ಚಿಕ್ಕಮಗಳೂರು: ದಲಿತರ ಕೇರಿಯ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿ ಕಬಳಿಕೆ ಮಾಡಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಯಿತು.
ಉಪ್ಪಳ್ಳಿ ಶಾಂತಿನಗರ ಗ್ರಾಮದ ಸರ್ವೆ ನಂಬರ್ 319 ರಲ್ಲಿ 3 ಎಕರೆ 25 ಗುಂಟೆ ಪ್ರದೇಶವನ್ನು ನಕಲಿ ದಾಖಲೆ ಸೃಷ್ಟಿ, ಖರೀದಿ ಮಾಡಿ ಲೇಔಟ್ ನಿರ್ಮಿಸಲಾಗಿದೆ ಎಂದು ಆರೋಪಿಸಿದರು.
ಲೇಔಟ್ ರದ್ದುಪಡಿಸಿ ಈ ಭಾಗದಲ್ಲಿ ಇರುವ ಭೂ ರಹಿತರಿಗೆ ವಿತರಿಸುವಂತೆ ಒತ್ತಾಯಿಸಿ ವಿವೇಕಾನಂದ ಯುವಕ ಸಂಘದ ಆಶಯದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಆರ್. ರಾಜು ಇದೇ ಗ್ರಾಮದ ಕಸ ನಾಯಕನಹಟ್ಟಿಯ ಸರ್ವೆ ನಂಬರ್ 326 ರಲ್ಲಿಯೂ 2 ಎಕರೆ 38 ಗುಂಟೆ ಜಾಗವನ್ನು ಅತಿಕ್ರಮಿಸಲಾಗಿದೆ ಎಂದು ಆರೋಪಿಸಿದರು.
ಎರಡೂ ಸರ್ವೆ ನಂಬರ್ ಗಳಲ್ಲಿ ನಕಲಿ ದಾಖಲೆ ಸೃಷ್ಟಿಸಿ ಲೇಔಟ್ ನಿರ್ಮಿಸಿದ್ದು ಇದಕ್ಕೆ ಕಾರಣಕರ್ತರಾದ ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.