ಚಿಕ್ಕಮಗಳೂರು-ಇಂದು ಸಮಾಜದ ಕೆಲವರಲ್ಲಿ ಸಹಾಯ ಹಸ್ತದ ಕೊರತೆ ಕಾಣುತ್ತಿದೆ ಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಡಾ. ಜಿ.ಭೀಮೇಶ್ವರ ಜೋಶಿ ವಿಷಾದಿಸಿದರು.
ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಆಶಾಕಿರಣ ಚಾರಿಟಬಲ್ ಟ್ರಸ್ಟ್ ಮತ್ತು ಮೆಕೋಶಾ ಸಂಸ್ಥೆ ಯಿಂದ ಏರ್ಪಡಿಸಿದ್ದ ಮಲೆನಾಡು ಮಹೋತ್ಸವ ಚಾರಿಟಿ ಎಕ್ಸೊ÷್ಪÃ ೨೦೨೪ ಉದ್ಘಾಟಿಸಿ ಮಾತನಾಡಿದರು.
ಇಲ್ಲಿನ ಆಶಾಕಿರಣ ಅಂಧಮಕ್ಕಳ ಶಾಲೆಗೆ ಭೇಟಿಕೊಟ್ಟು ಅಲ್ಲಿರುವವರ ಸೇವೆ ಮಾಡಿದರೆ ವಿಶೇಷವಾದ ದೇವರ ಅನುಗ್ರಹಕ್ಕೆ ಪಾತ್ರರಾಗುವ ಭಾಗ್ಯ ದೊರೆಯುತ್ತದೆ ಎಂದು ತಿಳಿಸಿದರು.
ಒಂದು ಜೀವ ಸೃಷ್ಟಿಯಾಗುವ ಸಂದರ್ಭ ಬಂದಾಗ ಅದರಲ್ಲಿ ಭಾವ ಒಡಮೂಡುತ್ತದೆ. ಸರ್ವೇಂದ್ರಿಯಗಳೂ ಚೆನ್ನಾಗಿರುವುದರಿಂದ ಕೊರತೆ ಕಾಣುವುದಿಲ್ಲ,
ಅಂಧಮಕ್ಕಳ ಶಾಲೆ ವಿದ್ಯಾರ್ಥಿಗಳು ವಿದ್ಯಾಭ್ಯಾಸ, ಸಾಂಸ್ಕೃತಿಕ, ಕ್ರೀಡೆ, ಸಂಗೀತ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿ ಅಂತರಾಷ್ಟ್ರೀಯ ರಾಯಭಾರಿಗಳಾಗಿ ಭಾರತದ ಘನತೆಯನ್ನು ಗುಣಗೌರವ ಹೆಚ್ಚಿಸಿದ್ದಾರೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕ ಹೆಚ್.ಡಿ ತಮ್ಮಯ್ಯ ಮಾತನಾಡಿ,
ಶಾಲೆಗೆ ಉಚಿತ ವಿದ್ಯುತ್ ನೀಡಲು ಜಿಲ್ಲಾ ಉಸ್ತುವಾರಿ ಸಚಿವರ ಆದೇಶದಂತೆ ಮೆಸ್ಕಾಂ ಇಲಾಖೆ ಈಗಾಗಲೇ ಆದೇಶ ನೀಡಿದೆ. ಕೇಂದ್ರ ಸರ್ಕಾರ ನೀಡುವ ಪದ್ಮಶ್ರೀ ಪ್ರಶಸ್ತಿ ಕೊಡಿಸಲು ಮಾಜಿ ಸಚಿವ ಸಿ.ಟಿ ರವಿ ಹಾಗೂ ತಾವು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಹೇಳಿದರು .
ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿದರು. ಡಾ. ಜೆ.ಪಿ ಕೃಷ್ಣೇಗೌಡ ಮಾತನಾಡಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ತಮ್ಮ ತಂದೆ-ತಾಯಿ ಹೆಸರಿನಲ್ಲಿ ಅಂಧಮಕ್ಕಳ ಶಾಲೆಗೆ ೧ ಲಕ್ಷ ರೂ ದೇಣಿಗೆ ನೀಡುವುದಾಗಿ ಘೋಷಷಿಸಿದರು.
ಬಸವರಾಜ್ ಸ್ವಾಮಿಜಿ, ಜ್ಯೋತಿಕೃಷ್ಣ, ವರ್ಷಾ ಅಭಿಷೇಕ್, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ, ಒಕ್ಕಲಿಗರ ಸಂಘದ ಮಹಿಳಾ ಅಧ್ಯಕ್ಷೆ ಕಲ್ಪನಾ ಪ್ರದೀಪ್, ಕಿಸಾನ್ ಕಾಂಗ್ರೆಸ್ ಎ.ಪಿ.ಸಾಗರ್ ಭಾಗವಹಿಸಿದ್ದರು.