್ಷಣೆ ನೀಡುವ ಭರವಸೆ  ಎಸ್. ಪಿ .ನೀಡಿದ್ದಾರೆ. ಇಬ್ಬರು ಕಾಲೇಜಿನಲ್ಲಿ ವ್ಯಾಸಂಗ ಮಾಡುವ ವೇಳೆಯಲ್ಲಿ ಪ್ರೀತಿ ಆಗಿದೆ.ಮದುವೆಗೆ ಪೋಷಕರು ಅಡ್ಡಿಪಡಿಸಿದ […]

ಅನುದಾನ ಬಿಡುಗಡೆ ವಿಳಂಬ ಖಂಡಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು : ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮಗಳಿಗೆ ರಾಜ್ಯಸರ್ಕಾರ  ಅನುದಾನ ಬಿಡುಗಡೆ ಮಾಡದಿರುವುದನ್ನು ಖಂಡಿಸಿ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗ ಗಳ ಮೋರ್ಚಾದ ನೇತೃತ್ವದಲ್ಲಿ  ಆಜಾದ್‌ಪಾರ್ಕ್ ವೃತ್ತದಲ್ಲಿ  ಪ್ರತಿಭಟನೆ ನಡೆಯಿತು.ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಮಾತನಾಡಿರಾಜ್ಯದಲ್ಲಿ ಕಾಂಗ್ರೆಸ್‌ನ ಸರ್ಕಾರ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಪೂರೈಸುತ್ತಿದ್ದು ರಾಜ್ಯದ ಉದ್ದಗಲಕ್ಕೂ ಪ್ರವಾಸ ಕೈಗೊಂಡರೆ ಯಾವುದೇ ಜಿಲ್ಲೆ ಅಥವಾ ತಾಲ್ಲೂಕಿಗೆ  ಸರ್ಕಾರ ಅನುದಾನ ನೀಡಿಲ್ಲ ಎಂದು ಟೀಕಿಸಿದರು.ಜನಸಾಮಾನ್ಯರ ಬದುಕಿನಲ್ಲಿ ಆಟವಾಡುವ ಜೊತೆಗೆ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ, ಪ್ರಕರಣ […]

ಚಿಕ್ಕಮಗಳೂರು ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ

ಚಿಕ್ಕಮಗಳೂರು : ನಗರಕ್ಕೆ ನೀರು ಪೂರೈಸುವ ಪೈಪ್ ಲೈನ್ ದುರಸ್ತಿ ಇರುವುದರಿಂದ ಡಿ. ೧೯ ಮತ್ತು ೨೦ ರಂದು ನೀರು ಪೂರೈಕೆಯಲ್ಲಿ ವ್ಯತ್ಯಾಸ ಆಗಲಿದೆ.ಚಿಕ್ಕಮಗಳೂರು ನಗರಕ್ಕೆ ನೀರು ಪೂರೈಸುವ ಯಗಚಿಯಿಂದ ಹಾದು ಹೋಗಿರುವ ಪೈಪ್‌ಲೈನ್ ಮಾರ್ಗವು ಮಾಗಡಿಯ ಹತ್ತಿರ ಮತ್ತು ಕರಗಡ ಬಳಿ ಒಡೆದು ಹೋಗಿದೆ.ದುರಸ್ಥಿ ಕಾರ್ಯ ಹಮ್ಮಿಕೊಂಡಿರುವುದರಿಂದ ಡಿ. ೧೯ ರಿಂದ ೨೦ ರವರೆಗೆ ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ನಗರಸಭೆ ಪೌರಾಯುಕ್ತರು  ತಿಳಿಸಿದ್ದಾರೆ

ಮುಳ್ಳಯ್ಯನಗಿರಿ ಸಂರಕ್ಷಿತ ಪ್ರದೇಶದಲ್ಲಿ ‘ಜಾಯ್‌ರೈಡ್’’ ಹೆಲಿಟೂರಿಸಂ ಆರಂಭಕ್ಕೆ ವಿರೋಧ ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಸಂರಕ್ಷಿತ ಪ್ರದೇಶದಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು ಸರ್ಕಾರ ಪರಿಸರದ ಮೇಲಾಗುವ ಪರಿಣಾಮಗಳನ್ನು ಲೆಕ್ಕಿಸದೆ ಹೆಲಿಟೂರಿಸಂ ಆರಂಭಿಸಲು ನಿರ್ಧರಿಸಿರುವುದನ್ನು  ಪರಿಸರವಾದಿಗಳು ಆಕ್ಷೇಪಿಸಿದ್ದಾರೆ.ಪ್ರವಾಸೋದ್ಯಮ ಇಲಾಖೆ  ‘ಜಾಯ್‌ರೈಡ್’ ಘೋಷವಾಕ್ಯ ಅಡಿ  ಪ್ರವಾಸೋದ್ಯಮ ಉತ್ತೇಜಿಸುವ ಮುನ್ನ ಮುಳ್ಳಯ್ಯನಗಿರಿ ಹಾಗೂ ಅದಕ್ಕೆ ಹೊಂದಿಕೊಡಿರುವ ಗಿರಿ ಪ್ರದೇಶದ ಸೂಕ್ಷ್ಮತೆ ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದ್ದಾರೆ. ಅನೇಕ ನದಿಗಳ ಉಗಮ ಶೋಲಾ ಕಾಡುಗಳಿಂದ ಕೂಡಿದ ಅತ್ಯಂತ ಉತ್ತಮ ಜಲಮೂಲಕ್ಕೂ ಆಧಾರವಾದ ಮುಳ್ಳಯ್ಯನಗಿರಿ ಬೆಟ್ಟ ಪ್ರದೇಶ […]

