ಚಿಕ್ಕಮಗಳೂರು: ಚಾರ್ಮಾಡಿ ಬಳಿಯ ಏಕಲವ್ಯ ಶಾಲೆಯ ಸಮೀಪ ಹಾಸನ ಮೂಲದ ವ್ಯಕ್ತಿಯೋರ್ವ ಹರಿತದ ಆಯುಧದಿಂದ ಕುತ್ತಿಗೆ ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
112 ಸಂಚಾರಿ ಪೊಲೀಸರು ಹಾಸನ ಮೂಲದ ಮನು ಎಂಬುವನನ್ನು ರಕ್ಷಿಸಿ ಉಳಿಸಿದ್ದಾರೆ.
ಹಾಸನದಿಂದ ಕೊಟ್ಟಿಗೆಹಾರಕ್ಕೆ ಬಂದ ಮನು ಚಾರ್ಮಾಡಿ ಘಾಟ್ ಬಳಿ ಏಕಲವ್ಯ ಶಾಲೆಯ ಸಮೀಪ ರಸ್ತೆಯಲ್ಲಿ ತನ್ನ ಕುತ್ತಿಗೆಯನ್ನು ಬ್ಲೇಡಿನಿಂದ ಕುಯ್ದು ಸ್ನೇಹಿತರಿಗೆ ವ್ಯಾಟ್ಸ್ ಆಫ್ ಮೂಲಕ ವೀಡಿಯೋ ಸಂದೇಶ ಕಳುಹಿಸಿದ್ದಾನೆ.
ಅಲರ್ಟ್ ಆದ ಸ್ನೇಹಿತರು 112 ಸಂಚಾರಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಚಾರ್ಮಾಡಿ ಘಾಟ್ ಗೆ ತೆರಳಿ ವ್ಯಕ್ತಿಯಿಂದ ಹರಿತವಾದ ಬ್ಲೇಡ್ ಕಸಿದು ಕೊಂಡಿದ್ದಾರೆ.
ಹರಸಾಹಸ ಪಟ್ಟು ಆತನನ್ನು ಹಿಡಿದು ಬಣಕಲ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ,ಮೂಡಿಗೆರೆ ಎಂಜಿಎಂ ಆಸ್ಪತ್ರೆಯಲ್ಲಿ ಕುತ್ತಿಗೆಗೆ ವೈದ್ಯರಿಂದ ಹೊಲಿಗೆ ಹಾಕಿಸಿ ಪ್ರಾಣ ಉಳಿಸಿದ್ದಾರೆ.
ಬಳಿಕ ಅವರ ಪತ್ನಿಗೆ ಕರೆ ಮಾಡಿ ಅವರೊಂದಿಗೆಕಳುಹಿಸಿದ್ದಾರೆ.ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಬಿ ಎಸ್.ಅಭಿಷೇಕ್,ದಿಲೀಪ್,ಸುಂಕ ಬೋವಿ,ಓಂಕಾರ ನಾಯ್ಕ್ ಭಾಗವಹಿಸಿದ್ದರು.