ಚಿಕ್ಕಮಗಳೂರು ನ್ಯೂಸ್

Chikmgalur News

ಕಾಫಿ ಕಣಜದ ಸುದ್ದಿಜಾಲ

ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ :  ಸಂಚಾರಿ ನಿಯಮ ಉಲ್ಲಂಘನೆ –  ದ್ವಿಚಕ್ರ ವಾಹನ ಚಾಲಕನಿಗೆ 14 ಸಾವಿರ ದಂಡ

Share:

ಚಿಕ್ಕಮಗಳೂರು: ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ , ಹಲವು ಸಂಚಾರಿ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಚಾಲಕನಿಗೆ ಮೂಡಿಗೆರೆ ನ್ಯಾಯಾಲಯ 14 ಸಾವಿರ ದಂಡ ವಿಧಿಸಿದೆ.
ಜೂನ್ 2 ರಂದು ಮೂಡಿಗೆರೆ ಪೊಲೀಸ್ ಠಾಣಾಧಿಕಾರಿ ಶ್ರೀನಾಥ್ ರೆಡ್ಡಿ ತಮ್ಮ ಸಿಬ್ಬಂದಿಯೊಂದಿಗೆ ಪಟ್ಟಣದ ಎಂ.ಜಿ. ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು.
ಹೆಲ್ಮೆಟ್ ಧರಿಸದೇ ಬೈಕ್ ಚಾಲನೆ ಮಾಡುತ್ತಿದ್ದ ರುದ್ರೇಶ್ ನಾಯ್ಕನನ್ನು ತಡೆದು ದಾಖಲೆ ಪರಿಶೀಲಿಸಿದರು. ಹೊಗೆ ತಪಾಸಣೆ , ಡಿ.ಎಲ್. ಸೇರಿದಂತೆ ಬೈಕ್ ಗೆ ಸೂಕ್ತ ದಾಖಲೆ ಹೊಂದಿಲ್ಲದಿರುವುದು ಕಂಡು ಬಂದಿತ್ತು.
ಈ ಹಿನ್ನಲೆಯಲ್ಲಿ ಬೈಕ್ ಸವಾರನ ಮೇಲೆ ಕೇಸು ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮೂಡಿಗೆರೆ ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾದೀಶರು ಬೈಕ್ ಚಾಲಕನಿಗೆ ರೂ. 14 ಸಾವಿರ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ.

Leave a Reply

Your email address will not be published. Required fields are marked *

On Key

Related Posts

ಬಿಜೆಪಿಯಲ್ಲಿ ಮುಂದುವರಿದ ಸಂಘರ್ಷ :  ರಾಜೀನಾಮೆ ವಾಪಸ್ ಪಡೆದ ನಗರಸಭೆ ಅಧ್ಯಕ್ಷರು !!

ಚಿಕ್ಕಮಗಳೂರು: ದಿಡೀರ್ ವಿದ್ಯಮಾನದಲ್ಲಿ ನಗರಸಭೆ ಅಧ್ಯಕ್ಷರು ತಮ್ಮ ರಾಜೀನಾಮೆಯನ್ನು ಹಿಂದಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಪಕ್ಷದ ಆಂತರಿಕ ಒಪ್ಪಂದದಂತೆ ನಗರಸಭೆ ಅಧ್ಯಕ್ಷರು

ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ :  ಸಂಚಾರಿ ನಿಯಮ ಉಲ್ಲಂಘನೆ –  ದ್ವಿಚಕ್ರ ವಾಹನ ಚಾಲಕನಿಗೆ 14 ಸಾವಿರ ದಂಡ

ಚಿಕ್ಕಮಗಳೂರು: ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ , ಹಲವು ಸಂಚಾರಿ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಚಾಲಕನಿಗೆ

ರೈತರ ಸಮಾವೇಶ : ರೈತ–ಅರಣ್ಯ ಇಲಾಖೆ ಸಂಘರ್ಷ ತಪ್ಪಿಸಲು ಒಕ್ಕೊರಲ ಆಗ್ರಹ

ಚಿಕ್ಕಮಗಳೂರು: ಅರಣ್ಯ ಕಾಯ್ದೆಗಳ ಹೆಸರಿನಲ್ಲಿ ಜಿಲ್ಲೆಯ ರೈತರ ಬದುಕನ್ನು ಅರಣ್ಯ ಇಲಾಖೆ ಕಸಿದು ಕೊಳ್ಳುತ್ತಿದ್ದು ಅಂತಹ ಕಾಯ್ದೆಗಳನ್ನು ರದ್ದುಪಡಿಸಬೇಕು, ರೈತರನ್ನು