ಚಿಕ್ಕಮಗಳೂರು ನ್ಯೂಸ್

Chikmgalur News

ಕಾಫಿ ಕಣಜದ ಸುದ್ದಿಜಾಲ

ಚಿಕ್ಕಮಗಳೂರು ನಗರಸಭೆ : ಅನುಭವಿಗಳಿಗೆ ಮಣೆ ಹಾಕಲು ಚಿಂತನೆ

Share:

ಚಿಕ್ಕಮಗಳೂರು: ಇಲ್ಲಿನ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಅನುಭವಿಗಳಿಗೆ ಮಣೆ ಹಾಕಲು ಬಿಜೆಪಿ – ಜೆಡಿಎಸ್ ಮೈತ್ರಿಕೂಟ ಚಿಂತನೆ ನಡೆದಿದೆ. ಆ 22 ರಂದು ಮಧ್ಯಾಹ್ನ 1 ಗಂಟೆಯ ಬಳಿಕ ಚುನಾವಣೆ ನಡೆಯಲಿದ್ದು, ನಾಲ್ವರು ಬಿರುಸಿನ ಲಾಬಿ ನಡೆಸುತ್ತಿದ್ದಾರೆ. ಬಿಜೆಪಿ – ಜೆಡಿಎಸ್ ಮೈತ್ರಿಕೂಟಕ್ಕೆ ಅಗತ್ಯ ಸಂಖ್ಯಾ ಬಲ ಇದ್ದು, ನಾಲ್ವರು ಸದಸ್ಯರನ್ನು ಸೆಳೆಯಲು ಕಾಂಗ್ರೆಸ್ ನಡೆಸುತ್ತಿರುವ ಯತ್ನ ಫಲ ನೀಡದು ಎನ್ನುವ ಆಶಾಭಾವನೆ ಮೈತ್ರಿಕೂಟಕ್ಕೆ ಇದೆ. ಕಳೆದ ಬಾರಿ ಅನುಭವಿಸಿದ “ಕಹಿ”ಯನ್ನು ಗಮನದಲ್ಲಿ ಇಟ್ಟುಕೊಂಡು ಎಚ್ಚರಿಕೆಯ ನಡೆ ವಹಿಸಲು ಬಿಜೆಪಿ ತೀರ್ಮಾನಿಸಿದೆ. ನಗರ ಸಭೆ ಆಡಳಿತ ಬಹುತೇಕ ಹಳಿ ತಪ್ಪಿದ್ದು, ಸಂಪೂರ್ಣವಾಗಿ ಸರಿಪಡಿಸಲು ಸಾಧ್ಯ ಆಗದೆ ಇದ್ದರೂ, ಕನಿಷ್ಠ ಪರವಾಗಿಲ್ಲ ಎನ್ನುವ ರೀತಿಯ ಆಡಳಿತ ನೀಡಬೇಕು ಎನ್ನುವ ಉದ್ದೇಶ ಮೈತ್ರಿ ಕೂಟ ಹೊಂದಿದೆ. ಈ ಹಿನ್ನೆಲೆಯಲ್ಲಿ ಹೊಸಬರಿಗೆ ಅವಕಾಶ ನೀಡುವ ಬದಲು “ಅನುಭವಿ”ಗಳನ್ನು ಆಯ್ಕೆ ಮಾಡಿ “ಶಸ್ತ್ರಚಿಕಿತ್ಸೆ “ನಡೆಸಿ ಆಡಳಿತದ ಮೇಲೆ ನಿಯಂತ್ರಣ ಸಾಧಿಸಲು ಚಿಂತನೆ ಸಾಗಿದೆ. ಒಟ್ಟು ಮೂರು ಹಂತಗಳಲ್ಲಿ ಅವಧಿ ಹಂಚಿಕೆ ಮಾಡಲು ಇತ್ತೀಚಿಗೆ ನಡೆದ ಸಭೆಯಲ್ಲಿ ನಿರ್ಧರಿಸಿದ್ದು ಎರಡು ಅವಧಿಗೆ ಬಿಜೆಪಿ ಹಾಗೂ ಒಂದು ಅವಧಿಗೆ ಜೆಡಿಎಸ್ ಎನ್ನುವ ತೀರ್ಮಾನಕ್ಕೆ ಬರಲಾಗಿದೆ. ಕಳೆದ 20 ವರ್ಷಗಳಲ್ಲಿ “ಉತ್ತಮ”ಆಡಳಿತ ನೀಡುವಲ್ಲಿ ವಿಫಲವಾಗಿರುವ ಬಿಜೆಪಿಯಿಂದ ಈಗ ” ಬದಲಾವಣೆ” ನಿರೀಕ್ಷಿಸಲು ಸಾಧ್ಯವೇ ಎನ್ನುವ ಪ್ರಶ್ನೆ ಸಾಮಾನ್ಯವಾಗಿದೆ. ನಗರ ಸಭೆಯಲ್ಲಿ ಬಹುತೇಕ ಕಾಮಗಾರಿಗಳು ಅವರವರ ಅಗತ್ಯಕ್ಕೆ ತಕ್ಕಂತೆ ನಡೆದಿವೆ ಹೊರತು, ಸಾರ್ವಜನಿಕ ಹಿತ ದೃಷ್ಟಿ ಎನ್ನುವುದು ಕೇವಲ ಘೋಶ ವಾಕ್ಯ ಎನ್ನುವ ಟೀಕೆ ಸಾಮಾನ್ಯವಾಗಿದೆ. ಸಾರ್ವಜನಿಕ ಆಸ್ತಿ ಕಬಳಕೆ ಸೇರಿದಂತೆ ಅನೇಕ ಅಕ್ರಮ ಚಟುವಟಿಕೆಗಳು, ಬೇಕಾಬಿಟ್ಟಿ ಆಡಳಿತ ಶಾಸಕ ಸಿ.ಟಿ .ರವಿ ಮೂಗಿನ ಕೆಳಗೇ ನಡೆದಿದ್ದರೂ, ಎಲ್ಲದಕ್ಕೂ “ಮಾಫಿ”ಅಸ್ತ್ರವನ್ನು ಬಳಸಿ “ಜಾಣ ಮೌನ”ಕ್ಕೆ ಜಾರಿದ ಪರಿಣಾಮ ನಗರಸಭೆ ಆಡಳಿತ ಸರಿಪಡಿಸಲಾಗದಷ್ಟು ಹದಗೆಟ್ಟಿದೆ ಎನ್ನುವ ಮಾತು -ಟೀಕೆ ಸಾರ್ವಜನಿಕರದು. ಜನಸ್ನೇಹಿ, ಸಾರ್ವಜನಿಕ ಹಿತದೃಷ್ಟಿ ಎನ್ನುವುದು ಎಲ್ಲಾ ಹಳಸಲು ವಾಕ್ಯಗಳಾಗಿದ್ದು ಹೊಸಬರು ಕಡಿದು ಕಟ್ಟೆ ಹಾಕುವುದು ಅಷ್ಟರಲ್ಲೇ ಇದೆ ಎನ್ನುತ್ತಾರೆ ಜನ. ಅದು ನಮ್ಮ ಜನಪ್ರತಿನಿಧಿ ಗಳಿಗೂ ಗೊತ್ತಿರುವ ಸತ್ಯ.!!

