ಚಿಕ್ಕಮಗಳೂರು ನ್ಯೂಸ್

Chikmgalur News

ಕಾಫಿ ಕಣಜದ ಸುದ್ದಿಜಾಲ

ಸಾಮಾಜಿಕ ನ್ಯಾಯಕ್ಕಾಗಿ ಒತ್ತಾಯಿಸಿ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ

ಚಿಕ್ಕಮಗಳೂರು: ಹಿಂದುಳಿದವರು ಅಲ್ಪಸಂಖ್ಯಾತರ ಬಗ್ಗೆ ಕೇವಲ ನೆಪ ಮಾತ್ರದ ಮೌಖಿಕ ಹೇಳಿಕೆ ನೀಡಿ ಕಣ್ಣೊರೆಸುವ ತಂತ್ರ  ಮಾಡುತ್ತಿರುವ ಸರ್ಕಾರದ ನೀತಿ ಖಂಡಿಸಿ,   ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ -2 ಅನ್ನು ಎಸ್‌ಡಿಪಿಐ ಹಮ್ಮಿಕೊಂಡಿದೆಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಅಂಗಡಿ ಚಂದ್ರುಅಹಿಂದ ಸರ್ಕಾರ, ಸಾಮಾಜಿಕ ನ್ಯಾಯದ ಚಾಂಪಿಯನ್ ಎಂದು ಹೇಳುವ  ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತ, ಅಲ್ಪ ಸಂಖ್ಯಾತ, ಮತ್ತು ಹಿಂದುಳಿದ ವರ್ಗಗಳಹಲವು ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಿಲ್ಲ ಎಂದು ಆರೋಪಿಸಿದರು.ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕೂಡಲೇ […]

ಎಸ್.ಎಮ್. ಕೃಷ್ಣ ನಿಧನ: ನಾಳೆ ಸರ್ಕಾರಿ ರಜೆ ಘೋಷಣೆ

ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ನಿಧನ ಹಿನ್ನೆಲೆಯಲ್ಲಿ ನಾಳೆ (ಡಿ.11) ಸರ್ಕಾರಿ ರಜೆ ಘೋಷಿಸಲಾಗಿದೆ.ಮಾಜಿ ರಾಜ್ಯಪಾಲರು, ಮಾಜಿ ಕೇಂದ್ರ ಸಚಿವರು, ಮಾಜಿ ಮುಖ್ಯಮಂತ್ರಿಗಳು ಆಗಿದ್ದ ಎಸ್.ಎಂ. ಕೃಷ್ಣ ಇಂದು ಮುಂಜಾನೆ ನಿಧನರಾಗಿದ್ದು ನಾಳೆ ಅವರ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.ಈ ಹಿನ್ನೆಲೆಯಲ್ಲಿ ನಾಳೆ ಎಲ್ಲಾ ಸರ್ಕಾರಿ ಕಚೇರಿ , ಶಾಲಾ ಕಾಲೇಜುಗಳಿಗೆ ( ಖಾಸಗಿ ಅನುದಾನಿತ ಸೇರಿ) ರಜೆ ಘೋಷಿಸಲಾಗಿದೆ.ಡಿ 12 ರವರೆಗೆ ಶೋಕಾಚರಣೆ ಪ್ರಕಟಿಸಲಾಗಿದೆ .

ಸಮ್ಮೇಳನಗಳ ಒಳಗಿನ ಒಣ ಚರ್ಚೆಗಳು ಮತ್ತು ಬಾಡೂಟ ಹೋರಾಟವೂ….

