ಚಿಕ್ಕಮಗಳೂರು : ಬಾಳೂರು ಹೋಬಳಿಯ ಚಂದುವಳ್ಳಿ ತಂಗುದಾಣ ಕಸದ ಅಡ್ಡೆಯಾಗುತ್ತಿದೆ. ರಸ್ತೆಯ ಬದಿಯಲ್ಲಿ ಚಂದುವಳ್ಳಿಯ ಗ್ರಾಮಸ್ಥರಿಗೆ ಬಸ್ ತಂಗುದಾಣ ಕಟ್ಟಲಾಗಿದೆ.
ಇಲ್ಲಿ ಕೆಲವು ಕಿಡಿಗೇಡಿಗಳು ಮದ್ಯಪಾನದ ಅಡ್ಡಾ ಮಾಡಿದ್ದಾರೆ.ಬೀಡಿ, ಸಿಗರೇಟು ಸೇದಿ ಅಲ್ಲಿಯೇ ಕಸವನ್ನು ಬಿಸಾಕಿ ಹೋಗುತ್ತಿದ್ದಾರೆ. ಇತರೆ ಕಸವೂ ಅಲ್ಲಿಯೇ ಬಿಸಾಕಿ ಗಬ್ಬು ನಾರುತ್ತಿದೆ.
ಕಳೆದ ಬಾರಿಯ ಮಳೆಯ ಹೊಡೆತಕ್ಕೆ ಗೋಡೆ ಶಿಥಿಲವಾಗಿ ಬಿರುಕು ಬಿಟ್ಟಿದೆ. ಬಸ್ ನಿಲ್ದಾಣ ಸಾರ್ವಜನಿಕರ ಆಸ್ತಿಯಾಗಿದ್ದು ಸ್ವಚ್ಚತೆ ಕಾಪಾಡಬೇಕಿದೆ.
ಬಸ್ ನಿಲ್ದಾಣದಲ್ಲಿ ನಡೆಯುವ ಚಟುವಟಿಕೆಗಳಿಗೆ ಬ್ರೇಕ್ ಬೀಳಬೇಕಿದೆ.ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕೆಂದು ಜನ ಆಗ್ರಹಿಸಿದ್ದಾರೆ.