ಚಿಕ್ಕಮಗಳೂರು:ಕೋಮುವಾದವನ್ನು
ಮುಂದಿಟ್ಟು ಜನರನ್ನು ಸಂಘರ್ಷಕ್ಕೀಡು ಮಾಡುವಸಂಘಪರಿವಾರದ ಮಾನಸಿಕತೆ ಆಮಿತ್ ಶಾ ಹೇಳಿಕೆಯಿಂದ ಬಹಿರಂಗಗೊಂಡಿದೆ ಎಂದು ಜಿಲ್ಲಾ
ಕಾಂಗ್ರೆಸ್ ಉಸ್ತುವಾರಿ, ಮಾಜಿ ಸಚಿವ ರಮಾನಂದ ರೈ ಟೀಕಿಸಿದ್ದಾರೆ.
ಸಂವಿಧಾನದ ಬಗ್ಗೆ ಅಮಿತ್ ಶಾ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಕುರಿತು ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ನೀಡಿದ ಹೇಳಿಕೆ ಖಂಡಿಸಿ ನಗರದ ಆಜಾದ್ವೃತ್ತದಲ್ಲಿ ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ
ಮಾತನಾಡಿದರು.
ಅಂಬೇಡ್ಕರ್ ಅವರನ್ನು ಅವಮಾನಿಸುವ
ಮೂಲಕ ತಳವರ್ಗದ ಸಮುದಾಯವನ್ನು
ಪರೋಕ್ಷವಾಗಿ ದಮನಿಸುವ ಕೆಲಸವನ್ನು ಬಿಜೆಪಿ ಸೂಕ್ಷ್ಮವಾಗಿ ಮಾಡುತ್ತಿದೆ. ಈ ಬಗ್ಗೆ ಕೆಳ ವರ್ಗದ ಜನತೆ ಜಾಗೃತರಾಗಬೇಕಿದೆ ಎಂದರು.
ಸಂವಿಧಾನದ ಮೂಲಕ ಅಲ್ಪಸಂಖ್ಯಾತ
ಸಮುದಾಯಕ್ಕೆ ಶಿಕ್ಷಣ, ಆರ್ಥಿಕ,
ಸದೃಢತೆ ಸಾಮಾಜಿಕ ನ್ಯಾಯವೂ ಸೇರಿದಂತೆ ಹಲವು ಸಾಂವಿಧಾನಿಕ ಹಕ್ಕುಗಳನ್ನು ನೀಡಿದ ಸಂವಿಧಾನದ ಬಗ್ಗೆ ಬಿಜೆಪಿಗರಿಗೆ ಸ್ವಲ್ಪವೂ
ಅಭಿಮಾನವಿಲ್ಲ ಎಂದು ಆರೋಪಿಸಿದರು. ಅಂಬೇಡ್ಕರ್ ರವರನ್ನು ನಿಂದಿಸುವ ಮೂಲಕ ಅಮಿತ್ ಶಾಸಂವಿಧಾನದ ಮೇಲೆ ಪ್ರಹಾರ ಮಾಡಿದ್ದಾರೆ ಎಂದು ಟೀಕಿಸಿದರು
ಕೆಪಿಸಿಸಿ, ಕಾರ್ಯದರ್ಶಿ ಎಂಎಲ್ ಮೂರ್ತಿ
ಮಾತನಾಡಿ ಇತ್ತೀಚಿನ ದಿನಗಳಲ್ಲಿ ಪ್ರಜಾತಂತ್ರ ವ್ಯವಸ್ಥೆ, ಮೂರಾಬಟ್ಟೆಯಾಗುತ್ತಿದ್ದು ಜನತೆ
ಗಂಭೀರವಾಗಿ ಚಿಂತಿಸಬೇಕಿದೆ. ಗೋಮುಖ
ಹಾಕಿಕೊಂಡು ಸದನಕ್ಕೆ ಆರಿಸಿ ಹೋದ ಕೆಲವರಮುಖವಾಡ ಕಳಚಿ ಬಿದ್ದು ನಿಜ ಬಣ್ಣ ಬಯಲಾಗಿದೆ ಎಂದು ಕಿಡಿಕಾರಿದರು.