ಕನ್ನಡ ಸಂಸ್ಕೃತಿಯ ಕಂಟಕಗಳಲ್ಲಿ ಪ್ರಮುಖವಾಗಿರುವ ಬ್ರಾಹ್ಮಣಶಾಹಿ ಸಂಸ್ಕೃತಿಯ ಮೇಲಾಧಿಪತ್ಯದ ವಿರುದ್ಧ..ಈವರೆಗಿನ ಸಮ್ಮೇಳನಗಳಭಾಷಣಗಳು -ನಿರ್ಣಯಗಳು ತೋರಲಾಗದ ಪರಿಣಾಮಕಾರಿ ಪ್ರತಿರೋಧವನ್ನು…ಸಾಂಕೇತಿಕವಾಗಿಯೇ ಆದರೂಮಂಡ್ಯದ ಬಾಡೂಟ ಹೋರಾಟ ತೋರಿದೆ….ಈ ಹೋರಾಟ ಸಮ್ಮೇಳನದ ರೂಢಿಗತ ನಡವಳಿಗಳಿಗೆ ಯಾವ ಅಡ್ಡಿಯನ್ನು ಮಾಡುತ್ತಿಲ್ಲ..ಬದಲಿಗೆ ಜಡವಾಗುತ್ತಿದ್ದ ಕನ್ನಡ ಜಾತ್ರೆಗೆ ಹೊಸ ಜನಪರ ಸವಾಲೊಡ್ಡಿ ಅರ್ಥಪೂರ್ಣ ವಾಗುವ ಅವಕಾಶ ನೀಡಿದೆ…ಆದ್ದರಿಂದ ನಾಡಿಗರಿಂದ ನಾಡೋಜರವರೆಗೆ ಈ ಹೋರಾಟವನ್ನು ಬೆಂಬಲಿಸಬೇಕು…ಅದರ ಜೊತೆಗೆಬಾಡೂಟದ ಹೋರಾಟವು  ಬಹುಜನ  ಕನ್ನಡ ಬದುಕು ಬವಣೆ ಮತ್ತು ಸಂಸ್ಕೃತಿಗಳ ಪರ್ಯಾಯ ವೇದಿಕೆಯಾಗಿ ವಿಸ್ತರಿಸಿಕೊಳ್ಳಬೇಕು… -ಶಿವಸುಂದರ್

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ವಿಧಿವಶ: ಹುಟ್ಟೂರಲ್ಲಿ ಅಂತ್ಯಕ್ರಿಯೆ

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ ವಿಧಿವಶರಾಗಿದ್ದಾರೆ.ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸದಾಶಿವನಗರದ ತಮ್ಮ ನಿವಾಸದಲ್ಲಿ ತಡರಾತ್ರಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.ಕರ್ನಾಟಕದ ಹಿರಿಯ ರಾಜಕಾರಣಿಗಳಲ್ಲೊಬ್ಬರು. 1999 ರಿಂದ 2004 ರವರೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಮಹಾರಾಷ್ಟ್ರ ರಾಜ್ಯದ ಮಾಜಿ ರಾಜ್ಯಪಾಲರಾದ ಇವರು, ಕೇಂದ್ರ ವಿದೇಶಾಂಗ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.ವಿದ್ಯಾಭ್ಯಾಸದ ದೃಷ್ಟಿಯಿಂದ, ಕರ್ನಾಟಕದ ಅತ್ಯಂತ ಹೆಚ್ಚು ಸುಶಿಕ್ಷಿತ ಮುಖ್ಯಮಂತ್ರಿಗಳಲ್ಲಿ ಕೃಷ್ಣ ಒಬ್ಬರು.  ಬಹುಕಾಲ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು, ಬದಲಾದ ರಾಜಕೀಯ ಸನ್ನಿವೇಶಗಳ […]

ಆಲ್ದೂರು: ಬದಲಿ ಜಾಗಕ್ಕೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ

ಚಿಕ್ಕಮಗಳೂರು :ಆಲ್ದೂರು ಒಕ್ಕಲಿಗರ ಸಂಘಕ್ಕೆ ಪ್ರತ್ಯೇಕ ೩ ಎಕರೆ ಭೂಮಿ ನೀಡುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಜಿಲ್ಲಾ ಒಕ್ಕಲಿಗರ ಸಂಘದ ಆಶ್ರಯದಲ್ಲಿ ಮನವಿ ನೀಡಲಾಗಿದೆ .ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ ನಂತರ  ಮಾತನಾಡಿದ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ಆಲ್ದೂರು ಒಕ್ಕಲಿಗರ ಸಂಘಕ್ಕೆ ಜಾಗ ನಿಗದಿ ಪಡಿಸಿದ್ದು, ಈ ಜಾಗ  ಸ್ಮಶಾನಕ್ಕೆ ಯೋಗ್ಯವಲ್ಲ ಎಂದು ಕಳೆದ ೨೦ ವರ್ಷಗಳ ಹಿಂದೆ ಉಪವಿಭಾಗಾಧಿಕಾರಿ ತಹಶೀಲ್ದಾರ್‌ ವರದಿ ನೀಡಿದ್ದರು ಎಂದರು.ಗ್ರಾಮ ಪಂಚಾಯಿತಿಯಲ್ಲಿ ಒಕ್ಕಲಿಗರ ಸಂಘಕ್ಕೆ ಮೀಸಲಿಡಬೇಕೆಂದು ನಿರ್ಣಯ ಮಾಡಿದ್ದರು. ಒಕ್ಕಲಿಗರ ಸಂಘದವರು ೧೦ ಲಕ್ಷ […]

