ಚಿಕ್ಕಮಗಳೂರು ನ್ಯೂಸ್

Chikmgalur News

ಕಾಫಿ ಕಣಜದ ಸುದ್ದಿಜಾಲ

ಸಾಮಾಜಿಕ ನ್ಯಾಯಕ್ಕಾಗಿ ಒತ್ತಾಯಿಸಿ ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ

Share:


ಚಿಕ್ಕಮಗಳೂರು: ಹಿಂದುಳಿದವರು ಅಲ್ಪಸಂಖ್ಯಾತರ ಬಗ್ಗೆ ಕೇವಲ ನೆಪ ಮಾತ್ರದ ಮೌಖಿಕ ಹೇಳಿಕೆ ನೀಡಿ ಕಣ್ಣೊರೆಸುವ ತಂತ್ರ  ಮಾಡುತ್ತಿರುವ ಸರ್ಕಾರದ ನೀತಿ ಖಂಡಿಸಿ,   ಚಲೋ ಬೆಳಗಾವಿ ಅಂಬೇಡ್ಕರ್ ಜಾಥಾ -2 ಅನ್ನು ಎಸ್‌ಡಿಪಿಐ ಹಮ್ಮಿಕೊಂಡಿದೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಅಂಗಡಿ ಚಂದ್ರುಅಹಿಂದ ಸರ್ಕಾರ, ಸಾಮಾಜಿಕ ನ್ಯಾಯದ ಚಾಂಪಿಯನ್ ಎಂದು ಹೇಳುವ  ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತ, ಅಲ್ಪ ಸಂಖ್ಯಾತ, ಮತ್ತು ಹಿಂದುಳಿದ ವರ್ಗಗಳ
ಹಲವು ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಿಲ್ಲ ಎಂದು ಆರೋಪಿಸಿದರು.
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕೂಡಲೇ ಜಾರಿ,ಮುಸ್ಲಿಮರ 28 ಮೀಸಲಾತಿಯನ್ನು ಪುನರ್ ಸ್ಥಾಪಿಸಿ ಶೇಕಡಾ 8ಕ್ಕೆ ಏರಿಕೆ ,ಕಾಂತರಾಜ್ ಆಯೋಗದ ವರದಿ ಜಾರಿ ಮಾಡುವಂತೆ ಒತ್ತಾಯಿಸಿದರು
ಮಂಡಳಿ ಆಸ್ತಿಗಳ ರಕ್ಷಣೆ, ಒಕ್ಕೂಟ ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿಯಾಗಿ ಜಾರಿಗೆ ತರಲು ಹೊರಟಿರುವ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಬಾರದೆನ್ನುವ ನಿರ್ಣಯವನ್ನು ಸದನದಲ್ಲಿ ಕೈಗೊಳ್ಳಬೇಕು ಎಂದರು.
ಜಾಥಾ ವಿವರ :ಚಲೋ ಬೆಳಗಾವಿ, ಅಂಬೇಡ್ಕರ್  ಜಾಥ ಉಡುಪಿಯಿಂದ ಹೊರಟಿದ್ದು  ವಿವಿಧ ಜಿಲ್ಲೆಗಳಲ್ಲಿ ಸಂಚರಿಸಿ ಡಿ. 12 ರಂದು ಮಧ್ಯಾಹ್ನ 12.30ಕ್ಕೆ  ಮೂಡಿಗೆರೆಯ ಲಯನ್ಸ್ ವೃತ್ತದಲ್ಲಿ ಸಮಾವೇಶ ನಡೆಯಲಿದೆ ಎಂದು ಹೇಳಿದರು.
ಅಂದು ಮಧ್ಯಾಹ್ನ 3.30 ಗಂಟೆಗೆ ಚಿಕ್ಕಮಗಳೂರು ನಗರದ ಎನ್.ಎಮ್.ಸಿ ವೃತ್ತದಿಂದ ಆಝಾದ್ ಪಾರ್ಕ್‌ ವರೆಗೆ ಕಾಲ್ನಡಿಗೆ ಜಾಥಾದ ಮೂಲಕ ತೆರಳಿ  ಸಮಾವೇಶ ನಡೆಯಲಿದ್ದು , 16  ರಂದು ಬೆಳಗಾವಿ ತಲುಪಲಿದೆ ಎಂದು ತಿಳಿಸಿದರು. ಗೌಸ್ ಮುನೀರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

On Key

Related Posts

ಅಮಿತ್ ಶಾ-ಸಿ.ಟಿ.ರವಿ ಹೇಳಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಧರಣಿ

ಚಿಕ್ಕಮಗಳೂರು:ಕೋಮುವಾದವನ್ನುಮುಂದಿಟ್ಟು ಜನರನ್ನು ಸಂಘರ್ಷಕ್ಕೀಡು ಮಾಡುವಸಂಘಪರಿವಾರದ ಮಾನಸಿಕತೆ ಆಮಿತ್ ಶಾ ಹೇಳಿಕೆಯಿಂದ ಬಹಿರಂಗಗೊಂಡಿದೆ ಎಂದು ಜಿಲ್ಲಾಕಾಂಗ್ರೆಸ್‌ ಉಸ್ತುವಾರಿ, ಮಾಜಿ ಸಚಿವ ರಮಾನಂದ

ನಿಷೇಧಿತ ಮದ್ಯ ವಶ : ಓರ್ವನ ಬಂಧನ

ಚಿಕ್ಕಮಗಳೂರು:  ಅಬಕಾರಿ ಸಿಬ್ಬಂದಿ ದಾಳಿ ನಡೆಸಿಚಿಕ್ಕಮಗಳೂರು ನಗರದ ದರ್ಜಿ ಬೀದಿಯ ಮನೆಯೊಂದರಲ್ಲಿ ದಾಸ್ತಾನು ಇಟ್ಟಿದ್ದ ನಿಷೇಧಿತ ವಿವಿಧ ಬ್ರಾಂಡ್ ಗಳ