ಚಿಕ್ಕಮಗಳೂರು: ಗುಡ್ಡ ,ಭೂಕುಸಿತಕ್ಕೆ ಅವೈಜ್ಞಾನಿಕ ಕಾಮಗಾರಿ, ಅಧಿಕ ಸಂಚಾರದ ಒತ್ತಡ ಕಾರಣ ಎಂದು ಜಿಯೋಲಾಜಿಕಲ್ ಸರ್ವೇ ತಂಡ ಚಿಕ್ಕಮಗಳೂರು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿ ಹಲವು ನಿಯಮ, ಕಟ್ಟುಪಾಡು ಅನುಸರಿಸಲು ಸೂಚಿಸಿದೆ.
ಕೇರಳದ ವಯನಾಡಿನಲ್ಲಿ ಸಂಭವಿಸಿದ ಗುಡ್ಡ ಕುಸಿತದ ಬಳಿಕ ಎಚ್ಚೆತ್ತ ರಾಜ್ಯ ಸರ್ಕಾರ (Karnataka Government) ಮಲೆನಾಡು ಭಾಗದ ಅಪಾಯಕಾರಿ ಸ್ಥಳಗಳ ಪಟ್ಟಿ ನೀಡುವಂತೆ ಕೇಳಿತ್ತು.
ಆಗಸ್ಟ್ನಲ್ಲಿ ಚಂದ್ರದ್ರೋಣ ಪರ್ವತಗಳ ಸಾಲಿನ ಕವಿಕಲ್ ಗಂಡಿ, ಮುಳ್ಳಯ್ಯನಗಿರಿ ಮಾರ್ಗ, ಬಾಬಾ ಬುಡನ್ ಗಿರಿ ಸೇರಿದಂತೆ ಅನೇಕ ಕಡೆಗಳಲ್ಲಿ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ ತಂಡ (Geological Survey Team) ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
ಅವೈಜ್ಞಾನಿಕ ಕಾಮಗಾರಿ, ವಾಹನಗಳ ದಟ್ಟಣೆ, ಅತಿಹೆಚ್ಚು ಮಳೆ ಗುಡ್ಡ, ಭೂ ಕುಸಿತಕ್ಕೆ ಕಾರಣವಾದ ಅಂಶಗಳು ಎಂದು ಉಲ್ಲೇಖಿಸಲಾಗಿದೆ.
ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತದ ಸಾಲು, ಚಾರ್ಮಾಡಿ ಘಾಟ್ ” ಅಪಾಯಕಾರಿ ವಲಯ ಆಗಿದ್ದು ಮುಳ್ಳಯ್ಯನಗಿರಿ ಚಂದ್ರದ್ರೋಣ ಪರ್ವತದ ಸಾಲುಗಳಲ್ಲಿ ವಾಹನ ದಟ್ಟನೆ ನಿಲ್ಲಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.
ಶೇ.80% ಅವೈಜ್ಞಾನಿಕ ಕಾಮಗಾರಿಯಿಂದಲೇ ಪಶ್ಚಿಮ ಘಟ್ಟಗಳ ಸಾಲು, ಮಲೆನಾಡು ಭಾಗದಲ್ಲಿ ಕುಸಿತ ಉಂಟಾಗುತ್ತಿದೆ ಎನ್ನುವ ಆತಂಕಕಾರಿ ಸಂಗತಿ ಹೊರ ಹಾಕಿದೆ.
ಜಿಯೋಲಾಜಿಕಲ್ ಸರ್ವೇ ತಂಡ ಚಿಕ್ಕಮಗಳೂರು ಜಿಲ್ಲೆಯ ಸಂಭವನೀಯ 88 ಅಪಾಯಕಾರಿ ಸ್ಥಳಗಳ ವರದಿ ನೀಡಿದೆ.