ಚಿಕ್ಕಮಗಳೂರು:ದತ್ತಮಾಲಾ ಅಭಿಯಾನಕ್ಕೆ 25 ವರ್ಷದ ರಜತಮಹೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಪರಿಸರದಲ್ಲಿ ಇರುವ ಚೌದಂಬರ ವೃಕ್ಷ ಪರಿಕ್ರಮಕ್ಕೆ ಅವಕಾಶ ನೀಡಬೇಕೆಂದು ವಿಶ್ವ ಹಿಂದು ಪರಿಷತ್ ಆಗ್ರಹಿಸಿದೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್ ವೆಲ್ ದತ್ತ ಜಯಂತಿ ಹಿನ್ನೆಲೆಯಲ್ಲಿ ಸಂಘಟನೆ ಕೋರಿರುವ ವ್ಯವಸ್ಥೆ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿದರು.
ಚಂದ್ರದ್ರೋಣ ಪರ್ವತದ ಕ್ಷೇತ್ರದಲ್ಲಿ ಇರುವ ಔದಂಬರ ವೃಕ್ಷ ವೈಜ್ಞಾನಿಕ, ಧಾರ್ಮಿಕವಾಗಿ,ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಹತ್ವವಾಗಿದ್ದು, ದತ್ತಾತ್ರೇಯರ ತಪಸ್ಸು ಮಾಡಿದ ಜಾಗದಲ್ಲಿ ಔದಂಬರ ವೃಕ್ಷವಿದೆ ಎಂದರು.
3 ದಿನಗಳ ಕಾಲ ಹೋಮ ಹವನ ನಡೆಸಲು ಅವಕಾಶ ಕೋರಿದ್ದು,ಸರ್ಕಾರಕ್ಕೆ ಬರೆದಿದ್ದೇವೆ ಎಂದು ಜಿಲ್ಲಾಡಳಿತ ನೀಡಿದ ಹಾರಿಕೆ ಉತ್ತರ , ಮೊಬೈಲ್‌ಗಳನ್ನು ತೆಗೆದುಕೊಂಡು ಹೋಗಲು ವಿಧಿಸಿರುವ ನಿಷೇಧಕ್ಕೆ ಆಕ್ಷೇಪಿಸಿದರು.
ಹಿಂದೂ ಅರ್ಚಕರ ನೇಮಕವಾಗಿದ್ದು, ಗರ್ಭಗುಡಿಯಲ್ಲಿ ದತ್ತಪಾದುಕ ಪೂಜೆ, ಹೋಮ ಹವನ ನಡೆಯುತ್ತಿದ್ದು,
ಮುಜವರ್ ಗಳ ಓಡಾಟ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿರುವುದರಿಂದ ಮುಜವರ್ ಗಳನ್ನು ಪೀಠದಿಂದ
ಹೊರಹಾಕಲು ಆಗ್ರಹಿಸಿದ್ದಾರೆ.
ಧಾರ್ಮಿಕ ಸಭೆ ನಡೆಸಲು ಜಾಗ,
ಧ್ವನಿವರ್ಧಕ ಇತರ ಎಲ್ಲಾ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿಕೊಡಬೇಕಾಗಿ ಮನವಿ ಮಾಡಿದರು.
ಪ್ರಾಂತ ಸಂಯೋಜಕ ,ಪ್ರಭಂಜನ್ ಸೂರ್ಯ,ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ ,ಯೋಗೇಶ್ ರಾಜ ಉಪಸ್ಥಿತರಿದ್ದರು