ಫಾದರ್ ಸ್ಟಾನ್ ಸ್ವಾಮಿಯ ನಂತರ ಮೋದಿ ಸರ್ಕಾರದ ಅಮಾನುಷ ಕ್ರೌರ್ಯಕ್ಕೆ ಮತ್ತೊಬ್ಬ ಜನಮಿತ್ರನ ಬಲಿ
ಕ್ರಾಂತಿಕಾರಿ ಸಾಯಿಬಾಬಾ ಅವರನ್ನು ವಿನಾಕಾರಣ ಹತ್ತು ವರ್ಷಗಳ ಕಾಲ ಜೈಲಿನಲ್ಲಿಟ್ಟು ಚಿತ್ರಹಿಂಸೆ ನೀಡಿತ್ತು.
ಹತ್ತು ವರ್ಷಗಳ ನಂತರ ಇತ್ತೀಚೆಗೆ ತಾನೇ ಅವರನ್ನು ಕೋರ್ಟು ನಿರ್ದೋಷಿ ಎಂದು ಬಿಡುಗಡೆ ಮಾಡಿತ್ತು..
ಆದರೆ ಶೇ. 90 ರಷ್ಟು ಅಂಗ ವೈಕಲ್ಯ ಹೊಂದಿದ್ದ ಅವರ ದೇಹ ಹತ್ತು ವರ್ಷದ ನರಕ ಸದೃಷ ಜೈಲುವಾಸ ಮತ್ತು ಸರ್ಕಾರ ಹಾಗೂ ಜೈಲು ಅಧಿಕಾರಿಗಳ ದುರುದ್ದೇಶ ಪೂರ್ವಕ ನಿರ್ಲಕ್ಷ್ಯದಿಂದಾಗಿ ಇನ್ನಷ್ಟು ನಜ್ಜುಗೂಜ್ಜಾಗಿತ್ತು..ಇದನ್ನು ಹೊರಗಡೆ ಬಂದ ನಂತರ ಅವರೇ ಪತ್ರಿಕಾ ಗೋಷ್ಟಿಯಲ್ಲಿ ವಿವರವಾಗಿ ತಿಳಿಸಿದ್ದರು..
ಬಿಡುಗಡೆಯಾಗಿ ಹೊರಗಡೆ ಬಂದ ಮೇಲೂ ಹಲವಾರು ಹೊಸ ಹಾಗೂ ವಿಲಕ್ಷಣ ದೈಹಿಕ ತೊಂದರೆಗಳು ಕಾದತೊಡಗಿದ್ದವು. ದೇಹ ಅದನ್ನು ತಡೆದುಕೊಳ್ಳಲಾಗದಷ್ಟು ನಿತ್ರಣ ವಾಗಿತ್ತು..
ಮೊನ್ನೆ ಸರ್ಜಾರಿಯೊಂದಕ್ಕೆ ಹೈದರಾಬಾದ್ ಆಸ್ಪತ್ರೆಗೆ ದಾಖಲಾಗಿದ್ದರು.. ಆದರೆ ಅದು ವಿಪರೀತ ಪರಿಣಾಮಗಳಿಗೆ ಕಾರಣವಾಗಿ ಸಾಯಿಬಾಬಾ ಅಸು ನೀಗಿದ್ದಾರೆ…
ಇದು ಸಾವಲ್ಲ… ಬಿಡುಗಡೆಯ ನಂತರವೂ ಬದುಕದಷ್ಟು ಕಿರುಕುಳ ಕೊಟ್ಟು ಮೋದಿ ಸರ್ಕಾರ ಮಾಡಿದ ಕೊಲೆ…
*ಶಿವ ಸುಂದರ್