ಚಿಕ್ಕಮಗಳೂರು : ಭಾರೀ ಗಾಳಿ-ಮಳೆಗೆ ಮನೆ ಮೇಲೆ ಬೃಹತ್ ಮರ ಬಿದ್ದಿದ್ದು, ಮನೆಯಲ್ಲಿದ್ದ ಒಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ.
ಗೃಹಪಯೋಗಿ ವಸ್ತುಗಳು ಸಂಪೂರ್ಣ ನಾಶ ವಾಗಿದ್ದು ಮನೆಯಲ್ಲಿದ್ದವರು ಜಸ್ಟ್ ಮಿಸ್ ಆಗಿದ್ದಾರೆ.
ಮರ ಬೀಳುವ ಶಬ್ಧ ಕೇಳುತ್ತಿದ್ದಂತೆ ಮನೆಯಿಂದ ಮನೆಯವರು ಓಡಿ ಬಂದಿದ್ದಾರೆ.
ಕಳಸ ತಾಲೂಕಿನ ಮರಸಣಿಗೆ ಗ್ರಾಮದಲ್ಲಿ ಘಟನೆ ನಡೆದಿದ್ದು ,ಪ್ರೇಮ ಎಂಬುವರ ಮೇಲೆ ಮರದ ಟೊಂಗೆ ಬಿದ್ದು ಗಾಯ ವಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ತಾಲೂಕು ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
