ಚಿಕ್ಕಮಗಳೂರು : ಸರ್ಕಾರಿ 2 ಬಸ್ಸುಗಳ ಪ್ರತ್ಯೇಕ ಅಪಘಾತ ಪ್ರಕರಣದಲ್ಲಿ ಓರ್ವ ಸಾವನ್ನಪ್ಪಿದ್ದು ಓರ್ವನಿಗೆ ಗಂಭೀರ ಗಾಯ ವಾಗಿದೆ.
ಕಡೂರು ಪಟ್ಟಣ, ಕೊಪ್ಪ ತಾಲೂಕಿನ ಹಿರಿಕೆರೆ ಬಳಿ ಘಟನೆ ನಡೆದಿದೆ.
ಕಡೂರು ಎಪಿಎಂಸಿಗೆ ಬೈಕಿನಲ್ಲಿ ಹೋಗುತ್ತಿದ್ದ ವೇಳೆ ಸರ್ಕಾರಿ ಬಸ್ ಡಿಕ್ಕಿಯಾಗಿ ಹುಸೇನ್ (23) ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಕೊಪ್ಪ ತಾಲೂಕಿನಿಂದ ತರೀಕೆರೆ ಹೋಗುತ್ತಿದ್ದ ಬಸ್ ಕಾರಿಗೆ ಡಿಕ್ಕಿಯಾಗಿ ಕಾರು ಚಾಲಕನಿಗೆ ಗಂಭೀರ ಗಾಯಗಳಾಗಿದ್ದು, ಬಸ್ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ.
ಕಾರಿಗೆ ಡಿಕ್ಕಿಯೊಡೆದು ಲೈಟ್ ಕಂಬಕ್ಕೆ ಸರ್ಕಾರಿ ಬಸ್ ಅಪ್ಪಳಿಸಿದ್ದು,ಬಸ್ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ವಿದ್ಯುತ್ ಲೈನ್ ಫ್ಯೂಸ್ ಕಟ್ ಆಗಿ ಭಾರೀ ಅನಾಹುತ ತಪ್ಪಿದೆ.
ಬಸ್ಸಿನಲ್ಲಿದ್ದ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯ ಆಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
