ಚಿಕ್ಕಮಗಳೂರು : ಗೌಡನಹಳ್ಳಿ ಸಮೀಪ ಬಾಡಿಗೆ ಮನೆಯಲ್ಲಿದ್ದ ವ್ಯಕ್ತಿ ಒಬ್ಬನನ್ನು ಬಂಧಿಸಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇಂಡಸ್ಟ್ರೀಯಲ್ ಏರಿಯಾ, ಅಂಬಿಕಾ ಪ್ಲೇವುಡ್ ಫ್ಯಾಕ್ಟರಿ ಪಕ್ಕದ ಬೀರೇಗೌಡರ ಮಾಲೀಕತ್ವದ ಮನೆಯಲ್ಲಿ ಬಾಡಿಗೆಗೆ ಇದ್ದ ಅಸ್ಸಾಂ ಮೂಲದ ಮಹಮ್ಮದ್ ರಬೂಲ್ ಇಸ್ಲಾಂ ಬಂಧಿತ ಆರೋಪಿ.
ಈತನು ತನ್ನ ಬಾಡಿಗೆ ಮನೆಯಲ್ಲಿ ಗಾಂಜಾ ಇಟ್ಟುಕೊಂಡು ಸಾರ್ವಜನಿಕರಿಗೆ ಹಾಗೂ ಕಾರ್ಮಿಕರಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಮಾಹಿತಿ ಆಧರಿಸಿ ದಾಳಿ ನಡೆಸಿದ ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪಿಎಸ್ಐ ರಘುನಾಥ್ ನೇತೃತ್ವದ ತಂಡ ದಾಳಿ ನಡೆಸಿದ್ದು ಆರೋಪಿ ಮಹಮ್ಮದ್ ರಬೂಲ್ ಇಸ್ಲಾಂ ನನ್ನ ಬಂಧಿಸಿದ್ದಾರೆ.
ಅಂಬಿಕಾ ಪ್ಲೇವುಡ್ ಫ್ಯಾಕ್ಟರಿಯಲ್ಲಿ ಮರ ಕತ್ತರಿಸುವ ಕೂಲಿ ಕೆಲಸ ಮಾಡುತ್ತಿದ್ದು, ಸ್ವಂತ ಊರು- ಅಸ್ಸಾಂ ರಾಜ್ಯದ ನಗ್ಗಾವ್ ಜಿಲ್ಲೆಯ ಜಾರಮಾರಿ ಹಳ್ಳಿ,
ಬಂಧಿತನಿಂದ 5 ಕೆ.ಜಿ 134 ಗ್ರಾಂ ಒಣ ಗಾಂಜಾ ಹಾಗೂ ಒಂದು ಮೊಬೈಲನ್ನು ವಶ ಪಡಿಸಿಕೊಳ್ಳಲಾಗಿದೆ