ಚಿಕ್ಕಮಗಳೂರು : ಜೀಪ್ ಸಮೇತ ಯುವಕ ಭದ್ರಾ ನದಿಗೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ
ಮೂಡಿಗೆರೆ ಶಾಸಕಿ ನಯನ ಮೋಟಮ್ಮ, ಸಂಸದರ ವಿರುದ್ಧ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದೇ ದಿನ, ಒಂದೇ ಮನೆಯಲ್ಲಿ ಇಬ್ಬರು ಸತ್ತಿದ್ದಾರೆ, ಸೌಜನ್ಯಕ್ಕೂ ಯಾರೂ ಬಂದಿಲ್ಲ ಎಂದು ಕಿಡಿಕದಿದ್ದಾರೆ
ನಿನ್ನೆಯಿಂದ ಸಂಜೆಯಿಂದಲೂ ಮೃತದೇಹ ಹುಡುಕುವ ಕಾರ್ಯವನ್ನು ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಮಾಡುತ್ತಿದ್ದಾರೆ
ಸುರಿಯುತ್ತಿರೋ ಮಳೆ ಮಧ್ಯೆಯೇ ಭದ್ರೆಯ ಒಡಲಲ್ಲಿ ಶವಕ್ಕಾಗಿ ನಿರಂತರವಾಗಿ ಶೋಧ ನಡೆಯುತ್ತಿದೆ
ದುಡ್ಡಿದ್ದವರು ಸತ್ರೆ ಬರ್ತಿದ್ರು, ಇವರು ಬಡವರಲ್ವಾ ಏಕೆ ಬರ್ತಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಶ್ರೀಮಂತರ ಮಕ್ಕಳಾಗಿದ್ರೆ ಫ್ಲೈಟ್ ನಲ್ಲಿ ಬಂದು ಶವ ಹುಡಕ್ತಿದ್ರು,ಈಗ ಯಾರೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ
ಭಾರೀ ರಭಸದಿಂದ ಹರಿಯುತ್ತಿರೋ ಭದ್ರೆಯ ಒಡಲಲ್ಲಿ ಶವ ಹುಡುಕೋದು ಸವಾಲಾಗಿದೆ
ಈವರೆಗೂ ಹಿರಿಯ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿಲ್ಲ.
