ಚಿಕ್ಕಮಗಳೂರು : ಸಿ.ಟಿ.ರವಿ ಬಿಡುಗಡೆಗೆ ಆಗ್ರಹಿಸಿ ನಗರದ ಹನುಮಂತಪ್ಪ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
ಹೆಬ್ಬಾಳ್ಕರ್, ಡಿಕೆಶಿ, ಕಾಂಗ್ರೆಸ್, ಸಿದ್ದು ವಿರುದ್ಧ ಕಿಡಿಕಾರಿದ 100 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು
ಹಲವು ಮಹಿಳೆಯರು ಭಾಗಿ ಆಗಿದ್ದು ಕೈಯಲ್ಲಿ ಸಿ.ಟಿ.ರವಿ ಫೋಟೋ ಹಿಡಿದು ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಟೈರ್ ಗಳನ್ನು ಸುಡಲಾಯಿತು.
ಎರಡು ಗುಂಪುಗಳಾಗಿ ಪ್ರತಿಭಟನೆ ಸಡೆಸಿ ರಾ.ಹೆ. ಬಂದ್ ಮಾಡಿದರು.
ಬಿಜೆಪಿ ಕಾರ್ಯಕರ್ತರನ್ನು ಸುತ್ತುವರೆದ ಪೊಲೀಸರು ಎಂ.ಜಿ. ರಸ್ತೆಯಲ್ಲಿ ಮೆರವಣಿಗೆಗೆ ವಿರೋಧ ವ್ಯಕ್ತಪಡಿಸಿದರು.
ಶಾಸಕ ಸಿ.ಟಿ ರವಿ ಬಂಧನ ವಿರೋಧಿಸಿ ನೀಡಿದ ಬಂದ್ ಕರೆ ವಿಫಲವಾಯಿತು. ಮಹಾತ್ಮ ಗಾಂಧಿ ರಸ್ತೆಯಲ್ಲಿ ಅಂಗಡಿ ಮುಚ್ಚಿದವು.
ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ನೇತೃತ್ವದಲ್ಲಿ ಮೆರವಣಿಗೆ ನಡೆಸಿ ಬಂದ್ ಗೆ ಸಹಕರಿಸಲು ಮಾಡಿದ ಮನವಿ ಫಲಿಸಲಿಲ್ಲ.
ಬಸ್ ನಿಲ್ದಾಣದ ಬಳಿ ಪ್ರತಿಭಟನೆಗೆ ಮುಂದಾದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ನಿನ್ನೆ ರಾತ್ರಿ ಸಿ.ಟಿ ರವಿ ಮನೆಯಿಂದ ಹನುಮಂತಪ್ಪ ವೃತ್ತದವರಿಗೆ ಮೆರವಣಿಗೆ ನಡೆಸಿ ರಸ್ತೆ ತಡೆ ನಡೆಸಿದ್ದರು.