ಅಂಬೇಡ್ಕರ್ ರಚಿಸಿದ ಸಂವಿಧಾನದ
ಮೂಲಕ ಉನ್ನತ ಹುದ್ದೆಗಳನ್ನು ಅನುಭವಿಸುತ್ತಿರುವ
ಅಮಿತ್ ಶಾ ಸೇರಿದಂತೆ ಹಲವು ರಾಜಕೀಯ
ಮುಖಂಡರು ಅಂಬೇಡ್ಕರ್ ಅವರನ್ನು
ನೆನೆಯದೇ ಇದ್ದರೆ ಅವರನ್ನು ಮನುಷ್ಯರು ಎಂದುಕರೆಯಲು ಸಾಧ್ಯವೇ ಇಲ್ಲ ಎಂದರು. ವಿಧಾನ ಪರಿಷತ್ ಸದಸ್ಯ. ಸಿ ಟಿ ರವಿ ಲಕ್ಷ್ಮಿ ಹೆಬ್ಬಾಳ್ ಕರ್‌ರವರನ್ನು
ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಬೆಂಬಲಿಸಿದ ಬಿಜೆಪಿ ಕಾರ್ಯಕರ್ತರು ಅವರ
ನಾಲಿಗೆ ಹಿಡಿತದಲ್ಲಿಟ್ಟುಕೊಳ್ಳುವ ಬಗ್ಗೆ
ತರಬೇತಿ ನೀಡುವುದು ಸೂಕ್ತ ಎಂದು ಲೇವಡಿಮಾಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ ಅಂಶುಮಂತ್
ಮಾತನಾಡಿ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಹಿಳಾ ಮತ್ತು
ಮಕ್ಕಳ ಸಚಿವ ಲಕ್ಷ್ಮಿ ಹೆಬ್ಬಾಳ ರವರನ್ನು
ಅವಹೇಳನಕಾರಿಯಾಗಿ
ಮಾತನಾಡುವ
ಮೂಲಕ ಜಿಲ್ಲೆ ಸೇರಿದಂತೆ ರಾಜ್ಯದ ಜನ
ತಲೆತಗ್ಗಿಸುವಂತೆ ಮಾಡಿದ್ದಾರೆ ಎಂದು ಲೇವಡಿ ಮಾಡಿದರು
ಸಿ.ಟಿ .ರವಿ ಯಾವ ಘನ ಕಾರ್ಯ
ಮಾಡಿದ್ದಾರೆ ಎಂದು ಬಿಜೆಪಿಯವರು ನಗರ
ಬಂದ್‌ಗೆ ಕರೆಕೊಟ್ಟಿದ್ದಾರೆ ಎಂಬುದನ್ನು ಬಿಜೆಪಿ ಕಾರ್ಯಕರ್ತರು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ಕಳೆದ 20 ವರ್ಷಗಳಿಂದ
ಶಾಸಕರಾಗಿ, ಸಚಿವರ ರಾಷ್ಟ್ರೀಯ ಪ್ರಧಾನ
ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ
ಅನುಭವವಿರುವ ಸಿ.ಟಿ. ರವಿಗೆ ಮಹಿಳೆಯರನ್ನು
ಹೇಗೆ ಮಾತನಾಡಿಸಬೇಕು ಎಂಬುದನ್ನು ಅವರ ಮಾತೃ ಸಂಸ್ಥೆ ಆರ್ ಎಸ್ ಎಸ್ ಹೇಳಿಕೊಳ್ಳದೇ ಇರುವುದೇ ಈ ದುರಂತಕ್ಕೆ ಕಾರಣ ಎಂದು
ಛೇಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ
ಮಾತನಾಡಿದರು.
ನಿಗಮ ಮಂಡಳಿ ಅಧ್ಯಕ್ಷ ಬಿ ಎಚ್ ಹರೀಶ್, ಕೆ.ಪಿ.ಸಿ.ಸಿ ವಕ್ತಾರ ಹೆಚ್
ಹೆಚ್ ದೇವರಾಜ್, ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ, ಪಂಚ ಗ್ಯಾರಂಟಿಗಳ ಜಿಲ್ಲಾಧ್ಯಕ್ಷ ಶಿವಾನಂದ ಸ್ವಾಮಿ,ಮುಖಂಡರಾದ ಹಿರೇಮುಗಳೂರು ರಾಮಚಂದ್ರ
ಪಟ್ಟೇಗೌಡ,ರವೀಶ್ ಬಸಪ್ಪ
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮದ್ ಪಾಲ್ಗೊಂಡಿದ್ದರು.
⋅