ದತ್ತ ಜಯಂತಿ ಸಕಲ ಸಿದ್ಧತೆ : ಹೊಸ ಆಚರಣೆಗೆ ಅವಕಾಶ ಇಲ್ಲ

ಚಿಕ್ಕಮಗಳೂರು: ಇದೇ ತಿಂಗಳ ೧೨-೧೪ ರವರೆಗೆ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ನಡೆಯಲಿರುವ ದತ್ತ ಜಯಂತಿಗೆ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ವಿಕ್ರಂ ಅಮಟೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ  ಆಚರಣೆ ನಡೆಸಲು ವ್ಯವಸ್ಥಾಪನಾ ಸಮಿತಿಗೆ ಅನುಮತಿ ನೀಡಲಾಗಿದೆ.  ಹೊಸ ಆಚರಣೆಗಳಿಗೆ ಅವಕಾಶ ಇರುವುದಿಲ್ಲ, . ಇದಕ್ಕೆ ಮುಖಂಡರೂ ಸಮ್ಮತಿಸಿದ್ದಾರೆ ಎಂದರು.ನೀರು, ಶೌಚಾಲಯ ಇತರೆ  ಮೂಲಸೌಕರ್ಯ ಹಾಗೂ ಸುಗಮ ವಾಹನ ಸಂಚಾರ ಮತ್ತು ವಾಹನಗಳ […]

ಕಳಸ ಸಮೀಪ ಅಪರೂಪದ ‘ರಕ್ತ ಕನ್ನಡಿ’ ಹಾವು ಪತ್ತೆ

ಚಿಕ್ಕಮಗಳೂರು :ಅಪರೂಪದ ರಕ್ತಕನ್ನಡಿ ಹಾವು ಪತ್ತೆಯಾಗಿದೆ.ಉರಗಗಳ ಸಂತತಿಯಲ್ಲೇ ಈ ಕೋರಲ್ ಸ್ನೇಕ್ ಭಾರಿ ಅಪಾಯಕಾರಿ ಎಂದು ಹೇಳಲಾಗುತ್ತಿದೆಮಲೆನಾಡಲ್ಲಿ ಇದನ್ನ ಹಪ್ಪಟೆ, ರಕ್ತಗನ್ನಡಿ, ಹವಳದ ಹಾವು ಎಂದು ಕರೆಯುತ್ತಾರೆಕಳಸ ತಾಲೂಕಿನ ಕಲ್ಮಕ್ಕಿ ಗ್ರಾಮದಲ್ಲಿ ಈ ಹಾವು ಪತ್ತೆಯಾಗಿದ್ದು,ದೇಹದ ಮೇಲೆ ಕಪ್ಪು ಕೆಳಭಾಗ ಕೆಂಪು ಬಣ್ಣದಿಂದ ಕೂಡಿದೆ .ಈ ಹಾವು ಕಡಿದರೆ‌‌ ಸಾಯೋದು ಕಡಿಮೆ, ಆದರೆ, ದೇಹಕ್ಕೆ ನಾನಾ ಸಮಸ್ಯೆ ಎದುರಾಗುತ್ತದೆ ಎನ್ನಲಾಗಿದೆ.ಈ ಹಾವಿನ ಹಲ್ಲು ಹೆಚ್ಚಾಗಿ ಬಾಗಿರುವುದರಿಂದ ವಿಷ ದೇಹ ಸೇರೋದು ಕಡಿಮೆ ಆದರೂ ಬೇರೆ ರೀತಿಯ ಅಪಾಯಗಳು […]

