ಮುಳ್ಳಯ್ಯನಗಿರಿ ಸಂರಕ್ಷಿತ ಪ್ರದೇಶದಲ್ಲಿ ‘ಜಾಯ್ರೈಡ್’’ ಹೆಲಿಟೂರಿಸಂ ಆರಂಭಕ್ಕೆ ವಿರೋಧ
ಚಿಕ್ಕಮಗಳೂರು: ಮುಳ್ಳಯ್ಯನಗಿರಿ ಸಂರಕ್ಷಿತ ಪ್ರದೇಶದಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು ಸರ್ಕಾರ ಪರಿಸರದ ಮೇಲಾಗುವ ಪರಿಣಾಮಗಳನ್ನು ಲೆಕ್ಕಿಸದೆ ಹೆಲಿಟೂರಿಸಂ ಆರಂಭಿಸಲು ನಿರ್ಧರಿಸಿರುವುದನ್ನು ಪರಿಸರವಾದಿಗಳು ಆಕ್ಷೇಪಿಸಿದ್ದಾರೆ.
ಪ್ರವಾಸೋದ್ಯಮ ಇಲಾಖೆ ‘ಜಾಯ್ರೈಡ್’ ಘೋಷವಾಕ್ಯ ಅಡಿ ಪ್ರವಾಸೋದ್ಯಮ ಉತ್ತೇಜಿಸುವ ಮುನ್ನ ಮುಳ್ಳಯ್ಯನಗಿರಿ ಹಾಗೂ ಅದಕ್ಕೆ ಹೊಂದಿಕೊಡಿರುವ ಗಿರಿ ಪ್ರದೇಶದ ಸೂಕ್ಷ್ಮತೆ ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.
ಅನೇಕ ನದಿಗಳ ಉಗಮ ಶೋಲಾ ಕಾಡುಗಳಿಂದ ಕೂಡಿದ ಅತ್ಯಂತ ಉತ್ತಮ ಜಲಮೂಲಕ್ಕೂ ಆಧಾರವಾದ ಮುಳ್ಳಯ್ಯನಗಿರಿ ಬೆಟ್ಟ ಪ್ರದೇಶ ವಲಸೆ ಹಕ್ಕಿಗಳ ಆಶ್ರಯ, ಸಂತಾನೋತ್ಪತ್ತಿ ತಾಣವೂ ಆಗಿದ್ದು ,
ಪಕ್ಷಿ ಸಮೂಹದ ಜೊತೆಗೆ ಬೇಟೆ ಪ್ರಾಣಿಗಳ ಆಶ್ರಯ ತಾಣವಾಗಿದೆ ಎಂದು ಹೇಳಿದ್ದಾರೆ.
ಜೀವ ಹಾಗೂ ಸಸ್ಯ ವೈವಿಧ್ಯ ಸೂಕ್ಷ್ಮ ಬೆಟ್ಟ ಪ್ರದೇಶದಲ್ಲಿ ಹೆಲಿಕ್ಯಾಪ್ಟರ್ ಹಾರಾಟದಿಂದ ಆಗುವ ಕಂಪನ ಹಾಗೂ ಶಬ್ದ, ಗಾಳಿಯಲ್ಲಾಗುವ ಬದಲಾವಣೆ ಪ್ರಾಣಿ-ಪಕ್ಷಿಗಳ ನಿರಾತಂಕ ಬದುಕಿಗೆ, ಜನರ ಗದ್ದಲವೂ ಪರಿಸರ ಸೂಕ್ಷ್ಮತೆಗೆ ಹೆಚ್ಚಿನ ಘಾಸಿ ಉಂಟು ಮಾಡುವ ಸಂಭವವಿದೆ ಒಂದು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೆಲಿ ಟೂರಿಸಂ ಯೋಜನೆ ಕೈ ಬಿಡುವಂತೆ ಸ, ಗಿರಿಜಾ ಶಂಕರ, ಶ್ರೀದೇವ್ ಹುಲಿಕೆರೆ ಆಗ್ರಹಿಸಿದ್ದಾರೆ.