ಚಿಕ್ಕಮಗಳೂರು : ಜಿಲ್ಲೆಯಲ್ಲಿ ಆನೆ ದಾಳಿಗೆ ಮತ್ತೊಬ್ಬರು ಬಲಿ ಆಗಿದ್ದಾರೆ
20 ದಿನದಲ್ಲಿ ಕಾಡಾನೆ ದಾಳಿಗೆ ಎರಡನೇ ಸಾವು ಇದಾಗಿದೆ.
ಎನ್.ಆರ್.ಪುರ ತಾಲೂಕಿನ ಮಡಬೂರು ಗ್ರಾಮದ ಬಳಿ ಘಟನೆ ನಡೆದಿದ್ದು,
ಎಲಿಯಾಸ್ (75) ಮೃತ ದುರ್ದೈವಿ, ಮಗ ವರ್ಗೀಸ್ ಪಾರಾಗಿದ್ದಾನೆ.
ತೋಟಕ್ಕೆ ಹೋಗಿದ್ದ ತಂದೆ-ಮಗನ ಮೇಲೆ ಒಂಟಿ ಸಲಗ ದಾಳಿ ಮಾಡಿದೆ.
ಮಗ ಓಡಿ ಹೋಗಿ ತಪ್ಪಿಸಿಕೊಂಡಿದ್ದಾನೆ, ತಂದೆ ಆನೆ ದಾಳಿಗೆ ಬಲಿ ಆಗಿದ್ದಾರೆ.
ಕೇರಳದಿಂದ ಬಂದು ಅಡಿಕೆ-ಬಾಳೆ ತೋಟ ಮಾಡಿಕೊಂಡಿದ್ದ ಎಲಿಯಾಸ್.
ಸಾಯಿಸಿದ ಬಳಿಕ ಮೃತದೇಹ ಸುತ್ತುತ್ತಾ
ಮೃತದೇಹಕ್ಕೆ ಒದೆಯುತ್ತಾ, ಘೀಳಿಡುತ್ತಾ ಸ್ಥಳದಲ್ಲೇ ನಿಲ್ಲುವ ಮೂಲಕ ಆತಂಕ ಹುಟ್ಟು ಹಾಕಿತ್ತು.
ನವೆಂಬರ್ 30ರಂದು ಸೀತೂರಲ್ಲಿ ಉಮೇಶ್ ಎಂಬುವರನ್ನು ಕಾಡಾನೆ ಸಾಯಿಸಿದ್ದು , ಸ್ಥಳೀಯ ಶಾಸಕ ಟಿ.ಡಿ ರಾಜೇಗೌಡ ಒಂದು ಲಕ್ಷ ರೂ ಹಾಗೂ ಅರಣ್ಯ ಸಚಿವರು ಮೂರು ಲಕ್ಷ ರೂ ಪರಿಹಾರ ನೀಡಿದ್ದರು.
ಇಂದು ಮಡಬೂರಲ್ಲಿ ನಡೆದ ಘಟನೆ ಬಗ್ಗೆ ಸ್ಥಳೀಯರು ಆಕ್ರೋಶಗೊಂಡಿದ್ದು
ಅರಣ್ಯ ಇಲಾಖೆ ವಿರುದ್ಧ ಕಿಡಿ ಕಾರಿದ್ದಾರೆ.
ಸ್ಥಳಿಯರು, ಪೊಲೀಸರು, ಅರಣ್ಯ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದು ಪರಿಸ್ಥಿತಿ ಬಿಗಡಾಯಿಸಿದೆ.