ಹಿರಿಯರ ಅನುಭವಗಳನ್ನು ಯುವ ವಕೀಲರು ಅನುಸರಿಸಿ : ಭಾನುಮತಿ

ಚಿಕ್ಕಮಗಳೂರ : ಹಿರಿಯ ವಕೀಲರ ಅನುಭವ ಹಾಗೂ ವಾದ ಮಂಡಿಸುವ ಚಾಣಕ್ಯತೆಯನ್ನು ಯುವ ವಕೀಲರು ಅನುಸರಿಸಬೇಕು ಎಂದು ಪ್ರಭಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ಭಾನುಮತಿ ಹೇಳಿದರು.ವಕೀಲರ ಸಂಘದಿಂದ ಏರ್ಪಡಿಸಿದ್ಧ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿ ವಕೀಲರು ಸಮಾಜದ ಮುಖ್ಯಭೂಮಿಕೆಯಲ್ಲಿ ಕರ್ತವ್ಯ ನಿರ್ವಹಿಸುವ ಜೊತೆಗೆ ರಾಜಕೀಯ ಕ್ಷೇತ್ರ ದಲ್ಲೂ ತೊಡಗಿಸಿಕೊಂಡು ಸಮಾಜ ಸುಧಾರಣೆಗೆ ಮುಂದಾಗುತ್ತಿರುವುದು ಖುಷಿಯ ಸಂಗತಿ ಎಂದರು.ವಕೀಲ ವೃತ್ತಿಯಲ್ಲಿ ಎಷ್ಟೇ ತಿಳಿದುಕೊಂಡರೂ ಅಹಂ ಎನ್ನುವುದು ಇರಕೂಡದು. ತಿಳುವಳಿಕೆ ಹೊಂದಿದ್ದರೂ ಇನ್ನಷ್ಟು ತಿಳಿಯುವ ಅಂಬಲವಿರಬೇಕು, ಯುವ […]

ಸಿರಿಧಾನ್ಯ ಖಾದ್ಯ ಹೆಚ್ಚು ಬಳಕೆ : ರೋಗ ತಡೆಗೆ ದಾರಿ -ಎಚ್ ಡಿ ತಮ್ಮಯ್ಯ

ಚಿಕ್ಕಮಗಳೂರು: ಸಿರಿಧಾನ್ಯಗಳಿಂದ ತಯಾರಾದ ಖಾದ್ಯಗಳನ್ನು ಹೆಚ್ಚು ಬಳಸುವುದರಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದು ಎಂದು  ಶಾಸಕ ಎಚ್.ಡಿ ತಮ್ಮಯ್ಯ ಹೇಳಿದರು.ಜಿಲ್ಲಾಡಳಿತದ   ಸಂಯುಕ್ತಾಶ್ರಯದಲ್ಲಿ  ಮಹಾತ್ಮ ಗಾಂಧಿ ಉದ್ಯಾನವನದಲ್ಲಿ (ರತ್ನಗಿರಿ ಬೋರೆ)  ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದ  ಖಾದ್ಯಗಳ ಪಾಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ  ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ನಮ್ಮ ಸಾಂಪ್ರದಾಯಿಕ ಆಹಾರ ಬೆಳೆಗಳಾದ ರಾಗಿ, ಜೋಳ, ಸಜ್ಜೆ, ನವಣೆ, ಸಾಮೆ, ಹಾರಕ, ಕೊರಲೆ, ಬರಗು ಇವುಗಳ ಬಳಕೆಯನ್ನು ಮರೆತು  ಪಾಶ್ಯಾತ್ಯ ಆಹಾರ ಪದ್ಧತಿಗೆ ಮಾರುಹೋಗುತ್ತಿದ್ದೇವೆ. ಇಂತಹ ಆಹಾರ ಪದ್ಧತಿಗಳಿಂದ […]

ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಅತಿಥಿ ಶಿಕ್ಷಕ ನೌಕರರ ಸಭೆ – ಬೆಳಗಾವಿ ಚಲೋ

ಚಿಕ್ಕಮಗಳೂರು : ಕನಿಷ್ಠ ವೇತನ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಡಿ.18 ರಂದು ಬೆಳಗಾವಿ ಚಲೋ ನಡೆಸಲು ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ  ಹಾಗೂ ಅತಿಥಿ ಶಿಕ್ಷಕರ ನೌಕರರು ನಿರ್ಧರಿಸಿದ್ದಾರೆ.ಇಲ್ಲಿನ ಪ್ರವಾಸಿ ಮಂದಿರದಲ್ಲಿ ರಾಜ್ಯ ಜಂಟಿ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷ ಎಸ್. ಶಿವಮೂರ್ತಿ ಅಧ್ಯಕ್ಷತೆಯಲ್ಲಿ  ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಹನುಮೇಗೌಡ  ಮಾತನಾಡಿ ಸಮಾಜ ಕಲ್ಯಾಣ ಇಲಾಖೆಯ ಡಾ. ಭಾರತ ರತ್ನ ಬಿ ಆರ್ .ಅಂಬೇಡ್ಕರ್ ವಸತಿ […]