ಚಿಕ್ಕಮಗಳೂರು: ಗಾಂಜಾ ಸಾಗಣೆ ಪ್ರಕರಣದಲ್ಲಿ ಮೂವರಿಗೆ ಶೃಂಗೇರಿ ನ್ಯಾಯಾಲಯವು ಮೂರು ತಿಂಗಳ ಜೈಲು ಶಿಕ್ಷೆ ಮತ್ತು ತಲಾ 3000 ದಂಡ ವಿಧಿಸಿದೆ
ಕೊಪ್ಪ ತಾಲೂಕು ಸಿಗೋಡುವಾಸಿ ಶಫನ್ , ಮಂಗಳೂರು ಕೋಟೆಕಾರ್ ಸ್ಟ್ರೀಟ್ ನ ಅರ್ಫಾನ್ ಮತ್ತು ಮೊಹಮ್ಮದ್ ಇಕ್ಬಾಲ್ ಆರೋಪಿತರು.
11 .4 .2023 ರಂದು ಚಿಕ್ಕಮಗಳೂರು ಜಿಲ್ಲೆಯ ಗಡಿ ಭಾಗ ಶೃಂಗೇರಿ ತಾಲೂಕಿನ ಬೇಗಾರು ಗ್ರಾಮದಲ್ಲಿ ಅಬಕಾರಿ ನಿರೀಕ್ಷಕ ಲೋಕೇಶ್ ನೇತೃತ್ವದ ತಂಡ ಮಾರುತಿ ಸುಜುಕಿ ರಿಡ್ಸ್ ( ಕೆಎ 03 ಎಂ ಡಿ 27 31 ) ಕಾರನ್ನು ತಡೆದು ಶೋಧಿಸಿದಾಗ 40 ಗ್ರಾಂ ಗಾಂಜಾ ಪತ್ತೆಯಾಗಿದ್ದು ಪ್ರಕರಣ ದಾಖಲಿಸಿದ್ದರು.
ಕೊಪ್ಪ ತಾಲೂಕು ಅಬಕಾರಿ ನಿರೀಕ್ಷಕರಾದ ಬಿ ಎಸ್ ಪೃಥ್ವಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ಅಂತಿಮ ದೋಷಾರೋಪಣಾ ಪಟ್ಟಿ ಸಲ್ಲಿಸಿದರು. ಇಲಾಖಾ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಅರುಣಾಕ್ಷಿ ವಾದ ಮಂಡಿಸಿದ್ದರು.