ಚಿಕ್ಕಮಗಳೂರು ನ್ಯೂಸ್

Chikmgalur News

ಕಾಫಿ ಕಣಜದ ಸುದ್ದಿಜಾಲ

ದತ್ತ ಜಯಂತಿಗೆ ಚಾಲನೆ: ಅನುಸೂಯಾ ಜಯಂತಿ – ಮಹಿಳೆಯರ ಮೆರವಣಿಗೆ

Share:

ಚಿಕ್ಕಮಗಳೂರು : ಇಂದಿನಿಂದ 3 ದಿನಗಳ ಕಾಲ ನಡೆಯುವ ದತ್ತಜಯಂತಿಗೆ ಚಾಲನೆ ದೊರಕಿದೆ.
ಅನುಸೂಯ ಜಯಂತಿಯೊಂದಿಗೆ ಕಾರ್ಯಕ್ರಮ ಆರಂಭವಾಗಿದ್ದು,
ನಗರದ ಬೋಳರಾಮೇಶ್ವರ ದೇವಾಲಯದಿಂದ ಮೆರವಣಿಗೆ‌ ಹೊರಟಿದ್ದು ಪಾಲಿಟೆಕ್ನಿಕ್ ಸಮೀಪ ಮುಕ್ತಾಯಗೊಂಡಿದೆ.
ದತ್ತಾತ್ರೇಯ ವಿಗ್ರಹ ದೊಂದಿಗೆ ಹೊರಟ ಮೆರವಣಿಗೆಯಲ್ಲಿ ಅಪಾರ ಸಂಖ್ಯೆ ಮಹಿಳೆಯರು ಭಾಗವಹಿಸಿದ್ದು, ದತ್ತ ಭಜನೆ ಅನಸೂಯ ಭಜನೆ ಯೊಂದಿಗೆ ಮೆರವಣಿಗೆ ಸಾಗಿತು .
ಮಹಿಳೆಯರು ಮೆರವಣಿಗೆ ಬಳಿಕ ದತಪೀಠಕ್ಕೆ ತೆರಳಿ ದತ್ತ ಪಾದುಕೆಗಳಿಗೆ ಪೂಜೆ ಸಲ್ಲಿಸಿ, ಹೋಮ ಹವನಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಪೊಲೀಸರ ಸರ್ಪಗಾವಲಿನಲ್ಲಿ ಕೇಸರಿಗೆ ಉಡುಗೆ ದೊಡ್ಡ ಮಹಿಳೆಯರ ಮೆರವಣಿಗೆ ಸಾಗಿದ್ದು, ಅದಕ್ಕೂ ಮೊದಲು ದೇವಾಲಯದ ಆವರಣದಲ್ಲಿ ಬಹಿರಂಗ ಸಭೆ ನಡೆಯಿತು.
ಮೆರವಣಿಗೆ ಮುಂಚೂಣಿಯಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಮುಖಂಡರು ಭಾಗವಹಿಸಿದ್ದರು.
ಚಿಕ್ಕಮಗಳೂರು ನಗರ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ನಾಳೆ ಮಧ್ಯಾಹ್ನದ ಬಳಿಕ ಶೋಭಾ ಯಾತ್ರೆ ನಡೆಯಲಿದ್ದು, ಅದಕ್ಕೂ ಮೊದಲು ಬೆಳಿಗ್ಗೆ ಕೆಲ ಕಾರ್ಯಕರ್ತರು ಭಿಕ್ಷಾಟನೆ ನಡೆಸಲಿದ್ದಾರೆ.
ಶೋಭಾಯಾತ್ರೆ ಅಂಗವಾಗಿ ನಾಳೆ ಬೆಳಗ್ಗೆಯಿಂದಲೇ ಮಹಾತ್ಮ ಗಾಂಧಿ ರಸ್ತೆಯಲ್ಲಿ ವಾಹನ ಸಂಚಾರ /ನಿಲುಗಡೆ ಸಂಪೂರ್ಣ ನಿಷೇಧಿಸಲಾಗಿದೆ.
ಮುಖ್ಯ ರಸ್ತೆ ಸಂಪರ್ಕಿಸುವ ಅಡ್ಡರಸ್ತೆಗಳಲ್ಲಿಯೂ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ನಾಳೆ ಮತ್ತು ನಾಡಿದ್ದು ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸಲಾಗಿದೆ.
ದತ್ತ ಜಯಂತಿ ಅಂಗವಾಗಿ, ಪ್ರಮುಖ ವೃತ್ತಗಳನ್ನು ಕೇಸರಿ ಬಂಟಿಂಗ್ಸ್ ಗಳಿಂದ ಸಿಂಗರಿಸಿದ್ದು, ಅನೇಕ ರಸ್ತೆಗಳಿಗೆ ವಿದ್ಯುತ್ ಈ ದೀಪಾಲಂಕಾರ ಮಾಡಲಾಗಿದೆ.

Leave a Reply

Your email address will not be published. Required fields are marked *

On Key

Related Posts

ಅಮಿತ್ ಶಾ-ಸಿ.ಟಿ.ರವಿ ಹೇಳಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಧರಣಿ

ಚಿಕ್ಕಮಗಳೂರು:ಕೋಮುವಾದವನ್ನುಮುಂದಿಟ್ಟು ಜನರನ್ನು ಸಂಘರ್ಷಕ್ಕೀಡು ಮಾಡುವಸಂಘಪರಿವಾರದ ಮಾನಸಿಕತೆ ಆಮಿತ್ ಶಾ ಹೇಳಿಕೆಯಿಂದ ಬಹಿರಂಗಗೊಂಡಿದೆ ಎಂದು ಜಿಲ್ಲಾಕಾಂಗ್ರೆಸ್‌ ಉಸ್ತುವಾರಿ, ಮಾಜಿ ಸಚಿವ ರಮಾನಂದ

ನಿಷೇಧಿತ ಮದ್ಯ ವಶ : ಓರ್ವನ ಬಂಧನ

ಚಿಕ್ಕಮಗಳೂರು:  ಅಬಕಾರಿ ಸಿಬ್ಬಂದಿ ದಾಳಿ ನಡೆಸಿಚಿಕ್ಕಮಗಳೂರು ನಗರದ ದರ್ಜಿ ಬೀದಿಯ ಮನೆಯೊಂದರಲ್ಲಿ ದಾಸ್ತಾನು ಇಟ್ಟಿದ್ದ ನಿಷೇಧಿತ ವಿವಿಧ ಬ್ರಾಂಡ್ ಗಳ