ಉಪನಿಷತ್ತುಗಳು ಜ್ಞಾನದೃಷ್ಟಿ ಜೊತೆಗೆ ವೈಜ್ಞಾನಿಕ ದೃಷ್ಟಿಯೂ ಆಗಿದೆ :ಹರಿಹರಪುರ ಶ್ರೀ

ಚಿಕ್ಕಮಗಳೂರು: ಉಪನಿಷತ್ತುಗಳು ಮನುಷ್ಯ ಕುಲಕ್ಕೆ ಜ್ಞಾನದೃಷ್ಟಿ ಮಾತ್ರವಲ್ಲ, ವೈಜ್ಞಾನಿಕ ದೃಷ್ಟಿ ಕೂಡ ಹೌದು. ಅವು ಮಾನವ ಜನಾಂಗಕ್ಕೆ ಬೆಳಕಿನ ಮಾರ್ಗವನ್ನು ತೋರಿಸುತ್ತವೆ ಎಂದು ಹರಿಹರಪುರ ಶ್ರೀಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.ಬ್ರಹ್ಮಸಮುದ್ರ ರಂಗಣ್ಣನ ಛತ್ರದಲ್ಲಿ  ಉದ್ಭವ ಪ್ರಕಾಶನ ಟ್ರಸ್ಟ್, ಬೆಂಗಳೂರಿನ ಋಷ್ಯಶೃಂಗ ಪ್ರತಿಷ್ಠಾನ ಹಾಗೂ  ಬ್ರಾಹ್ಮಣ ಮಹಾಸಭಾದಿಂದ ಏರ್ಪಡಿಸಿದ್ದ ಕ ಡಾ.ಬೆಳವಾಡಿ ಹರೀಶ್ ಭಟ್ಟ ವಿರಚಿತ ನೂರಾರು ಉಪನಿಷತ್ತುಗಳ ಅಧ್ಯಯನದ ಎರಡು ಸಂಪುಟಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಭಗವಂತನ ತತ್ವ, ಆತ್ಮನ ಸ್ವರೂಪ, ಜೀವ, ಜಗತ್ತು, […]

ಬಿನ್ನಡಿ ಗ್ರಾಮಕ್ಕೆ ಕಲುಷಿತ‌ ಕುಡಿಯುವ ನೀರು ಪೂರೈಕೆ : ಆರೋಪ

ಚಿಕ್ಕಮಗಳೂರು:ತರುವೆ ಗ್ರಾಮ ಪಂಚಾಯತಿಗೆ ಸೇರುವ ಬಿನ್ನಡಿ  ಗ್ರಾಮಕ್ಕೆ ಬರುವ ಕುಡಿಯುವ ನೀರು ಕಲುಷಿತ ಗೊಂಡಿದ್ದು ಕುಡಿಯಲು ಯೋಗ್ಯವಾಗಿಲ್ಲ ಎಂದು ಗ್ರಾಮಸ್ಥರು  ಆರೋಪಿಸಿದ್ದಾರೆ.  ಕುಡಿಯುವ ನೀರಿನ ಟ್ಯಾಂಕ್ ಒಳಗೆ ಕಸ ಹಾಗೂ ಇನ್ನಿತರ ಗಲೀಜು ಸೇರಿಕೊಂಡು ಗ್ರಾಮಸ್ಥರಿಗೆ ತೊಂದರೆ ಆಗುತ್ತಿದೆ ಎಂದಿದ್ದಾರೆ.ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ದಟ್ಟವಾಗಿದ್ದು ಸಂಬಂದ ಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ವಹಿಸುವಂತೆ ಸ್ಥಳೀಯರಾದ ವೆಂಕಟೇಶ್ ಆಗ್ರಹಿಸಿದ್ದಾರೆ .

