ಚಿಕ್ಕಮಗಳೂರು: ರಾಣಿ ಝರಿಗೆ ಆಪತ್ತು ಬಂದಿದೆ ಎನ್ನುವ ರೀತಿಯ ಗೂಗಲ್ ಮಾಹಿತಿ ಅಧಿಕಾರಿಗಳನ್ನು ಕ್ಷಣ ಕಾಲ ಗೊಂದಲಕ್ಕೆ ಈಡು ಮಾಡಿದ ಘಟನೆ ನಡೆದಿದೆ
ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ರಾಣಿಝರಿ ಪಾಯಿಂಟ್ ಬಿರುಕು ಬಿಟ್ಟಿರುವ ರೀತಿ ಗೂಗಲ್ ಮ್ಯಾಪ್ ನಲ್ಲಿ ಗೋಚರಿಸಿದ್ದು, ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದರು.
ಚಿಕ್ಕಮಗಳೂರು-ದಕ್ಷಿಣ ಕನ್ನಡ ಗಡಿಭಾಗದಲ್ಲಿರುವ ರಾಣಿ ಝರಿ ಪ್ರವಾಸಿ ತಾಣದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಭಾರಿ ಮಳೆಯಾಗುತ್ತಿದೆ.
ಗೂಗಲ್ ಮ್ಯಾಪ್ನಲ್ಲಿ ಬಿರುಕು ಕಂಡು ಬರುತ್ತಿರುವ ಹಿನ್ನೆಲೆ ಪುತ್ತೂರು ಉಪವಿಭಾಗಾಧಿಕಾರಿಗಳು ರಾಣಿಝರಿ ಸಮೀಪ ಭಾರಿ ಮಳೆಯಾಗುತ್ತಿರುವುದರಿಂದ `ಭೂ ಕುಸಿತ’ವಾಗುವ ಸಂಭವವಿದೆ ಎಂದು ಚಿಕ್ಕಮಗಳೂರು ಉಪವಿಭಾಗಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಎಚ್ಚೆತ್ತ ಉಪವಿಭಾಗಾಧಿಕಾರಿಗಳ ಸೂಚನೆಯ ಮೇರೆಗೆ ನಿಡುವಾಳೆ ಮತ್ತು ಸುಂಕಸಾಲೆ ಗ್ರಾಮ ಲೆಕ್ಕಾಧಿಕಾರಿಗಳಾದ ಜಯಪ್ರಕಾಶ್ ಮತ್ತು ಮಹೇಶ್ ಸ್ಥಳ್ಕಕೆ ತೆರಳಿ ಪರಿಶೀಲಿಸಿ ಭೂಕುಸಿತ ಹಾಗೂ ಬಿರುಕು ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.
ಸದ್ಯಕ್ಕೆ ಯಾವುದೇ ಆಪತ್ತು ಇಲ್ಲದ ಹಿನ್ನೆಲೆಯಲ್ಲಿ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