ಚಿಕ್ಕಮಗಳೂರು-ಕಿರ್ಲೋಸ್ಕರ್ ಕಂಪನಿಯು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪರಿಸರ ಸ್ನೇಹಿ ೨.೮ – ೫.೫ ಕೆವಿಎ ವರೆಗಿನ ಜನರೇಟರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ .
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಪನಿಯ ಸೀನಿಯರ್ ಜನರಲ್ ಮ್ಯಾನೇಜರ್ ಭೂಷಣ್ ಪವಾರ್
ಈ ಜನರೇಟರ್‌ಗಳನ್ನು ದೇಶದಲ್ಲೇ ಮೊದಲಬಾರಿಗೆ ಚಿಕ್ಕಮಗಳೂರು ನಗರದಲ್ಲಿ ದೇಶದಲ್ಲಿ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜನರೇಟರ್ ಉನ್ನತ ತಂತ್ರಜ್ಞಾನದ ಸುಧಾರಿತ ಉತ್ಪನ್ನವಾಗಿದ್ದು ವಿದ್ಯುತ್ ಸರಬರಾಜಿನಲ್ಲಿ ಉಂಟಾಗುವ ಏರಿಳಿತವನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆ ಎಂದಿದ್ದಾರೆ.
ಗುಣಮಟ್ಟದ, ಸ್ಥಿರವಾದ ವಿದ್ಯುತ್ ಮತ್ತು ಯಾವುದೇ ತೊಂದರೆಗಳಿಲ್ಲದೆ ವಿದ್ಯುತ್ ಪೂರೈಸುವ ಸಾಮರ್ಥ್ಯ ಈ ಜನರೇಟರ್‌ನ ವಿಶೇಷತೆಯಾಗಿದೆ ಎಂದು ವಿವರಿಸಿದರು. ಶಬ್ದ ಮತ್ತು ವಾಯುಮಾಲಿನ್ಯವನ್ನು ನಿಯಂತ್ರಿಸುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಇಂಧನ ಕಾರ್ಯಕ್ಷಮತೆ ದೃಷ್ಟಿಯಿಂದ ಲಾಭದಾಯಕವಾಗಿದೆ ಎಂದು ಹೇಳಿದರು.
ಇತರೆ ಕಂಪನಿಗಳ ಜನರೇಟರ್‌ಗಳಿಗೆ ಹೋಲಿಕೆ ಮಾಡಿದಾಗ ನಿರ್ವಹಣೆ ವೆಚ್ಚ ಕಡಿಮೆಯಾಗಿರುತ್ತದೆ. ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುಲಭವಾಗಿ ಸಾಗಿಸಬಹುದು. ಡೀಸೆಲ್ ಮತ್ತು ಪೆಟ್ರೋಲ್ ಇಂಧನವನ್ನು ಬಳಸುವ ಎರಡೂ ಮಾದರಿಗಳಿವೆ ಎಂದು ತಿಳಿಸಿದರು.
ದೇಶದಾದ್ಯಂತ ಮಾರುಕಟ್ಟೆ ಜವಬ್ದಾರಿ ವಹಿಸಿಕೊಂಡಿರುವ ಮುಂಬೈನ್ ಪವರ್ ಟೆಕ್ ಐಡಿಯಾಸ್ ಸಂಸ್ಥೆಯ ಮುಖ್ಯಸ್ಥ ಸುನಿಲ್ ಸುಬ್ರಮಣಿ, ಕಿರ್ಲೋಸ್ಕರ್ ಕಂಪನಿಯ ಕರ್ನಾಟಕ ರಾಜ್ಯದ ಮುಖ್ಯಸ್ಥ ಶ್ರೀನಿವಾಸ್, ಸುಹಾಸ್, ಚಿಕ್ಕಮಗಳೂರು ಜಿಲ್ಲೆಯ ಅಧಿಕೃತ ಮಾರಾಟಗಾರರಾದ ವಾಟರ್ ಜೆಟ್ ಎಂಜಿನಿಯರ್ಸ್ನ ಸುನಿಲ್ ಬ್ಯಾಪ್ಟಿಸ್ಟ್ ಇದ್ದರು.