ಚಿಕ್ಕಮಗಳೂರು :ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ ಹಾಗೂ ಕೆನರಾ ಬ್ಯಾಂಕ್
ಇವರ ಸಹಯೋಗದಲ್ಲಿ ”ಏಕ್ ಶಾಮ್ ರಫಿ ಕೇ ನಾಮ್” ಗೀತಗಾಯನ
ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ಪೂರ್ವಿಗಾನಯಾನ-102ರ ಸಂಚಿಕೆಯಡಿಯಲ್ಲಿ ಈ ದೇಶಕಂಡ ಮಹಾನ್‌ಗಾಯಕ
ಮೊಹಮ್ಮದ್ ರಫಿರವರ ಜನ್ಮ ಶತಮಾನೋತ್ಸವದ ಅಂಗವಾಗಿ ಡಿ. 21 ರ ಸಂಜೆ 6 ರಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಖ್ಯಾತ ಗಾಯಕ ಶಿವಮೊಗ್ಗದ ಸುರೇಖಾ ಹೆಗಡೆ, ಸ್ಟಾರ್ ಸಿಂಗ
ಖ್ಯಾತಿಯ ಹಾಸನದ ಚೇತನರಾಮ್, ಬೀರೂರಿನ ವಿಷ್ಣು ಭಾರದ್ವಾಜ್, ಪೂರ್ವಿಯ ಸಾರಥಿ ವೆಂಕಟೇಶ್, ಕವಿತಾ
ನಿಯತ್, ರೂಪ ಅಶ್ವಿನ್, ಅನುಷ, ರುಕ್ಸಾನ ಕಾಚೂರ್, ರಮ್ಯ ಮಧುಸೂದನ್, ಚೈತನ್ಯ, ಪೃಥ್ವಿಶ್ರೀ ಹಾಡಲಿದ್ದಾರೆ.
ಎಂ.ಎಸ್. ಸುಧೀರ್ ಗಾಯನ ಸಾರಥ್ಯದಲ್ಲಿ ರಫಿ ಗೀತೆಗಳಗೆ ಧ್ವನಿಯಾಗಲಿದ್ದಾರೆ.
ಸಂಸದರಾದ ಕೋಟಶ್ರೀನಿವಾಸ ಪೂಜಾರಿ
ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ದೀಪಕ್ ದೊಡ್ಡಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ.ಕಾರ್ಯಕ್ರಮಕ್ಕೆ ಪ್ರವೇಶ ಉಚಿತ