ಚಿಕ್ಕಮಗಳೂರು : ಭಾರೀ ಮಳೆಗೆ ಚಾಲಕನ ನಿಯಂತ್ರಣ ತಪ್ಪಿ 2 ಪ್ರತ್ಯೇಕ ಅಪಘಾತ ಗಳು ನಡೆದಿವೆ
ಕೂದಲೆಳೆ ಅಂತರದಲ್ಲಿ 2 ಮಕ್ಕಳು ಸೇರಿ 7 ಪ್ರಯಾಣಿಕರು ಪಾರಾಗಿದ್ದಾರೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಹೆಬ್ಬರಿಗೆ, ನಜರತ್ ಸ್ಕೂಲ್ ಬಳಿ ಘಟನೆ ನಡೆದಿದೆ.
ಪೌಲ್ಸನ್ ಎಂಬುವರ ಮನೆಗೆ ಕಾರು ಗುದ್ದಿದ್ದು ,ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಸ್ಥಳಿಯರು ಆಕ್ರೋಶ ಹೊರ ಹಾಕಿದ್ದಾರೆ.
ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಮೇಲಿಂದ ಮೇಲೆ ಅಪಘಾತ ಎಂದು ಕಿಡಿಕಾರಿದ್ದಾರೆ.
ಒಂದೇ ಜಾಗದಲ್ಲಿ ವರ್ಷದಲ್ಲಿ 60ಕ್ಕೂ ಹೆಚ್ಚು ಅಪಘಾತ ನಡೆದಿದ್ದರೂ
ಅಧಿಕಾರಿಗಳ ಮೌನಕ್ಕೆ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಪರೀತವಾದ ವೇಗ ಚಾಲನೆ ಪರಿಣಾಮ ಪೊಲೀಸರು ಬ್ಯಾರಿಕೇಡ್ ಹಾಕಿದ್ದರೂಗುದ್ದಿ ಅಪಘಾತವಾಗ್ತಿದೆ.