ಹಾಸನ ಮೂಲದ ವ್ಯಕ್ತಿ ಚಾರ್ಮಾಡಿ ಘಾಟ್ ನಲ್ಲಿ ಆತ್ಮಹತ್ಯೆಗೆ ಯತ್ನ : ಜೀವ ಉಳಿಸಿದ 112 ಪೊಲೀಸರು        

                ಚಿಕ್ಕಮಗಳೂರು: ಚಾರ್ಮಾಡಿ ಬಳಿಯ ಏಕಲವ್ಯ ಶಾಲೆಯ ಸಮೀಪ ಹಾಸನ ಮೂಲದ ವ್ಯಕ್ತಿಯೋರ್ವ ಹರಿತದ ಆಯುಧದಿಂದ ಕುತ್ತಿಗೆ ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.112  ಸಂಚಾರಿ ಪೊಲೀಸರು ಹಾಸನ ಮೂಲದ ಮನು  ಎಂಬುವನನ್ನು ರಕ್ಷಿಸಿ ಉಳಿಸಿದ್ದಾರೆ.ಹಾಸನದಿಂದ ಕೊಟ್ಟಿಗೆಹಾರಕ್ಕೆ ಬಂದ ಮನು ಚಾರ್ಮಾಡಿ ಘಾಟ್ ಬಳಿ ಏಕಲವ್ಯ ಶಾಲೆಯ ಸಮೀಪ ರಸ್ತೆಯಲ್ಲಿ ತನ್ನ ಕುತ್ತಿಗೆಯನ್ನು ಬ್ಲೇಡಿನಿಂದ ಕುಯ್ದು ಸ್ನೇಹಿತರಿಗೆ ವ್ಯಾಟ್ಸ್ ಆಫ್ ಮೂಲಕ ವೀಡಿಯೋ ಸಂದೇಶ ಕಳುಹಿಸಿದ್ದಾನೆ.ಅಲರ್ಟ್ ಆದ ಸ್ನೇಹಿತರು 112 ಸಂಚಾರಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.ತಕ್ಷಣ […]

ಕೆ.ಆರ್.ಪೇಟೆ ಗ್ರಾಮದಲ್ಲಿ ರಾತ್ರಿ ಕಾಣಿಸಿಕೊಂಡ ಒಂಟಿ ಸಲಗ

ಚಿಕ್ಕಮಗಳೂರು : ಕಾಫಿನಾಡ ಹಳ್ಳಿಗರಿಗೆ ಮ ಕಾಡಾನೆ ಗೋಳು ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.ಕೆ.ಆರ್.ಪೇಟೆ ಗ್ರಾಮದಲ್ಲಿ ಒಂಟಿ ಸಲಗ ರಾತ್ರಿ ಓಡಾಡಿದ್ದುಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಕಾಡಾನೆ ಗ್ರಾಮಕ್ಕೆ ಬರುತ್ತಿದ್ದಂತೆ, ನಾಯಿಗಳು ಬೊಗಳಿದ್ದು ಮನೆಯಿಂದ  ಜನ  ಹೊರಬಂದು ನೋಡಿದ್ದಾರೆ.ಕಾಡಾನೆ ಓಡಾಟದಿಂದ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದ್ದು, ಹಾಸನದಿಂದ ನಿರಂತರವಾಗಿ ಕಾಡಾನೆಗಳು ಬರುತ್ತಿದ್ದು, ಕಾಡಾನೆ ಸ್ಥಳಾಂತರ ಮಾಡುವಂತೆ ಸ್ಥಳೀಯರು ಆಗ್ರಹ ಮಾಡಿದ್ದಾರೆ

ಆನೆ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಕ್ರಮ : ಈಶ್ವರ ಖಂಡ್ರೆ

ಚಿಕ್ಕಮಗಳೂರು : ರಾಜ್ಯದ ಚಿಕ್ಕಮಗಳೂರು, ಕೊಡಗು, ಹಾಸನ ಸೇರಿದಂತೆ  ನಾನಾ ಭಾಗದಲ್ಲಿನ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು  ಪ್ರಯತ್ನ ಮಾಡುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಭರವಸೆ ನೀಡಿದರು.ಬಾಳೆಹೊನ್ನೂರಿನ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯ ಸರ್ಕಾರವು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಫಲವಾಗಿ ಕರ್ನಾಟಕದಲ್ಲಿ 6395 ಆನೆಗಳಿದೆ ಎಂದರು.ಆನೆಗಳ ಸಂಖ್ಯೆಯಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದ್ದರೆ, ಹುಲಿಯ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದೆ. ಅರಣ್ಯ ಪ್ರದೇಶ ಕಡಿಮೆ ಆಗುತ್ತಿರುವುದರಿಂದ […]