.
ಚಿಕ್ಕಮಗಳೂರು: ಮೂಡಿಗೆರೆ ತಾಲೂಕಿನ ಉದುಸೆ ಗ್ರಾಮದ ಯುವಕ ಸ್ಕಾಟ್ ಲ್ಯಾಂಡಿನಲ್ಲಿ ಎಂ.ಎಸ್ಸಿ ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.
ಯು.ಪಿ.ಸಹದೇವ್ ಪಟೇಲ್ ಯುನೈಟೆಡ್ ಕಿಂಗ್ ಡಂ, ಸ್ಕಾಟ್ ಲ್ಯಾಂಡಿನ ಹೆರಿಯಟ್ ವ್ಯಾಟ್ ವಿಶ್ವ ವಿದ್ಯಾಲಯದಲ್ಲಿ ಎಂ.ಎಸ್ಸಿ ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಉದುಸೆ ಗ್ರಾಮದ ಯು.ಇ.ಪ್ರಭಾಕರ್ ಹಾಗೂ ಬಿ.ಜಿ.ಪೂರ್ಣ ದಂಪತಿಗಳ ಪುತ್ರ.ಇವರ ಸಾಧನೆಗೆ ಗ್ರಾಮಸ್ಥರು ವಿದ್ಯಾಭಿಮಾನಿಗಳು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.