Leave a Reply

Your email address will not be published. Required fields are marked *

On Key

Related Posts

ಅಮಿತ್ ಶಾ-ಸಿ.ಟಿ.ರವಿ ಹೇಳಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಧರಣಿ

ಚಿಕ್ಕಮಗಳೂರು:ಕೋಮುವಾದವನ್ನುಮುಂದಿಟ್ಟು ಜನರನ್ನು ಸಂಘರ್ಷಕ್ಕೀಡು ಮಾಡುವಸಂಘಪರಿವಾರದ ಮಾನಸಿಕತೆ ಆಮಿತ್ ಶಾ ಹೇಳಿಕೆಯಿಂದ ಬಹಿರಂಗಗೊಂಡಿದೆ ಎಂದು ಜಿಲ್ಲಾಕಾಂಗ್ರೆಸ್‌ ಉಸ್ತುವಾರಿ, ಮಾಜಿ ಸಚಿವ ರಮಾನಂದ

ನಿಷೇಧಿತ ಮದ್ಯ ವಶ : ಓರ್ವನ ಬಂಧನ

ಚಿಕ್ಕಮಗಳೂರು:  ಅಬಕಾರಿ ಸಿಬ್ಬಂದಿ ದಾಳಿ ನಡೆಸಿಚಿಕ್ಕಮಗಳೂರು ನಗರದ ದರ್ಜಿ ಬೀದಿಯ ಮನೆಯೊಂದರಲ್ಲಿ ದಾಸ್ತಾನು ಇಟ್ಟಿದ್ದ ನಿಷೇಧಿತ ವಿವಿಧ ಬ್ರಾಂಡ್ ಗಳ