ಚಿಕ್ಕಮಗಳೂರು: ಇತ್ತೀಚಿಗೆ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಇನ್ನರ್ ವೀಲ್ ಆಶಯದಲ್ಲಿ ಬೃಹತ್ ಮೌನ ಮೆರವಣಿಗೆ ನಡೆಯಿತು.
ತಾಲೂಕ ಕಚೇರಿಯಿಂದ ಆಜಾದ್ ಮೈದಾನದವರೆಗೆ ನಡೆದ ಮೆರಣಿಗೆಯಲ್ಲಿ ಮಹಿಳೆಯರು ವಿದ್ಯಾರ್ಥಿಗಳು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಘಟನೆಯನ್ನು ಖಂಡಿಸಿ ನ್ಯಾಯಕ್ಕೆ ಒತ್ತಾಯಿಸಿ ಭಿತ್ತಿ ಪತ್ರಗಳನ್ನು ಹಿಡಿದು ಸಾಗಿದ ಮೆರವಣಿಗೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರೂ ಪಾಲ್ಗೊಂಡು ನ್ಯಾಯಕ್ಕಾಗಿ ಒತ್ತಾಯಿಸಿದರು.
ಆಜಾದ್ ಮೈದಾನದಲ್ಲಿ ಬೀದಿ ನಾಟಕ ಪ್ರದರ್ಶನವು ನಡೆಯಿತು.
ಬಹುತೇಕ ಮಹಿಳೆಯರು ಕಪ್ಪುಬಟ್ಟೆ ಧರಿಸಿ ಪಾಲ್ಗೊಂಡು ಮೌನ ಪ್ರತಿಭಟನೆ ವ್ಯಕ್ತಪಡಿಸಿದರು. ನಿಯೋಗವೊಂದು ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.